District Legal Services Authority ಅಂಗನವಾಡಿಯ ಕಾರ್ಯಕರ್ತರು ತಾಯಿ ಸ್ವರೂಪರಾಗಿದ್ದು, ಅಂಗನವಾಡಿಯಲ್ಲಿ ಮಗುವಿನ ಪಾಲನೆ ಮತ್ತು ಪೋಷಣೆ ಮಾಡುವ ಮೂಲಕ ಮಾತೃ ವಾತ್ಸಲ್ಯ ನೀಡುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಸಂತೋಷ್ ಎಂ.ಎಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಡಿಆರ್‌ಎ ಸಭಾ ಭವನದಲ್ಲಿ ಆಯೋಜಿಸಿದ್ದ “ ಜಿಲ್ಲಾ ಮಟ್ಟದ ಪೋಷಣ್ ಮಾಸಾಚರಣೆ ” ಮತ್ತು “ಬೇಟಿ ಬಚಾವೋ ಬೇಟಿ ಪಡಾವೋ” ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಸಮಾಜದಲ್ಲಿ ಶಾಂತಿ ಮತ್ತು ಅಭಿವೃದ್ದಿ ಕಾಪಾಡಲು ಈ ಇಲಾಖೆ ಬಹಳಷ್ಟು ಶ್ರಮಿಸುತ್ತಿದ್ದು, ಇದ್ದಕ್ಕಾಗಿ ಅಂಗನವಾಡಿ ಕಾರ್ಯಕರ್ತರು ಸೈನಿಕರಂತೆ ಸೇವೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯನ್ನು ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಇನ್ನಷ್ಟು ಕಾರ್ಯವನ್ನು ಮಾಡಬೇಕಿದೆ ಎಂದು ತಿಳಿಸಿದರು.
District Legal Services Authority ಮಗುವಿಗೆ ಶೋಷಣೆ ಆಗಬಾರದು ಹಾಗೂ ಪಾಲನೆಯಲ್ಲಿ ಯಾವುದೇ ಕೊರತೆ ಉಂಟಾಗಬಾರದೆAಬ ಉದ್ದೇಶದಿಂದ ಈ ಇಲಾಖೆ ಸ್ಥಾಪನೆ ಮಾಡಲಾಗಿದ್ದು, ಪ್ರತಿದಿನವೂ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಈ ಮೂಲಕ ಮಗುವಿನ ಲಾಲನೆ, ಪಾಲನೆ ಮಾಡುತ್ತಾ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತರು ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ತಡೆಗಟ್ಟುವಲ್ಲಿ, ಆ ಬಗ್ಗೆ ಜಾಗೃತಿ ಮೂಡಿಸಲು ಕೂಡ ಬಹುಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದರು.
ಮಗುವನ್ನು ಮಾತ್ರವಲ್ಲದೆ, ಅಂಗನವಾಡಿಯು ಶುಚಿತ್ವವಾಗಿ ಇರಬೇಕು ಹಾಗೂ ಅದರ ಸುತ್ತಮುತ್ತಲಿನ ವಾತಾವರಣದಲ್ಲಿ ಶುಚಿತ್ವ ಕಾಪಾಡಬೇಕು. ಅದಕ್ಕೆ ಸಮಾಜದಲ್ಲಿನ ನಾಗರೀಕರು ಹಾಗೂ ಸ್ಥಳೀಯ ಸಂಸ್ಥೆಗಳು ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಆಗ ಮಾತ್ರ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಭ್ರೂ ಹತ್ಯೆ, ವರದಕ್ಷಿಣೆ ಕಿರಕುಳ, ಕೌಟುಂಬಿಕ ದೌರ್ಜನ್ಯ ಎಂಬ ಅನಿಷ್ಟ ಪದ್ದತಿಗಳು ಒಳಗೊಂಡಿದ್ದವು. ಆದರೆ ಸಂವಿಧಾನ ಇವೆಲ್ಲವನ್ನು ಅಪರಾಧ ಪ್ರಕರಣಗಳೆಂದು ಪರಿಗಣಿಸಿ ಅದನ್ನು ಅನುಸರಿಸುವವರಿಗೆ ಶಿಕ್ಷೆ ನೀಡಲು ಕಾಯ್ದೆ ತಂದಿದೆ. ಇದರ ಜೊತೆಗೆ ಹೆಣ್ಣಿಗೂ ಆಸ್ತಿಯಲ್ಲಿ ಹಕ್ಕಿದೆ ಎಂಬ ಕಾನೂನನ್ನು ಜಾರಿ ಮಾಡಿದೆ ಎಂದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಮಲ್ಲಪ್ಪ ಓ. ಮಾತನಾಡಿ, ಇದು ಸರ್ಕಾರದ ಮಹಾತ್ವಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಬೆನ್ನೆಲುಬು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೇವೆಯನ್ನು ಸಲ್ಲಿಸಿರುವ ಇವರು ಆರೋಗ್ಯದ ಹೋರಾಟಗಾರರು, ಜೀವ ರಕ್ಷಕರು ಹಾಗೂ ಪ್ರತಿ ಸಮುದಾಯಗಳ ಆಶಾಕಿರಣರಾಗಿದ್ದಾರೆ ಎಂದರು.
ಜಿಲ್ಲೆಯಾಗುವ ತಾಯಿ ಹಾಗೂ ಮಕ್ಕಳ ಮರಣವನ್ನು ತಡೆಗಟ್ಟುವಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಕೆಲಸ ಮಾಡಬೇಕು. ರಾಜ್ಯದಲ್ಲಿ 59 ತಾಯಂದಿರ ಮರಣ ಪ್ರಕರಣ ದಾಖಲಾಗಿದ್ದು, ಇದನ್ನು ತಡೆಗಟ್ಟುವ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ. ಆ ನಿಟ್ಟಿನಲ್ಲೇ ವೈದ್ಯಕೀಯ ತುರ್ತು ಸೇವೆ, ಚಿಕಿತ್ಸೆ ಸಕಲರಣಗಳನ್ನು ಈ ಯೋಜನೆಯಿಂದ ಒದಗಿಸಲಾಗುತ್ತಿದೆ. ಅದರಂತೆ ಆಸ್ಪತ್ರೆಯಲ್ಲಿ ಹೆರಿಗೆ ಆಗಬೇಕು. ಪ್ರಸವದಿಂದ ಹೆಚ್ಚು ರಕ್ತಸ್ರಾವ ಉಂಟಾಗುತ್ತಿದ್ದರೆ ಅದರ ಬಗ್ಗೆ ಜಾಗೃತಿ ಮೂಡಿಸಬೇಕು. ಗಂಡಾAತರ ಗರ್ಭಿಣಿಯರನ್ನು ಗುರುತಿಸಿ ಅವರನ್ನು ಹಾರೈಕೆ ಮಾಡಬೇಕು. ಗಭಿರ್ಣಿಯರನ್ನು ಇಲಾಖೆ ಅಡಿಯಲ್ಲಿ ನೋಂದಾಯಿಸಬೇಕು. ಅವರುಗಳ ತಪಾಸಣೆ, ಚಿಕಿತ್ಸೆ ಕುರಿತು ಪರಿಶೀಲನೆ ಮಾಡಬೇಕು ಎಂದರು.
ರಾಜ್ಯದಲ್ಲಿ ಶೇ.47 ರಷ್ಟು ತಾಯಂದಿರು ಹಾಗೂ ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದು, ಗರ್ಭಿಣಿಯರ ದೇಹದಲ್ಲಿ ಹೆಚ್.ಬಿ. ಮಟ್ಟ 11 ಕ್ಕಿಂತ ಹೆಚ್ಚು ಹೊಂದಿರಬೇಕು. ರಾಜ್ಯದಲ್ಲಿ ಶೇ.98 ರಷ್ಟು ಮಗುಗಳಿಗೆ ಜನಿಸಿದ 1 ಗಂಟೆವರೆಗೂ ಎದೆ ಹಾಲು ಸಿಗುತ್ತಿದೆ. ಇದು ಶೇ.100 ರಷ್ಟು ಆಗಬೇಕು ಆ ನಿಟ್ಟಿನಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಶ್ರಮ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಆರ್.ಬಣಕಾರ್ ಪ್ರಸ್ತಾವಿಕವಾಗಿ ಮಾತನಾಡಿದರು.
District Legal Services Authority ಈ ವೇಳೆ ಬಾಲ ನ್ಯಾಯಮಂಡಳಿ ಹಾಗೂ ಮನೋರೋಗ ತಜ್ಞರಾದ ಡಾ.ಪವಿತ್ರ ಕೆ.ಎಸ್ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್.ಆರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಂಗಾಬಾಯಿ.ಸಿ, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.
District Legal Services Authority ಅಂಗನವಾಡಿಯ ಕಾರ್ಯಕರ್ತರು ತಾಯಿ ಸ್ವರೂಪರು: ಸಂತೋಷ್.ಎಂ.ಎಸ್
Date:
