Shri Gangadharendra Saraswati Mahaswami ಶ್ರೀ ಭಗವದ್ಗೀತಾ ಅಭಿಯಾನ-ಕರ್ನಾಟಕ ಇದರ 2025ರ ಕಾರ್ಯಕ್ರಮವು ಅ.25ರಂದು ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉದ್ಘಾಟನಾ ಸಮಾರಂಭವು ನಡೆಯಲಿದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧೀಶರಾದ ಜಗದ್ಗುರು ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ತಿಳಿಸಿದರು.
ಅವರು ರವೀಂದ್ರನಗರದ ಶ್ರೀ ಗಣಪತಿ ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಮತ್ತು ಸ್ವರ್ಣರಶ್ಮೀ ಟ್ರಸ್ಟ್ನ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಈ ಅಭಿಯಾನವು ನಡೆಯುತ್ತಿದ್ದು, ಭಗವದ್ಗೀತೆ ಅಭಿಯಾನದ ಉದ್ಘಾಟನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವ್ಯಕ್ತಿತ್ವ ವಿಕಸನ ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸುವುದೇ ಈ ಭಗವದ್ಗೀತಾ ಅಭಿಯಾನದ ಮೂಲ ಉದ್ದೇಶ ಈ ಅಭಿಯಾನವು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿಯೂ ನಡೆಯುತ್ತಿದ್ದು, ಸುಶ್ರಾವ್ಯ ಧ್ವನಿಯಲ್ಲಿ ಭಗವದ್ಗೀತೆಯ 11ನೇ ಅಧ್ಯಾಯದ ಶ್ಲೋಕಗಳನ್ನು ಶಾಲೆಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ವಿವಿಧ ಶ್ಲೋಕ ಕೇಂದ್ರಗಳಲ್ಲಿ ನಡೆಸಿಕೊಡಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯ 157 ಸ್ಥಳಗಳಲ್ಲಿ, ರಾಜ್ಯದ ಇತರ 337 ಸ್ಥಳಗಳಲ್ಲಿ ಏಕಕಾಲದಲ್ಲಿ ಉದ್ಘಾಟನಾ ಸಮಾರಂಭವು ನಡೆಯಲಿದೆ. ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದಲ್ಲಿ ಅ.25ರಂದು ಮಧ್ಯಾಹ್ನ 3 ಗಂಟೆಗೆ ಅಭಿಯಾನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸ್ವರ್ಣವಲ್ಲಿ ಮಹಾಸಂಸ್ಥಾನದ ಜಗದ್ಗುರು ಶ್ರೀಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಪ್ರಸನ್ನನಾಥ ಸ್ವಾಮಿಗಳು, ಶ್ರೀ ಬಸವ ಕೇಂದ್ರದ ಡಾ.ಬಸವಮರುಳಸಿದ್ಧ ಸ್ವಾಮಿಗಳ ದಿವ್ಯ ಉಪಸ್ಥಿತಿ ಇರಲಿದೆ. ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಜಿ ಉಪಮುಖ್ಯಮಂತ್ರಿ ಹಾಗೂ ಭಗವದ್ಗೀತಾ ಅಭಿಯಾನದ ಗೌರವಾಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ, ಅಧ್ಯಕ್ಷತೆ ವಹಿಸುವರು. ಸಂಸ್ಕೃತ ವಿದ್ವಾಂಸ ಹಾಗೂ ವೇದಾಂತ ಚಿಂತಕರಾದ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರು, ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷರಾದ ಶಾಸಕ ಡಿ.ಎಸ್. ಅರುಣ್ ಉಪಸ್ಥಿತರಿರುವರು ಎಂದು ತಿಳಿಸಿದರು.
Shri Gangadharendra Saraswati Mahaswami ರಾಜ್ಯದ ಧಾರಾವಾಡದಲ್ಲಿ-13, ಬೆಳಗಾವಿ-೨೫, ಉತ್ತರಕನ್ನಡ-೨೧, ಹಾವೇರಿ-೧೮, ದಾವಣಗೆರೆ-೦೮, ಚಿತ್ರದುರ್ಗ-೧೪, ತುಮಕೂರು-೦೯, ಮಂಡ್ಯ-೦೮, ಹಾಸನ-೦೬, ಮಂಗಳೂರು-೦೯, ಶಿವಮೊಗ್ಗ-೨೦, ಉಡುಪಿ-೧೨, ಮೈಸೂರು-೦೭, ಚಾಮರಾಜ ನಗರ-೦೫, ವಿಜಯನಗರ-೪, ಕೋಲಾರ-೪, ರಾಮನಗರ-೨, ಚಿಕ್ಕಬಳ್ಳಾಪುರ-೭, ಬೆಂಗಳೂರು ಗ್ರಾಮಾಂತರ-೧೨, ಕೊಡಗು-೪, ಚಿಕ್ಕಮಗಳೂರು-೬, ಬೆಂಗಳೂರು-೮, ಬೀದರ್-೫, ಕಲ್ಬುರ್ಗಿ-೮, ವಿಜಯಪುರ-೧೨, ಬಾಗಲಕೋಟೆ-೭, ರಾಯಚೂರು-೪, ಬಳ್ಳಾರಿ-೨೨, ಕೊಪ್ಪಳ-೫, ಯಾದಗಿರಿ-೧೮, ಗದಗ್-೧೪ ಕೇಂದ್ರಗಳಲ್ಲಿ ಈಗಾಗಲೇ ಭಗವದ್ಗೀತಾ ಅಭಿಯಾನ ಕಲಿಕಾ ಕೇಂದ್ರ ಆರಂಭವಾಗಿದೆ. ಭಗವದ್ಗೀತೆಯ ೧೧ನೇ ಅಧ್ಯಾಯ ಕಲಿಸಿಕೊಡಲು ಪ್ರಶಿಕ್ಷಕರಿಗೆ ತರಬೇತಿ ಕೊಡಲಾಗಿದೆ.
ನ.೧೮ರಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ಎಂಬ ನೂತನ ವಿಚಾರ ಸಂಕಿರಣ ನಡೆಯಲಿದೆ. ಮನಶಾಸ್ತç, ಕ್ರಿಮಿನಾಲಜಿ, ಭಗವದ್ಗೀತೆಯ ಪ್ರಾಚೀನ ಪದ್ಧತಿಯ ಯೋಗಪದ್ಧತಿ, ಮೊದಲಾದ ವಿಷಯಗಳ ಬಗ್ಗೆ ಇಡೀ ದಿನ ಪ್ರಬಂಧ ಮಂಡನೆಯಾಗಲಿದೆ. ವಿಚಾರ ಸಂಕಿರಣವನ್ನು ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಹೆಚ್. ಬಿಲ್ಲಪ್ಪ, ಬೆಕ್ಕಿನಕಲ್ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ, ಮಹಾಸ್ವಾಮಿಗಳು, ವಿ.ವಿ. ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಉದ್ಘಾಟಿಸುವರು. ವಿಶೇಷ ಉಪನ್ಯಾಸಕರಾಗಿ ಡಾ.ಕೆ.ಆರ್. ಶ್ರೀಧರ್, ಡಾ.ರಾಮಚಂದ್ರ ಕೋಟೆಮನೆ, ವಿಕ್ರಂ ಫಡ್ಕೆ, ರಾಮಕೃಷ್ಣ ಮುದ್ದೆಪಾಲು, ಆಗಮಿಸಲಿದ್ದಾರೆ ಎಂದರು.
ನ.30ರಂದು ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಭಗವದ್ಗೀತೆ ಅಭಿಯಾನದ ರಾಜ್ಯಮಟ್ಟದ ಮಹಾ ಸಮರ್ಪಣೆ ಸಮಾರಂಭ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಗೌರವಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಕಾರ್ಯಾಧ್ಯಕ್ಷ ಅಶೋಕ್ ಜಿ. ಭಟ್, ಪ್ರಮುಖರಾದ ಲಕ್ಷ್ಮೀನಾರಾಯಣಸ್ವಾಮಿ, ಪಿ.ಪಿ. ಹೆಗಡೆ, ಟಿ.ಆರ್. ಅಶ್ವತ್ಥನಾರಾಯಣಶೆಟ್ಟಿ, ಟಿ.ಜೆ. ಲಕ್ಷ್ಮೀನಾರಾಯಣಸ್ವಾಮಿ, ಡಾ.ಬಾಲಕೃಷ್ಣ ಹೆಗಡೆ, ಮಂಜುನಾಥ್ ಶರ್ಮ ಮೊದಲಾದವರಿದ್ದರು.
Shri Gangadharendra Saraswati Mahaswami ಶ್ರೀ ಭಗವದ್ಗೀತಾ ಅಭಿಯಾನ-ಕರ್ನಾಟಕ ಇದರ 2025ರ ಕಾರ್ಯಕ್ರಮ
Date:
