Monday, May 4, 2026
Monday, May 4, 2026

Shimoga Badminton Premier League ಶಿವಮೊಗ್ಗ ಸ್ಮ್ಯಾಶರ್ಸ್ ಪ್ರಿಮೀಯರ್ ಲೀಗ್ ಸೀಸನ್-2 ನಲ್ಲಿ ಆರ್.ಆರ್.ಸ್ಮ್ಯಾಶರ್ಸ್ ಚಾಂಪಿಯನ್ಸ್

Date:

Shimoga Badminton Premier League ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್ 2ರಲ್ಲಿ ಆರ್ ಆರ್ ಸ್ಮಾಶರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರನ್ನರ್ ಅಪ್ ಆಗಿ ಶಿವಮೊಗ್ಗ ಕಾನ್‌ಕ್ವರರ್ಸ್ ತಂಡ ಸ್ಥಾನ ಪಡೆದಿದೆ.

ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್ 2ರಲ್ಲಿ ಪ್ರಮುಖ ಎಂಟು ತಂಡಗಳು ಭಾಗವಹಿಸಿದ್ದವು. ಬೆಳಗ್ಗೆಯಿಂದ ರಾತ್ರಿ 11ರವರೆಗೂ ಕಠಿಣ ಪೈಪೋಟಿಯ ಪಂದ್ಯಗಳು ನಡೆದವು. ಪಂದ್ಯಾವಳಿ ತುಂಬಾ ಯಶಸ್ವಿಯಾಗಲು ಅನೇಕರ ಪರಿಶ್ರಮ ಇದೆ.

ಆರ್ ಆರ್ ಸ್ಮಾಶರ್ಸ್ ತಂಡದ ಮಾಲೀಕ ರಮೇಶ್ ಹಾಗೂ ಶಶಾಂಕ್ ಮಾತನಾಡಿ, ಈ ತರಹದ ಪಂದ್ಯಾವಳಿಗಳಿಂದ ಸ್ಥಳೀಯ ಮಟ್ಟದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ವೇದಿಕೆ ಸಿಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ನೆರವಾಗುತ್ತದೆ ಎಂದು ತಿಳಿಸಿದರು.

Shimoga Badminton Premier League ವಾಸವಿ ಕಾಫಿ ಪಾಂಡುರಂಗ, ಎಸ್‌ಪಿಎಎಸ್ ಕ್ಯಾಟರ್ಸ್ ಮಾಲೀಕ ಚಂದ್ರು, ವಿಸ್ಮಯ ವೆಲ್ನೆಟ್ ಸೆಂಟರ್ ಮಾಲೀಕ ಸೋಮಶೇಖರ್, ಮಾಸ್ಟರ್ ಕನ್ಸಿಸ್ಟೆನ್ಸಿ ಸರ್ವಿಸ್ ಮಾಲೀಕ ಅಮಿತ್, ಬ್ಯಾಂಬೋ ಗಾರ್ಡನ್ ಮಾಲೀಕರಾದ ಪ್ರಶಾಂತ, ರಾವ್ ಅರೆನ ಮಾಲೀಕ ಅರುಣ್ ಮತ್ತು ಆಯೋಜಕ ದೀಪಕ್, ಜೆಕೆಜಿ ಬುಲ್ಸ್ ಮಾಲೀಕ ಗೋಕುಲ್, ಆರ್‌ವಿಡಿ ರಾಕೆಟ್ ರಾಕರ್ಸ್ ಮಾಲೀಕ ರಘುನಂಧನ್ ಹಾಗೂ ರಾಕೇಶ್, ಭದ್ರ ಬ್ಲಾಕ್ ಪಾಂಥರ್ಸ್ ಮಾಲೀಕ ಲೋಕೇಶ್, ಬ್ಯಾಡ್ಮಿಂಟನ್ ವಾರಿಯರ್ಸ್ನ ಮಾಲೀಕ ರಘು, ಟೀಮ್ ಸ್ಮಾಶ್ ಇಟ್ ಮಾಲೀಕ ಪ್ರಶಾಂತ್, ಗುತ್ತಿ ಸ್ಟೈಕರ್ಸ್ ಮಾಲೀಕ ಸಚಿನ್, ಶಿವಮೊಗ್ಗ ಕಾನ್ಕರಸ್ ಮಾಲೀಕ ದರ್ಶನ್ ಹಾಗೂ ಭರತ್ ರೆಡ್ಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...