Shree Dodamma Temple ಕೆಎಚ್‌ಬಿ ಪ್ರೆಸ್‌ಕಾಲೋನಿಯ ಶ್ರೀ ದೊಡ್ಡಮ್ಮ ದೇವಾಲಯದಲ್ಲಿ ಅ.31ರಂದು ಬೆಳಗ್ಗೆ 5ಕ್ಕೆ ದುರ್ಗಾ ಮಂತ್ರ ದೀಕ್ಷೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ದುರ್ಗಾದೇವಿಯ ಮಂತ್ರದೀಕ್ಷೆ ಪಡೆಯುವುದು ಪುಣ್ಯದ ಕಾರ್ಯ. ಮಕ್ಕಳು ವಿದ್ಯಾವಂತರಾಗಲು, ಕ್ಷೇಮವಾಗಿರಲು ಹಾಗೂ ದೊಡ್ಡವರು ಸಹ ಸುರಕ್ಷತೆಯಿಂದ ಇರಲು ದುರ್ಗೆಯ ರಕ್ಷಣೆ ಅನಿವಾರ್ಯ.
ದೇವಿ ಉಪಾಸಕರಾದ ಶ್ರೀ ಸಿದ್ದಪ್ಪಾಜೀ ಮಂತ್ರ ದೀಕ್ಷೆ ನೀಡಲಿದ್ದಾರೆ. 15-60 ವರ್ಷದೊಳಗಿನ 100 ಜನರಿಗೆ ಮಾತ್ರ ದೀಕ್ಷೆಗೆ ಅವಕಾಶ. ದೀಕ್ಷೆ ಪಡೆಯುವವರಿಗೆ ಬೆಳಗ್ಗೆ 8ಕ್ಕೆ ಉಪಾಹಾರ ವ್ಯವಸ್ಥೆ ಇರುತ್ತದೆ. ಹೆಸರು ನೋಂದಾಯಿಸಲು ಅ.25 ಕೊನೆಯ ದಿನ. ಹೆಸರು ನೋಂದಾಯಿಸಲು ಅನುರಾಧಾ ಸಿದ್ದಪ್ಪಾಜೀ ಮೊ: 98802 91968, ಕುಮಾರ್ ಮೊ: 88848 69515, ಸತೀಶ್ ಮೊ: 99453 11477, ಗಜೇಂದ್ರ ಮೊ: 9972161461 ಇಲ್ಲಿಗೆ ಸಂಪರ್ಕಿಸಬಹುದು.
