Shimoga Rotary Club ವೃತ್ತಿಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುವುದು ಸಂಘ ಸಂಸ್ಥೆಗಳ ಕರ್ತವ್ಯ ಎಂದು ರೋಟರಿ ಕ್ಲಬ್ ರಿವರ್‌ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಹೇಳಿದರು.
ಶಿವಮೊಗ್ಗ ರೋಟರಿ ಕ್ಲಬ್ ರಿವರ್‌ಸೈಡ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಪ್ರಕಾಶ್ ಪ್ರಭು ಅವರಿಗೆ ವೃತ್ತಿಪರ ಸೇವಾ ಗೌರವ ನೀಡಿ ಸನ್ಮಾನಿಸಿ ಮಾತನಾಡಿದರು.
ರೋಟರಿ ಸಂಸ್ಥೆಯಿಂದ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ. ವೃತ್ತಿಕ್ಷೇತ್ರದ ಸಾಧಕರನ್ನು ಗುರುತಿಸಿ ವೃತ್ತಿ ಸೇವಾ ಗೌರವ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ ಎಂದು ತಿಳಿಸಿದರು.
Shimoga Rotary Club ಪ್ರಕಾಶ್ ಪ್ರಭು ಅವರು ಸೇವೆಯ ಅರ್ಥವನ್ನು ನೈಜವಾಗಿ ಬದುಕುಳಿಸಿದ್ದಾರೆ. ಹಣಕ್ಕಿಂತ ಮನಸ್ಸಿಗೆ ಆದ್ಯತೆ ನೀಡುವವರೇ ನಿಜವಾದ ವೃತ್ತಿಪರರು. ಅವರಂತಹ ವ್ಯಕ್ತಿತ್ವವನ್ನು ರೋಟರಿ ಇಂದು ಗುರುತಿಸುವುದು ನಮ್ಮ ಕ್ಲಬ್‌ನ ಭಾಗ್ಯ ಎಂದು ಹೇಳಿದರು.
ವೃತ್ತಿ ಸೇವಾ ಗೌರವ ಪ್ರಶಸ್ತಿ ಪಡೆದ ಪ್ರಕಾಶ್ ಪ್ರಭು ಅವರು ಮನೆಯಲ್ಲಿಯೇ ಕ್ಯಾಟರಿಂಗ್ ವ್ಯವಸ್ಥೆ ಆರಂಭಿಸಿ, ಮದುವೆ, ಧಾರ್ಮಿಕ ಹಾಗೂ ಸಾಮಾಜಿಕ ಸಮಾರಂಭಗಳಿಗೆ ಶುದ್ಧ, ರುಚಿಕರ ಊಟ ಬಡಿಸುತ್ತ ಅನೇಕ ದಶಕಗಳಿಂದ ಜನರ ಪ್ರೀತಿ ಗಳಿಸಿದ್ದಾರೆ.
ರೋಟರಿ ಕ್ಲಬ್ ರಿವರ್‌ಸೈಡ್ ಕಾರ್ಯದರ್ಶಿ ನಿತಿನ್ ಯಾದವ್, ನಿಯೋಜಿತ ಅಧ್ಯಕ್ಷ ಎಂ.ಎಂ.ರವಿ, ಮಾಜಿ ಅಧ್ಯಕ್ಷರಾದ ಬಿ.ಜಿ.ಧನರಾಜ್, ಸಿ.ಎನ್.ಮಲ್ಲೇಶ್, ಬಸವರಾಜ, ರಾಜೇಶ್ ಶ್ಯಾಮ್, ಮಂಜುನಾಥ್, ಜೈಪ್ರಕಾಶ್, ಸಂತೋಷ್ ಶೆಟ್ಟಿ, ರೋಟರಿ ಕ್ಲಬ್ ರಿವರ್‌ಸೈಡ್ ಪದಾಧಿಕಾರಿಗಳು, ಇನ್ನರ್‌ವ್ಹೀಲ್ ಸದಸ್ಯರು, ಮಾಜಿ ಅಧ್ಯಕ್ಷರು ಮತ್ತು ಕುಟುಂಬ ಸದಸ್ಯರು ಹಾಜರಿದ್ದರು.
Shimoga Rotary Club ಕ್ಯಾಟರಿಂಗ್ ಕ್ಷೇತ್ರದ ಹಿರಿಯ ಅನುಭವಿ, ಪ್ರಕಾಶ್ ಪ್ರಭು ಅವರಿಗೆ ಸನ್ಮಾನ
Date:
