Dr. Dhananjaya Sarji ದೀಪಾವಳಿ ಹಿಂದುಗಳ ಪವಿತ್ರ ಹಬ್ಬ. ದೀಪಗಳ ಹಬ್ಬ ಇದಾಗಿದ್ದು, ಹಸಿರು ಪಟಾಕಿಗಳನ್ನು ಬಳಸೋಣ, ಪಟಾಕಿ ಹಚ್ಚುವ ಸಂದರ್ಭದಲ್ಲಿ ಸುರಕ್ಷತೆಗೆ ಪ್ರಾಮುಖ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಶಿವಮೊಗ್ಗ ನಗರದ ಸವಾರ್‌ಲೈನ್ ರಸ್ತೆಯಲ್ಲಿರುವ ಸಾವಿತ್ರಮ್ಮ ಫೈನಾನ್ಸ್ ನಲ್ಲಿ ಜಿ.ವಿಜಯಕುಮಾರ್ ದಂಪತಿ ದೀಪಾವಳಿ ಹಬ್ಬದ ಎರಡನೇ ದಿನ ನರಕ ಚತುರ್ದಶಿ ಹಾಗೂ ಲಕ್ಷ್ಮೀ ಪೂಜೆ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಾಯುಮಾಲಿನ್ಯ, ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ತಡೆಗಟ್ಟಲು ಹಸಿರು ಪಟಾಕಿಗಳನ್ನು ಕಡ್ಡಾಯವಾಗಿ ಬಳಸಬೇಕು. ಪಾಲಕರು, ಹಿರಿಯರು ಮಕ್ಕಳೊಂದಿಗೆ ಇರಬೇಕು. ಪ್ರತಿ ವರ್ಷ ಪಟಾಕಿಗಳ ದುರಂತದಿಂದ ದೇಶಾದ್ಯಂತ ಅನೇಕರು ಕಣ್ಣುಗಳನ್ನು ಕಳೆದುಕೊಂಡು ಇತರ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಹಬ್ಬಗಳು ನಮ್ಮಲ್ಲಿ ಜೀವನೋತ್ಸಾಹವನ್ನು ಮೂಡಿಸುತ್ತವೆ. ಪರಸ್ಪರಲ್ಲಿ ಪ್ರೀತಿ ವಿಶ್ವಾಸ ವೃದ್ಧಿಗೊಳಿಸುತ್ತವೆ. ನಮ್ಮ ಮನಸ್ಸಿನ ಖಿನ್ನತೆ ದೂರವಾಗುತ್ತದೆ. ನಮ್ಮ ದೇಶ ಹಾಗೂ ನಮ್ಮ ರಾಜ್ಯದಲ್ಲಿ ಇರುವಂತಹ ಹಬ್ಬ ಹಾಗೂ ಸಂಪ್ರದಾಯಗಳು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಸಡಗರದಿಂದ ಹಬ್ಬವನ್ನು ಆಚರಿಸೋಣ ಎಂದು ನುಡಿದರು.
Dr. Dhananjaya Sarji ನಾಲ್ಕು ದಿನಗಳ ಕಾಲ ನಡೆಯುವ ವಿಶೇಷ ಹಬ್ಬ ಎಲ್ಲರಿಗೂ ಸಡಗರ ಸಂಭ್ರಮ ಸಂತೋಷವನ್ನು ತರಲಿ, ಗೋಪೂಜೆಯಲ್ಲಿ ಎಲ್ಲರೂ ಭಾಗಿಯಾಗಿ ಗೋಮಾತೆಯ ಶ್ರೀ ರಕ್ಷೆಯಲ್ಲಿ ಎಲ್ಲರೂ ಭಾಗಿಯಾಗೋಣ ಎಂದರು.
ಕಾಂಗ್ರೆಸ್ ಮುಖಂಡ ಚಿನ್ನಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಕೆ.ರವಿ, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರ್, ಧನಂಜಯಪ್ಪ, ಬಿಂದು ವಿಜಯ ಕುಮಾರ್, ಜಂಗಮ ಸಮಾಜದ ಮುಖಂಡ ಉಮೇಶ್ ಹಿರೇಮಠ ಉಪಸ್ಥಿತರಿದ್ದರು.
