Ramesh Pandit ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರದ ದೈತ್ಯ ಪ್ರತಿಭೆ ರಮೇಶ್ ಪಂಡಿತ್. ಇಂದವರ ಜನ್ಮದಿನ. ಈ ಪ್ರಯುಕ್ತ ಶುಭಾಶಯಗಳೊಂದಿಗೆ ನಮ್ಮ ನೂತನ ಚಲನಚಿತ್ರ ದಲ್ಲಿ ಪಂಡಿತ್ ಅವರ ಪಾತ್ರದ ನೋಟವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಯಾವ ಪಾತ್ರಕ್ಕಾದರೂ ಜೀವತುಂಬಬಲ್ಲ Ramesh Pandit ಅವರ ಸ್ನೇಹ ನನಗೆ ದೊರಕಿದ್ದು 2008 ರಲ್ಲಿ ಜೀ ಕನ್ನಡ ವಾಹಿನಿಗೆ ನಾನು ನಿರ್ದೇಶಿಸಿದ್ದ ಏಕೆ ಹೀಗೆ ನಮ್ಮ ನಡುವೆ ಸೀರಿಯಲ್ ಮೂಲಕ. ಅದರಲ್ಲಿ ಜಬರ್ದಸ್ತ್ ನೆಗೆಟಿವ್ ಲೀಡ್ ರೋಲ್ ಮಾಡಿದ್ದ ಪಂಡಿತ್ ಜೀ ನನ್ನ ಮಲೆನಾಡ ಸೊಗಡಿನ ಸಂಭಾಷಣೆ ಸ್ವಾದವನ್ನು ಸಂಭ್ರಮಿಸುತ್ತಿದ್ದರು. ಟ್ರಾಕ್ ಬರವಣಿಗೆ ಹಂಚಿಕೊಳ್ಳಲು ಆರಂಭಿಸಿದ ಮೇಲೆ ನನ್ನ ಟ್ರಾಕ್ ನ ಸಂಭಾಷಣೆ ನೀವು ಬರೆಯುವುದಾದರೆ ಮಾತ್ರ ಶೃಂಗೇರಿ ಗೆ ಬರುತ್ತೇನೆ ಎಂದು ಪ್ರೀತಿಯ ತಾಕೀತು ಮಾಡುತ್ತಿದ್ದ ಸಿಂಪಲ್ ಸ್ಟಾರ್ ಇವರು.
ಬಿ ಜಯಶ್ರೀ ಅವರ ಚಿತ್ರಪಟ ರಾಮಾಯಣ ನಾಟಕ ದಲ್ಲಿ ಪಂಡಿತ್ ರ ರಾವಣ ನ ನೋಡಿ ದಿಗ್ಭ್ರಮೆಗೊಂಡವನು ನಾನು.
ಆಕಾಶದ ಎತ್ತರದ ನಗು, ಭೂಮಿ ತೂಕ ದ ಸ್ನೇಹಮಯಿ ವ್ಯಕ್ತಿತ್ವ, ಅಮೋಘ ಸಹಕಾರ, ಸೆಟ್ ನಲ್ಲಿ ಸದಾ ಹಾಸ್ಯ, ಚಿನಕುರಳಿ ಪನ್ ಮತ್ತು ಪಂಚ್ ರಮೇಶ್ ಅವರ ಹೆಚ್ಚುಗಾರಿಕೆ. ಕಳೆದ ವರ್ಷ ಇವರೊಂದಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದ್ದು ಕೂಡಾ ಕಾಕತಾಳಿಯವಾದರೂ ಖುಷಿ ಕೊಟ್ಟ ಸಂಗತಿ.
Ramesh Pandit ನಮ್ಮ ಹೊಸ ಸಿನಿಮಾ ದಲ್ಲಿ ಖಳನಾಯಕನಿಗೆ ಹೊರತಾಗಿ ಒಂದು ವಿಶೇಷ ಹಾಗೂ ಗಟ್ಟಿ ಪಾತ್ರದಲ್ಲಿ ನಟಿಸಿದ್ದಾರೆ.
ಹೀಗಿರತ್ತೆ ನೋಡಿ ರಮೇಶ್ ಪಂಡಿತ್ ಲುಕ್ ಎಂದು ನಿರ್ದೇಶಕ ರಮೇಶ್ ಬೇಗಾರ್ ಕೆ ಲೈವ್ ನ್ಯೂಸ್ ಗೆ ತಮ್ಮ ಪೋಸ್ಟ್ ಹಂಚಿಕೊಂಡಿದ್ದಾರೆ.
