Friday, December 5, 2025
Friday, December 5, 2025

Dr Virupakshappa ಬಡವರಿಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಗುಣಮಟ್ಟದ,ಉಚಿತ ಚಿಕಿತ್ಸೆ- ಡಾ.ವಿರೂಪಾಕ್ಷಪ್ಪ

Date:

Dr Virupakshappa ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಉಚಿತವಾಗಿ ಹಾಗೂ ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇದರಿಂದ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ಅಕ್ಕಪಕ್ಕ ಜಿಲ್ಲೆಯ ಜನರಿಗೂ ಅನುಕೂಲವಾಗುತ್ತಿದೆ ಎಂದು ಸಿಮ್ಸ್ ನಿರ್ದೇಶಕರಾದ ಡಾ. ವಿರೂಪಾಕ್ಷಪ್ಪ ತಿಳಿಸಿದರು.
ಮಂಗಳವಾರ ಮೆಗ್ಗಾನ್ ಆಸ್ಪತ್ರೆಯ ಕನ್ಫಿರೆನ್ಸ್ ಹಾಲ್‌ನಲ್ಲಿ ಮಾಧ್ಯಮಗಾರರನ್ನು ಉದ್ದೇಶಿಸಿ ಅವರು ಮಾತನಾಡಿ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ 1200 ಹಾಸಿಗೆಯ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಅಕ್ಕ ಪಕ್ಕದ ಜಿಲ್ಲೆಗಳಾದ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ ಹಾಗೂ ಉತ್ತರ ಕನ್ನಡದಿಂದಲೂ ಸಹ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದು, ಪ್ರತಿ ದಿನ ಶೇ.90 ರಷ್ಟು ಹೊರರೋಗಿಗಳು ದಾಖಲಾಗುತ್ತಿದ್ದಾರೆ ಎಂದರು.
ಹೊರರೋಗಿಗಳ ಅನುಕೂಲಕ್ಕಾಗಿ ದಿನದ 24 ಗಂಟೆಯು ಓ.ಪಿ.ಡಿ. ವಿಭಾಗವು ತೆರದಿದ್ದು, ಪ್ರಸ್ತುತ ಸೇವೆಯನ್ನು ಹೆಚ್ಚುವರಿ ಮಾಡಲು ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಅದರಂತೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಸರ್ಜರಿ, ನ್ಯೂರೋ ಸರ್ಜರಿ, ಮಕ್ಕಳ ಶಸ್ತçಚಿಕಿತ್ಸೆ, ಮೂತ್ರ ರೋಗ ಶಸ್ತçಚಿಕಿತ್ಸೆ ಹಾಗೂ ಕಿಡ್ನಿ ಕಾಯಿಲೆ ಸಂಬAಧಿಸಿದAತೆ ಚಿಕಿತ್ಸೆ ನೀಡಲು ಚಿಂತನೆ ಮಾಡಲಾಗಿದ್ದು, ಇದರ ಸೇವೆ ಸೋಮವಾರ ಮತ್ತು ಗುರುವಾರ ಮಾತ್ರ ದೊರೆಯಲಿದೆ. ಹಾಗೂ ನರರೋಗ ಶಸ್ತçಚಿಕಿತ್ಸಾ ಸೇವೆ ಮಂಗಳವಾರ, ಗುರುವಾರ, ಶನಿವಾರದಂದು ಹೊರರೋಗಿಗಳ ಸೇವೆಗೆ ಲಭ್ಯವಿದ್ದು, ಈ ಚಿಕಿತ್ಸೆಗೆ ಬಿ.ಪಿಎಲ್. ಕಾರ್ಡುದಾರರಿಗೆ ಎ,ಬಿ,ಎ,ಆರ್,ಕೆ ಅಡಿಯಲ್ಲಿ ಉಚಿತ ಸೌಲಭ್ಯ ನೀಡಲಾಗುತ್ತದೆ ಎಂದರು.
ಇದರ ಜೊತೆಗೆ ಈಗ ಪ್ಯಾರ ಮೆಡಿಕಲ್, ಪಿಹೆಚ್ ಎಸ್, ನರ್ಸಿಂಗ್ ಕಾಲೇಜುಗಳು ನಡೆಯುತ್ತಿದ್ದು, 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿಯಾಗಿದ್ದಾರೆ. ಸೂಪರ್ ಸ್ಪೆಷಲಿಟಿ, ಮಕ್ಕಳ ಆಸ್ಪತ್ರೆ, ವಸತಿ ಗೃಹ, ಯುಜಿ ಹಾಸ್ಟೆಲ್, ಬಾಯ್ಸ್ ಅಂಡ್ ರ್ಲ್ಸ್ ಹಾಸ್ಟೆಲ್, ಆಧುನಿಕ ಶವಗಾರ ಹಾಗೂ ವೈದ್ಯಕೀಯ ಅಧಿಕಾರಿಗಾಗಿ 237 ಕ್ವಾಟ್ರಸ್ ಮನೆಗಳನ್ನು ನಿರ್ಮಿಸಲಾಗಿದೆ ಎಂದರು.
ಮೂರು ನಾಲ್ಕು ಆಸ್ಪತ್ರೆಗಳು ಸೇರಿ ಒಂದೇ ಆಸ್ಪತ್ರೆಯಲ್ಲಿ ಸೇವೆ ಮೆಗ್ಗಾನ್ ಅಲ್ಲಿ ಸಿಗುತ್ತಿದೆ. ಜನವರಿ ಯಿಂದ ಆಗಸ್ಟ್ ನಲ್ಲಿ ಪ್ರತಿ ದಿನ ಹೊರರೋಗಿಗಳು ಮತ್ತು ಒಳರೋಗಿಗಳು ಸೇರಿ 4500 ಜನ ಹಾಗೂ ಪ್ರತಿ ತಿಂಗಳು ಎಬಿಆರ್‌ಕೆ ಯಲ್ಲಿ 3000 ರೋಗಿಗಳು ಉಚಿತ ಸೇವೆ ಪಡೆಯುತ್ತಿದ್ದಾರೆ. ಇದರಿಂದ 200 ಕೋಟಿ ಹಣವನ್ನು ಪ್ರತಿರ್ಷ ರೋಗಿಗಳಿಗೆ ಈ ಯೋಜನೆಯಲ್ಲಿ ವೆಚ್ಚ ಮಾಡುತ್ತಿದೆ ಎಂದರು.
ಪ್ರತಿದಿನ 50-60 ಮೇಜರ್ ಸರ್ಜರಿ ಹಾಗ 130-140 ಜನ ಮೈನರ್ ಸರ್ಜರಿ ಮಾಡಲಾಗುತ್ತಿದ್ದು, ಪ್ರತಿತಿಂಗಳು 240 ನವಜಾತ ಶಿಶುಗಳ ಮಕ್ಕಳಿಗೆ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 25 ರಿಂದ 30 ಎಂಆರ್‌ಐ, 125 ಸಿಟಿಸ್ಕಾö್ಯನಿಂಗ್, 370 ರಿಂದ 400 ಜನರಿಗೆ ಎಕ್ಸ್ರೇ ಹಾಗೂ 100 ಜನರಿಗೆ ಅಲ್ಟçಸೌಂಡ್ ಸ್ಕಾö್ಯನಿಂಗ್ ಸೇವೆಗಳನ್ನು ಪ್ರತಿ ದಿನ ನೀಡಲಾಗುತ್ತಿದೆ.

Dr Virupakshappa ಸಿಮ್ಸ್ನ ಮುಖ್ಯ ಅಧೀಕ್ಷಕರಾದ ಡಾ.ಸಿದ್ದಪ್ಪ ಮಾತನಾಡಿ, ಉಪ ಲೋಕಾಯುಕ್ತರು ಮೆಗ್ಗಾನ್ ಭೇಟಿ ನೀಡಿ ರೋಗಿಗಳೊಂದಿಗೆ ಸಮಾಲೋಚಿಸಿದ್ದರೂ ಆಸ್ಪತ್ರೆಯ ಬಗ್ಗೆ ಯಾವುದೇ ಸಮಸ್ಯೆ ಕಂಡುಬAದಿಲ್ಲ. ಆಸ್ಪತ್ರೆಯ ಒಳಾಂಗಣದಲ್ಲಿ ಹಾಗೂ ಹೊರಾಂಗಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾಡಲು ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಹೆರಿಗೆನಲ್ಲಿ ವಾರ್ಡ್ ನಲ್ಲಿ ಪುರುಷ ಸಿಬ್ಬಂದಿಯನ್ನು ನಿರ್ಬಂಧಿಸಲಾಗಿದೆ. ಮಕ್ಕಳ ಕಳ್ಳತನ ತಡೆಯಲು ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ.
ಮುಲಭೂತ ಸೌಕರ್ಯ ಸಂಬAಧಿಸಿದAತೆ ರೋಗಿಗಳಿಗೆ ಹಾಗೂ ಚಿಕಿತ್ಸೆಗೆ ಬರುವ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು, ಹಾಸಿಗೆ ಹಾಗೂ ಶೌಚಾಲಯಗಳನ್ನು ದಿನಕ್ಕೆ ಕನಿಷ್ಠ ಎರಡು ಬಾರಿ ಸ್ವಚ್ಛವಾಗಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಮ್ಸ್ ಅಧೀಕ್ಷಕರಾದ ಡಾ. ತಿಮ್ಮಪ್ಪ, ಸಿಮ್ಸ್ ವಿಶೇಷ ಅಧಿಕಾರಿಯಾದ ಪರಮೇಶ್ವರಪ್ಪ, ಜಿಲ್ಲಾ ಶಸ್ತçಚಿಕಿತ್ಸಕರಾದ ಸಿದ್ದನಗೌಡ ಪಾಟೀಲ್ ಹಾಗೂ ವೈದ್ಯಕೀಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...