B.Y. Raghavendra ಶಿವಮೊಗ್ಗ, ವಿನೋಬನಗರ ಪೊಲೀಸ್ ಚೌಕಿಯ ಮಹಾನಗರಪಾಲಿಕೆ ವಾಣಿಜ್ಯ ಸಂಕೀರ್ಣದಲ್ಲಿ ವಿಧಾನ ಪರಿಷತ್ ಶಾಸಕರ ಕಚೇರಿಯಲ್ಲಿ ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಬಿ.ವೈ ರಾಘವೇಂದ್ರ ಅವರು ಜಿಲ್ಲೆಯ ಪದವೀಧರ ಯುವಕ ಯುವತಿಯರಿಗೆ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸಿಕೊಡಬೇಕು ಎಂಬ ಆಶಯದೊಂದಿಗೆ ನಿರ್ಮಾಣಮಾಡಿರುವ “ಕಾಯಕ ಸೇತು” ಜಾಬ್ ಪೋರ್ಟಲ್ ಅನ್ನು ಲೋಕಾರ್ಪಣೆಗೊಳಿಸಿದರು.
ವಿಧಾನ ಪರಿಷತ್ ಶಾಸಕರಾಗಿ ಡಾ.ಧನಂಜಯ ಸರ್ಜಿ ಅವರು ಕ್ಷೇತ್ರದಲ್ಲಿ ಸಾಧಿಸಿದ ಕಾರ್ಯಗಳ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿಲಾಯಿತು.
ಶಿವಮೊಗ್ಗ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ “ಕಾಯಕ ಸೇತು” ಎಂಬ ಉಚಿತ ಜಾಬ್ ಪೋರ್ಟಲ್ ನಿರ್ಮಿಸಿ ಉದ್ಯೋಗ ಕಲ್ಪಿಸಿಕೊಡುವ ಮಹತ್ತರವಾದ ಕಾರ್ಯವನ್ನು ವಿಧಾನ ಪರಿಷತ್ ಶಾಸಕರ ಜನಸಂಪರ್ಕ ಕಚೇರಿಯಿಂದ ಮಾಡಲಾಗುತ್ತಿದ್ದು, ಸ್ಥಳೀಯ ಪ್ರತಿಭೆಗಳಿಗೆ ಸ್ಥಳೀಯವಾಗಿ ಉದ್ಯೋಗ ದೊರಕಿಸುವ ಉದ್ದೇಶದಿಂದ ಈ ಪೋರ್ಟಲ್ ನಿರ್ಮಾಣ ಮಾಡಲಾಗಿದೆ.
ವಿಶೇಷವಾದ ಈ ಪ್ರಯತ್ನವು ಉದ್ಯೋಗ ನೀಡುವವರಿಗೂ ಉದ್ಯೋಗ ಬಯಸುವವರಿಗೂ ಉಚಿತವಾಗಿರಲಿದೆ.
B.Y. Raghavendra ಈ ಕಾರ್ಯಕ್ರಮದಲ್ಲಿ ಪಟ್ಟಾಭಿ ಜೀ ಅವರು, ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್ ಚನ್ನಬಸಪ್ಪ ಅವರು, ವಿಧಾನ ಪರಿಷತ್ ಶಾಸಕರಾದ ಡಿ.ಎಸ್ ಅರುಣ್ ಅವರು, ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕರಾದ ಎಸ್.ದತ್ತಾತ್ರಿ ಅವರು, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಜಗದೀಶ್ ಅವರು, ಸ್ಥಳೀಯ ಬಿಜೆಪಿ ಮುಖಂಡರು, ಮಹಾಶಕ್ತಿಕೇಂದ್ರದ ಪ್ರಮುಖರು, ಕಾರ್ಯಕರ್ತರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
