B.Y.Raghavendra ಕಳೆದ ಒಂದು ವಾರದಿಂದ ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಆರ್ ಎಸ್ ಎಸ್ ನಿರ್ಬಂಧ ಹೇರುವ ಕೆಲಸ ಮಾಡುತ್ತಿದೆ. ಹಿಂದೆ ಇದನ್ನು ಜಗದೀಶ್ ಶೆಟ್ಟರ್ ರವರು ಮಾಡಿದ್ರು ಅಂತ ಸಿಎಂ ರವರು ಹೇಳಿದ್ದಾರೆಂಮ ಚಿತ್ತಾಪುರದಲ್ಲಿ ಅನುಮತಿಗೆ ತಿರುಗಾಡಿಸಲಾಗುತ್ತಿದೆ. ಆರ್ ಎಸ್ ಎಸ್ ನ ಆಸ್ತಿ ಪರಿಶೀಲನೆ ಮಾಡಿಸುವ ಕೆಲಸ ಮಾಡಲಾಗುತ್ತಿದೆ .
ಇದು ಕಾಂಗ್ರೆಸ್ ನ ಅಧಃ ಪತನಕ್ಕೆ ಕಾರಣವಾಗುತ್ತದೆ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.
ಪ್ರಿಯಾಂಕ ಖರ್ಗೆ ತಮ್ಮ ಸ್ಥಾನ ಉಳಿಸಿಕೊಳ್ಳಲು, ಹರಿಪ್ರಸಾದ್ ಮಂತ್ರಿಸ್ಥಾನ ಪಡೆಯಲು ಹೈ ಕಮಾಂಡ್ ಮೆಚ್ಚುಗೆ ಪಡೆಯಲು ಹೀಗೆ ಮಾತನಾಡುತ್ತಿದ್ದಾರೆ.
ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬೆಂಕಿ ಹಾಕಿದವರ ಪ್ರಕರಣವನ್ನು ಸಚಿವ ಸಂಪುಟದಲ್ಲಿ ರದ್ದು ಮಾಡುತ್ತಾರೆ. ಆರ್ ಎಸ್ ಎಸ್ ಗೆ ಬಂದಂತಹವರಿಗೆ ಅಮಾನತು ಮಾಡುವ ಹಾಗೆ ಆರ್ ಎಸ್ ಎಸ್ ದಂಡ ಹಿಡಿದವರನ್ನು ಹೆದರಿಸಲು ಹೊರಟಿದ್ದಾರೆ
ಆರ್ ಎಸ್ ಎಸ್ ಕಾರ್ಯಕರ್ತರು ತಮ್ಮ ಮನೆಯ ಅನ್ನ ತಿಂದು ದೇಶದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
B.Y.Raghavendra ಇವರಿಗೆ ರಸ್ತೆ ಗುಂಡಿ ಮುಚ್ಚಲು ಆಗುತ್ತಿಲ್ಲ. ಖಾಸಗಿಯವರು ಗುಂಡಿ ಮುಚ್ಚುತ್ತೇವೆ ಎಂದ್ರೆ ಮಂತ್ರಿಗಳು ಸ್ವಾಗತ ಎನ್ನುತ್ತಾರೆ ಎಂದು ಸಂಸದ ರಾಘವೇಂದ್ರ ರಾಜ್ಯ ಸರ್ಕಾರದ ಮೇಲೆ ಟೀಕಾ ಪ್ರಹಾರ ಮಾಡಿ ಮಾತನಾಡಿದರು.
