Friday, December 5, 2025
Friday, December 5, 2025

ಹಿಂದೂ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯನೀಯ ಸ್ಥಾನವಿದ್ದು, ಗೋ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ : ರಾಜೇಶ್ ಗೌಡ

Date:

ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯನೀಯ ಸ್ಥಾನವಿದ್ದು, ಗೋ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಪ್ರಸ್ತುತ ದಿನಗಳಲ್ಲಿ ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಿ ರಕ್ಷಣೆಗೆ ಹೋದರೂ ಸರ್ಕಾರ ಅದನ್ನು ಅಪರಾಧ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಬಜರಂಗದಳದ ವಿಭಾಗೀಯ ಸಂಚಾಲಕ ರಾಜೇಶ್ ಗೌಡ ಆರೋಪಿಸಿದರು.
ಸೊರಬ ಪಟ್ಟಣದಲ್ಲಿ ಗೋವು ಕಳ್ಳತನ ವಿರೋಧಿಸಿ, ಗೋ ರಕ್ಷಣೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆ, ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳಿAದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗೋವನ್ನು ಐದು ಕಾರಣಗಳಿಂದ ರಕ್ಷಿಸಬೇಕಿದೆ. ಮೊದಲನೆಯದಾಗಿ ಮಾನವೀಯ ದೃಷ್ಟಿ, ನಮಗೆ ಬೇಕಾದ್ದನ್ನೆಲ್ಲಾ ನೀಡುವ ಗೋವನ್ನು ಮಾನವೀಯ ದೃಷ್ಟಿಯಿಂದ ರಕ್ಷಿಸಬೇಕಿದೆ. ಎರಡನೆಯದು ಹಿಂದೂ ಧಾರ್ಮಿಕ ದೃಷ್ಟಿ, ಮುಕ್ಕೋಟಿ ದೇವತೆಗಳ ಆವಾಸಸ್ಥಾನ ಗೋವು. ಮೂರನೆಯದು ಆರ್ಥಿಕ ದೃಷ್ಟಿ, ಕೃಷಿ ಮತ್ತು ಹೈನುಗಾರಿಕೆ ಮೂಲಕ ನೆರವಾಗುತ್ತದೆ. ನಾಲ್ಕನೆಯದು ಆರೋಗ್ಯ ದೃಷ್ಟಿ, ಬಳಸುವ ಗೋವಿನ ವಸ್ತುಗಳೆಲ್ಲಾ ಆರೋಗ್ಯಕ್ಕೆ ಉಪಯೋಗವಂತಹವು. ಮುಖ್ಯವಾಗಿ ಐದನೇಯದ್ದು ಸಂವಿಧಾನ ದೃಷ್ಟಿ, ಗೋವು ಸಂರಕ್ಷಣೆ ಮಾಡಬೇಕು ಎಂದು ಸಂವಿಧಾನದಲ್ಲೇ ಇದೆ. ಸಂವಿಧಾನವನ್ನು ಗೌರವಿಸುವ ಮೂಲಕ ಗೋ ಸಂರಕ್ಷಿಸುವ ಕಾರ್ಯವಾಗಬೇಕು ಎಂದರು.
ಪಟ್ಟಣದಲ್ಲಿ ಇತ್ತೀಚೆಗೆ ಗೋವುಗಳ ಕಳ್ಳತನ, ರಸ್ತೆ ಬದಿಯಲ್ಲಿರುವ ಗೋವುಗಳ ಮೇಲೆ ವಾಹನಗಳನ್ನು ಚಲಾಯಿಸುವುದು. ಅವುಗಳನ್ನು ಊನ ಮಾಡುವ ಪೈಶಾಚಿಕ ಕೃತ್ಯಗಳು ನಡೆಯುತ್ತಿದೆ. ಗೋವು ಉಳಿದರೆ ಮಾತ್ರ ಮನುಕುಲದ ಉಳಿವು ಸಾಧ್ಯ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ ಗೋ ಹತ್ಯೆಯಂತಹ ಪ್ರಕರಣಗಳು ನಡೆಯುತ್ತಿದೆ. ಗೋವುಗಳ ರಕ್ಷಣೆ ಸ್ಥಳೀಯ ಆಡಳಿತದ ಹೊಣೆಯಾಗಿದ್ದು, ಬಿಡಾಡಿ ದನಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಗ್ರಾಮದಲ್ಲೂ ಗೋಶಾಲೆ ತೆರೆದು ನಡೆಸುವ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ದೆಹಲಿಯ ಭಾರತ ಜ್ಯೋತಿ ಪ್ರಶಸ್ತಿ ಪುರಸ್ಕೃತ ಜೆ.ಎಸ್. ಚಿದಾನಂದಗೌಡ ಮಾತನಾಡಿ, ಗೋವು ಮತ್ತು ನಾವು ಎಂಬುದರ ಕುರಿತು ಭಾವದ ಕೊಂಡಿ ಇದೆ. ಗೋಮಾಳಗಳು ಉಳಿದರೆ ಮಾತ್ರ ಗ್ರಾಮೀಣ ಪ್ರದೇಶದಲ್ಲಿ ಗೋವುಗಳನ್ನು ಉಳಿಸಲು ಸಾಧ್ಯ. ಬ್ರಿಟೀಷರು ದೇಶವನ್ನು ಆಳುವ ಸಂದರ್ಭದಲ್ಲಿಯೇ ಗೋವುಗಳಿಗೆ ಗೋಮಾಳವನ್ನು ಮೀಸಲಿಟ್ಟಿದ್ದರು. ಇಂದು ಗೋಮಾಳಗಳೇ ಇಲ್ಲದಂತಾಗುತ್ತಿದೆ. ದೇಶೀಯ ಗೋ ತಳಿಗಳ ಹಾಲು, ಮೊಸರು, ತುಪ್ಪ, ಗೋಮೂತ್ರ ಸೇರಿದಂತೆ ಪಂಚಗವ್ಯದಲ್ಲಿ ಔಷಧೀಯ ಗುಣವಿದೆ. ದೇಶಿಯ ಗೋವುಗಳ ರಕ್ಷಣೆ ಸರ್ಕಾರ ಮುಂದಾಗಬೇಕು. ಬಿಡಾಡಿದನಗಳಿಂದ ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸಲು ಗೋಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮುಖ್ಯರಸ್ತೆ ಮಾರ್ಗವಾಗಿ ತಹಶೀಲ್ದಾರ್ ಕಚೇರಿವರೆಗೆ ನಡೆಯಿತು. ನಂತರ ತಾಲೂಕು ಶಿರಸ್ತೆದಾರ್ ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಆರ್‌ಎಸ್‌ಎಸ್ ತಾಲೂಕು ಕಾರ್ಯವಾಹ ನಾಗರಾಜ ಗುತ್ತಿ, ಪುರಸಭೆ ಸದಸ್ಯ ಮಧುರಾಯ್ ಜಿ. ಶೇಟ್, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಎಚ್.ಎಲ್. ಚಂದನ್, ಬಜರಂಗದಳ ಜಿಲ್ಲಾ ಸಹ ಸಂಯೋಜಕ್ ಬಿ. ಶಶಿಕುಮಾರ್, ವಿಹಿಂಪ ತಾಲೂಕು ಅಧ್ಯಕ್ಷ ಜೆ. ನಿರಂಜನ್, ಕಾರ್ಯದರ್ಶಿ ಸಾಥ್ವಿಕ್, ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹ ಸಂಯೋಕ್ ಲೋಕೇಶ್ ಕಕ್ಕರಸಿ, ಬಜರಂಗದಳ ಪ್ರಮುಖರಾದ ಉಮಾಶಂಕರ, ಪ್ರಜ್ವಲ್, ನಂದನ್, ಆನಂದ, ವೀರೇಶ್, ವಿನಾಯಕ, ಜಿಪ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಎಂ.ಕೆ. ಯೋಗೇಶ್ ವಕೀಲ, ವಿಜೇಂದ್ರಗೌಡ ತಲಗುಂದ, ಸಂಜೀವ ಆಚಾರಿ, ರಂಗನಾಥ ಮೊಗವೀರ್, ಮೋಹನ್ ಹಿರೇಶಕುನ, ವೈ.ಜಿ. ಗುರುಮೂರ್ತಿ, ಆಶೀಕ್ ನಾಗಪ್ಪ, ಮಹೇಶ್ ಖಾರ್ವಿ, ಅರುಣ್ ಪುಟ್ಟಣಹಳ್ಳಿ, ಹರೀಶ್ ವಿದ್ಯುತ್‌ನಗರ, ಸೂರಜ್ ಸೇರಿದಂತೆ ಇತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...