Friday, December 5, 2025
Friday, December 5, 2025

Kuvempu University ಸೃಜನಶೀಲತೆಯನ್ನು ಬಳಸಿಕೊಂಡಾಗ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ : ಪ್ರೊ. ಕೆ ವಸಂತ್ ಕುಮಾರ್ ಪೈ

Date:

Kuvempu University ಮಕ್ಕಳಿಗೆ ಯಾವುದೇ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ ಹೇಗೆ ಏಕೆ ಏನು ಎಂಬ ಪ್ರಶ್ನೆಗಳನ್ನು ಮೂಡುವಂತೆ ಮಾಡುವುದು ಉತ್ತಮ. ಇದರಿಂದ ಆ ಮಕ್ಕಳಲ್ಲಿ ವಿಷಯದ ಆಳವಾದ ಜ್ಞಾನ ಮೂಡಲು ಸಾಧ್ಯ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ. ಕೆ ವಸಂತ್ ಕುಮಾರ್ ಪೈ ತಿಳಿಸಿದರು.
ಶ್ರಮ, ಶ್ರದ್ಧೆ, ಕಠಿಣ ಪರಿಶ್ರಮ ಬದುಕಿನಲ್ಲಿ ಎಲ್ಲರನ್ನೂ ದೃಢವಾಗಿ ನಿಲ್ಲುವಂತೆ ಮಾಡುತ್ತದೆ. ಸೃಜನಶೀಲತೆಯನ್ನು ಬಳಸಿಕೊಂಡಾಗ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಅವರು ಇಂದು ಬೆಳಿಗ್ಗೆ ಶಿವಮೊಗ್ಗ ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನದಲ್ಲಿ ಆರಂಭಗೊಂಡ ಜ್ಞಾನ ವಿಜ್ಞಾನ ಹಾಗೂ ಸೃಜನಶೀಲ ದಿನಾಚರಣೆಯನ್ನು ಉದ್ಘಾಟಿಸಿ ತಿಳಿಸಿದರು.
ನಾವು ನೋಡುವಂತೆ ವಸ್ತುಗಳನ್ನು ನಮ್ಮ ಆಲೋಚನೆಗೆ ತಕ್ಕಂತೆ ಬಳಸಿಕೊಳ್ಳಬೇಕು ಎಂಬುದಕ್ಕೆ ಉದಾಹರಣೆ ಸಹಿತ ಕಥೆಯೊಂದನ್ನು ಹೇಳಿದ ಅವರು ಮಾತೃ ವಾತ್ಸಲ್ಯದ ಕುರಿತು ಮಾತನಾಡಿದರು.
ಹಿಂದಿನ ಎಲ್ಲಾ ಸಂಶೋಧನೆಗಳು ಏಕಾಏಕಿ ಆದಂತಹವು. ಆ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಸಂಶೋಧನೆ Kuvempu University ಕೈಗೊಂಡಿರುವುದನ್ನು ನಾವು ನೋಡಿದ್ದೇವೆ. ನಮ್ಮ ಹಿರಿಯ ವಿಜ್ಞಾನಿಗಳ ಸಂಶೋಧನೆ ಮತ್ತು ಜೀವನ ಶೈಲಿ ಮಕ್ಕಳಿಗೆ ಸ್ಪೂರ್ತಿ ತರುವಂತಹ ಪ್ರಯತ್ನವನ್ನು ಶಿಕ್ಷಕರು ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ವಿದ್ಯಾನಿಕೇತನದ ಅಧ್ಯಕ್ಷ ಡಾ ಡಿ ಆರ್ ನಾಗೇಶ್ ಅವರು ಮಕ್ಕಳ ಚಟುವಟಿಕೆಗಳನ್ನು ಹಾಗೂ ಪ್ರದರ್ಶನಗಳನ್ನು ಪ್ರಶಂಸಿದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾ ವೆಂಕಟರಮಣ, ಮುಖ್ಯ ಶಿಕ್ಷಕರು ಸೇರಿದಂತೆ ಶಿಕ್ಷಕ ವೃಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.
ರಾಮಕೃಷ್ಣ ವಿದ್ಯಾನಿಕೇತನದ ಎಲ್ ಕೆ ಜಿ ಇಂದ ಎಸ್ ಎಸ್ ಎಲ್ ಸಿ ವರೆಗಿನ ಎಲ್ಲಾ ವಿದ್ಯಾರ್ಥಿಗಳು 6,000 ಹೆಚ್ಚು ಭಾಷಾವಾರು ಪ್ರದರ್ಶನಗಳನ್ನು ಪ್ರದರ್ಶಿಸಿದರು, ಹಾಗೂ ವಿವರಣೆ ನೀಡುತ್ತಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...