Rotary Shimoga ವಿವಾಹಕ್ಕಿಂತ ಮುಂಚೆ ಎಚ್‌ಐವಿ ವ್ಯಾಕ್ಸಿನೇಷನ್ ಪಡೆದರೆ ಗರ್ಭ ಕ್ಯಾನ್ಸರ್ ತಡೆಗಟ್ಟಬಹುದು ಎಂದು ವೈದ್ಯೆ ಡಾ. ಪ್ರಿಯಂ ವದ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಕ್ಲಬ್ ವತಿಯಿಂದ ಅಖಿಲ ಭಾರತ ವೈದ್ಯಕೀಯ ಸಂಸ್ಥೆ ಮತ್ತು ಶಿವಮೊಗ್ಗ ಅಬ್ಸ್ತಿಟ್ರಿಕ್ಸ್ ಗೈನೋಕಾಲಜಿಕಲ್ ಸೊಸೈಟಿ ವುಮೆನ್ ಡಾಕ್ಟರ್ ವಿಂಗ್ ಶಿವಮೊಗ್ಗ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ವಿವಾಹಕ್ಕಿಂತ ಮುಂಚೆ ಮಹಿಳೆಯರು ಎಚ್‌ಪಿವಿ ವ್ಯಾಕ್ಸಿನೇಷನ್ ಪಡೆದರೆ ಗರ್ಭ ಕ್ಯಾನ್ಸರ್ ತಡೆಗಟ್ಟಬಹುದು ಹಾಗೂ ಸಕಾಲದಲ್ಲಿ ವೈದ್ಯರ ಮಾರ್ಗದರ್ಶನ ಪಡೆಯುವುದರಿಂದ ಮಹಿಳೆಯರು ಬ್ರೆಸ್ಟ್ ಕ್ಯಾನ್ಸರ್, ಲಿವರ್ ಕ್ಯಾನ್ಸರ್ ತಡೆಯಲು ಸಾಧ್ಯ ಎಂದು ತಿಳಿಸಿದರು.
ಪುರುಷರು ಸಹ ಸಕಾಲದಲ್ಲಿ ವೈದ್ಯರನ್ನು ಸಂಪರ್ಕಿಸಿದರೆ ಲಿವರ್ ಕ್ಯಾನ್ಸರ್, ಪಿತ್ತಕೋಶ ಕ್ಯಾನ್ಸರ್ ಹಾಗೂ ಇನ್ನಿತರ ಕ್ಯಾನ್ಸರ್‌ಗಳನ್ನು ತಡೆಗಟ್ಟಬಹುದು. ಪರಿಸ್ಥಿತಿಯಲ್ಲಿ ಯುವ ಪೀಳಿಗೆ ಜಂಕ್ ಫುಡ್, ಪದಾರ್ಥಗಳು ಮತ್ತು ಪರ್ಫ್ಯೂಮ್ ವಿಭಿನ್ನ ರೀತಿಯ ಪೌಡರ್‌ಗಳನ್ನ ಬಳಸೋದನ್ನ ಕಡಿಮೆ ಮಾಡಿದರೆ ಮಾತ್ರ ಕೆಲವೊಂದು ಕಾಯಿಲೆಗಳಿಂದ ದೂರ ಇರಬಹುದು. Rotary Shimoga ಆದ್ದರಿಂದ ಪ್ರತಿಯೊಬ್ಬರೂ ಸಕಾಲದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಬಹಳ ಅವಶ್ಯಕ. ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನ ಕೈಗೊಳ್ಳಬೇಕು. ರೋಟರಿ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಕೈಗೊಂಡು ಜನರಲ್ಲಿ ಅರಿವನ್ನು ಮೂಡಿಸುವುದು ಬಹಳ ಅವಶ್ಯಕವಾಗಿದೆ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಕ್ಲಬ್ ಅಧ್ಯಕ್ಷ ಡಿ.ಕಿಶೋರ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರು ನಿರ್ದಿಷ್ಟ ಸಮಯದಲ್ಲಿ ವೈದ್ಯರನ್ನ ಸಂಪರ್ಕಿಸುವುದರಿAದ ಹಲವಾರು ಕ್ಯಾನ್ಸರ್ ಮತ್ತು ವಿಭಿನ್ನವಾದ ಕಾಯಿಲೆಗಳಿಂದ ದೂರವಿರಬಹುದು. ಮುನ್ನೆಚ್ಚರಿಕೆಯಾಗಿ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವುದು ಅವಶ್ಯ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಕ್ಲಬ್ ಕಾರ್ಯದರ್ಶಿ ಧನಂಜಯ ಬಿಆರ್, ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಡಾ. ಅರುಣ್ ಎಂ ಎಸ್, ಚಂದ್ರಹಾಸ್ ಪಿ ರಾಯ್ಕರ್, ಮಾಜಿ ಸಹಾಯಕ ಗವರ್ನರ್ ಡಾ. ಪರಮೇಶ್ವರ ಶಿಗ್ಗಾವ್, ಡಾ. ಗುಡದಪ್ಪ ಕಸಬಿ, ಗಂಗಪ್ಪ, ವೀಣಾ ಕಿಶೋರ್ ಮತ್ತು ಇತರ ರೋಟರಿ ಸದಸ್ಯರು ಉಪಸ್ಥಿತರಿದ್ದರು.
Rotary Shimoga ಸಕಾಲದಲ್ಲಿ ವೈದ್ಯರ ಮಾರ್ಗದರ್ಶನ ಅವಶ್ಯಕ :ಡಾ. ಪ್ರಿಯಂ ವದ
Date:
