ಆಗುಂಬೆ ಭಾಗದಲ್ಲಿ ಮತ್ತೊಮ್ಮೆ ಕಾಡಾನೆ ಕಾಣಿಸಿಕೊಂಡಿರುವ ಘಟನೆ ನಡೆದಿದೆ .
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಮಲ್ಲಂದೂರಿನಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ.
ತಡರಾತ್ರಿ ಗದ್ದೆಗೆ ನುಗ್ಗಿದ ಕಾಡಾನೆ ಸಂಪೂರ್ಣ ಬೆಳೆದ ಬೆಳೆ ಹಾಳು ಮಾಡಿದೆ. ಕಾಡಾನೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳುಹರಸಾಹಸ ಪಡುತ್ತಿದ್ದಾರೆ.
ಕಳೆದ ತಿಂಗಳು ಇದೇ ಭಾಗದಲ್ಲಿ ಕಾಡಾನೆ ಕಂಡು ಬಂದಿತ್ತು.
ಮತ್ತೆ ಕಾಡಾನೆ ದಾಳಿಯಿಂದ ಸ್ಥಳೀಯರು ಭಯಭೀತರಾಗಿದ್ದಾರೆ.
