Friday, December 5, 2025
Friday, December 5, 2025

Sahyadri Narayana Hospital ಸಕರಾತ್ಮಕ ಚಿಂತನೆಯೇ ಕಠಿಣ ಪರಿಸ್ಥಿತಿಯಿಂದ ಹೊರಬರುವ ದಾರಿ – ಡಾ. ಅಪರ್ಣ ಶ್ರೀವತ್ಸ

Date:

Sahyadri Narayana Hospital ನಮ್ಮ ಸುತ್ತಮುತ್ತಲು ನಮಗೆ ಸ್ಪೂರ್ತಿ ನೀಡುವಂತಹ ಜನರು ಇರುತ್ತಾರೆ ಅವರನ್ನು ನೋಡಿ ನಾವು ಸ್ಫೂರ್ತಿ ತೆಗೆದುಕೊಳ್ಳಬೇಕು, ನಮ್ಮನ್ನು ನೋಡಿ ಬೇರೆಯವರು ಸಹ ಸ್ಪೂರ್ತಿಗೊಳಗಾಗಬೇಕು ಅಂದಾಗ ಮಾತ್ರ ಕೆಲವು ಆಸಾಧ್ಯ ಅಥವಾ ತುಂಬಾ ಕಠಿಣ ಪರಿಸ್ಥಿತಿಗಳಿಂದ ಹೊರ ಬರಬಹುದು ಎಂದು ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನ್ಸಲ್ಟಂಟ್ ಮೆಡಿಕಲ್ ಅಂಕೋಲಾಜಿಸ್ಟ್ ಡಾ. ಅಪರ್ಣ ಶ್ರೀವತ್ಸ ಅವರು ಹೇಳಿದರು.

ಶಿವಮೊಗ್ಗ ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಬ್ರೆಸ್ಟ್ ಕ್ಯಾನ್ಸರ್ ಸರ್ವೈವರ್ಸ್ ಮೀಟ್ ನಲ್ಲಿ ಮಾತನಾಡಿದ ಡಾ. ಅಪರ್ಣ ಅವರು, ಮನುಷ್ಯ ಯಾವುದೇ ರೀತಿಯ ನಕಾರಾತ್ಮಕ ಯೋಚನೆಗಳನ್ನು ಆಲೋಚಿಸದೆ ಸಕರಾತ್ಮಕವಾಗಿ ಆಲೋಚಿಸಬೇಕು ಇಲ್ಲಿ ಸೇರಿರುವ ಎಲ್ಲ ಕ್ಯಾನ್ಸರ್ ಗೆದ್ದವರು ನಮಗೆ ಸ್ಪೂರ್ತಿ ನೀಡುವಂಥವರಾಗಿದ್ದಾರೆ ಎಂದರು.

ಈ ಕಾರ್ಯಕ್ರಮವು ಕ್ಯಾನ್ಸರ್‌ನಿಂದ ಗುಣಮುಖರಾದವರ ಧೈರ್ಯ, ಆಶಾಭಾವನೆ ಮತ್ತು ಪುನರುತ್ಥಾನದ ಪಯಣವನ್ನು ಆಚರಿಸುವ ಉದ್ದೇಶದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಸರ್ವೈವರ್ಸ್ ತಮ್ಮ ಅನುಭವಗಳನ್ನು ಹಂಚಿಕೊಂಡು, ಕ್ಯಾನ್ಸರ್‌ ವಿರುದ್ಧ ಹೋರಾಡುವ ಇತರರಿಗೆ ಪ್ರೇರಣೆಯಾಗಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಶೈಲಶ್ರೀ ಕೆ, ಸಹ ಪ್ರಾಧ್ಯಾಪಕಿ – ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗ, ಜೆ.ಎನ್.ಎನ್.ಸಿ.ಇ., ಶಿವಮೊಗ್ಗ ಅವರು ಜೀವನದಲ್ಲಿ ನಗು ಇರಬೇಕು ಸಣ್ಣ ಪುಟ್ಟ ನಗು ಕ್ಯಾನ್ಸರ್ ಗೆದ್ದಿದ್ದೇನೆ ಅನ್ನೋ ಖುಷಿ ದುಪ್ಪಟ್ಟು ಮಾಡುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ಭಾರತೀ ಆರ್. ಬಾಣಕರ್, ಉಪನಿರ್ದೇಶಕಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ಇವರು ಮಾತನಾಡಿ ಹೆಣ್ಣು ಮಕ್ಕಳಿಗೆ ಇರುವ ಹಕ್ಕುಗಳು ಹಾಗೂ ಸರ್ಕಾರದಿಂದ ಇರುವ ಯೋಜನೆಗಳು ಅದರ ಸದುಪಯೋಗ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ “ಆರ್ಯಾ ಫೌಂಡೇಶನ್ ಫಾರ್ ಕ್ಯಾನ್ಸರ್ ರೆಸಿಲಿಯನ್ಸ್” ಅನ್ನು ಪ್ರಾರಂಭಿಸಲಾಯಿತು. ಇದರ ಜೊತೆಗೆ ಯೋಗ ತರಬೇತಿ ಅಧಿವೇಶನವನ್ನು ಆಯೋಜಿಸಿ, ದೈಹಿಕ ಹಾಗೂ ಮಾನಸಿಕ ಸಮತೋಲನದ ಮಹತ್ವವನ್ನು ಎತ್ತಿಹಿಡಿಯಲಾಯಿತು.

Sahyadri Narayana Hospital ವಿಗ್ಸ್ ಡಿಸೈನ್ಸ್ ವತಿಯಿಂದ ನಡೆದ ವಿಶೇಷ ಅಧಿವೇಶನದಲ್ಲಿ, ರೋಗಿಣಿಯರಿಗೆ ವಿಗ್ಸ್ (ಕೃತಕ ಕೂದಲು) ಮತ್ತು ಬ್ರೆಸ್ಟ್ ಪ್ರೋಸ್ಥೆಸಿಸ್ಗಳನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ವರ್ಗಿಸ್ ಪಿ ಜಾನ್, ರೇಡಿಯೇಶನ್‌ ಆಂಕೋಲಾಜಿಸ್ಟ್‌ರಾದ ಡಾ. ರವಿ ನಡಹಳ್ಳಿ, ಡಾ. ಸುದರ್ಶನ್‌ ಗುಪ್ತಾ, ಸರ್ಜಿಕಲ್‌ ಆಂಕೋಲಾಜಿಸ್ಟ್‌ ಡಾ ವಿವೇಕ ಎಂ.ಎ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.

Photo caption: ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ವರ್ಗಿಸ್ ಪಿ ಜಾನ್, ಡಾ. ಅರ್ಪಣಾ ಶ್ರೀವತ್ಸ ಸೇರಿದಂತೆ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...