Blood Donation Camp ವೃತ್ತಿಯ ಜೊತೆಗೆ ಪ್ರವೃತ್ತಿ ಹಾಗೂ ಸಮಾಜ ಸೇವೆ ಅತಿ ಮುಖ್ಯ ಎಂದು ಸೇಂಟ್ ಜೋಸೆಫ್ ಅಕ್ಷರಧಾಮ ಕಾಲೇಜಿನ ಫಾದರ್ ಜೈಸನ್. ನುಡಿದರು ಅವರು ಇಂದು ನಗರದ ಫೆಡರಲ್ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ. ಬೃಹತ್ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವುದರ ಮುಖಾಂತರ. ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು ಇಂದು ರಕ್ತದ ಕೊರತೆ ಸಾಕಷ್ಟು ಇದೆ ಪ್ರತಿನಿತ್ಯ ಸಕಾಲದಲ್ಲಿ ರಕ್ತ ಸಿಗದೆ ಸಾಕಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಆದ್ದರಿಂದ ನಾವು ನೀವು ಎಲ್ಲರೂ ಮೂಢನಂಬಿಕೆಯಿಂದ ಹೊರಬಂದು ರಕ್ತದಾನ ಮಾಡೋಣ ಹಾಗೂ ಒಂದು ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಕೈಜೋಡಿಸೋಣ ಎಂದು ಕರೆ ನೀಡಿದರು ಇದೇ ಸಂದರ್ಭದಲ್ಲಿ ಫೆಡರಲ್ ಬ್ಯಾಂಕಿನ ಮುಖ್ಯವ್ಯವಸ್ಥಾಪಕರಾದ ವಿಮರ್ಶ್ ಹೆಚ್ ಸಿ ಮಾತನಾಡುತ್ತಾ ನಮ್ಮ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ದೇಶಾದ್ಯಂತ ಇಂದು ರಕ್ತ ದಾನ ಶಿಬಿರ ಹಾಗೂ ಮಾನವೀಯ ಮನುಕುಲದ ಸೇವಾ ಕಾರ್ಯಗಳು ನೆರವೇರುತ್ತಾ ಇದೆ ಈ ನಿಟ್ಟಿನಲ್ಲಿ ನಾವು ಇಂದು ನಮ್ಮ ಶಿವಮೊಗ್ಗ ಬ್ರಾಂಚಿನಲ್ಲಿ ಈ ಬೃಹತ್ ರಕ್ತದಾನ ಶಿಬಿರವನ್ನು ನಮ್ಮ ಗ್ರಾಹಕರು ಹಾಗೂ ಸಿಬ್ಬಂದಿಗಳು ಮತ್ತು ಸ್ನೇಹಿತರೊಂದಿಗೆ ಹಾಗೂ. ಭಾರತೀಯ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದೇವೆ ಈ ಒಂದು ದಿನ ನಡೆಯುವ ರಕ್ತದಾನ ಶಿಬಿರದಲ್ಲಿ ಎಲ್ಲರೂ ರಕ್ತದಾನ ಮಾಡುವುದರ ಮುಖಾಂತರ ನಾವೆಲ್ಲರೂ ಸಮಾಜದಲ್ಲಿ ಪವಿತ್ರ ದಾನಿಗಳಾಗೋಣ ಎಂದು ನುಡಿದರು ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷರಾದ .ಜಿ ವಿಜಯಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಾ ರಕ್ತದಾನಿಗಳು ಸಮಾಜದಲ್ಲಿ ನಿಜವಾದ ಹೀರೋಗಳು ರಕ್ತದಾನ ಮಾಡುವುದರಿಂದ ಹೃದಯಾಘಾತದ ಪ್ರಮಾಣ ಕಡಿಮೆಯಾಗುತ್ತದೆ ಕೊಬ್ಬಿನ ಅಂಶ ಹೊರಗೆ ಹೋಗುತ್ತದೆ ಹಾಗೂ ನಮ್ಮ ದೇಹದಲ್ಲಿ ನಮಗೆ ಗೊತ್ತಿಲ್ಲದ ಯಾವುದಾದರೂ ಕಾಯಿಲೆಗಳಿದ್ದರೆ ತಕ್ಷಣ ತಿಳಿಯುತ್ತದೆ ಮತ್ತು ನಾವು ಸದಾ ಲವಲುವಿಕೆಯಿಂದ ಇರುತ್ತೇವೆನಿರಂತರವಾಗಿ ವೈದ್ಯರ ಸಲಹೆ ಮೇರೆಗೆ Blood Donation Camp ರಕ್ತದಾನ ಮಾಡುವುದರಿಂದ ನಾವು ದೀರ್ಘಾಯುಷ್ಯ ಉಳ್ಳವರಾಗುತ್ತೇವೆ ಈ ನಿಟ್ಟಿನಲ್ಲಿ 18 ವರ್ಷದಿಂದ 65 ವರ್ಷದವರೆಗೆ ಆರೋಗ್ಯವಂತರು ಮೂರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭಗಳಿವೆ ಎಂದು ನುಡಿದರು ಹಾಗೆ 119 ಬಾರಿ ರಕ್ತದಾನ ಮಾಡಿದ. ರಾಜ್ಯ ಪ್ರಶಸ್ತಿ ಪುರಸ್ಕೃತ ಧರಣೇಂದ್ರ ದಿನಕರ್ ಅವರು ಮಾತನಾಡುತ್ತ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ ದಾನಿಗಳ ದೇಹದಿಂದ ಮಾತ್ರ ಸಂಗ್ರಹಿಸಲು ಸಾಧ್ಯ ಇತ್ತೀಚೆಗೆ ಗರ್ಭಿಣಿ ಸ್ತ್ರೀಯರು ಮೇಜರ್ ತಲಸೇಮೆಯ ಹಾಗೂ ಅನೇಕ ಕಾಯಿಲೆಗಳಿಗೆ ಸಾಕಷ್ಟು ರಕ್ತದ ಅವಶ್ಯಕತೆ ಇದ್ದು ಜಿಲ್ಲೆಯಲ್ಲಿ ಇನ್ನೂ 30% ರಕ್ತದ ಕೊರತೆ ಎದ್ದು ಕಾಣುತ್ತಿದೆ ಈ ನಿಟ್ಟಿನಲ್ಲಿ ಎಲ್ಲರೂ ರಕ್ತದಾನ ಮಾಡಲು ಮುಂದಾಗಬೇಕು ಹಾಗೆ ನಿಮಗೆ ಅವಶ್ಯಕತೆ ಇದ್ದರೆ ನಮ್ಮ ಬ್ಲಡ್ ಬ್ಯಾಂಕುಗಳನ್ನು ಸಂಪರ್ಕಿಸಿ ಎಂದು ಮನವಿ ಮಾಡಿದರು ಇದೇ ಸಂದರ್ಭದಲ್ಲಿ ಡಾಕ್ಟರ್ ದಿನಕರ್ ರವರು ರಕ್ತದಾನದ ಹಲವಾರು ಮಾಹಿತಿ ಟಿಪ್ಸ್ ಗಳನ್ನು ನೀಡಿದರು ಫೆಡರಲ್ ಮ್ಯಾನೇಜರ್ ತ್ರಿಶೂಲ್. ಬ್ಯಾಂಕಿನ ಹಿತೈಷಿಗಳಾದ ರಾಘವೇಂದ್ರ ಹಾಗೂ ಬ್ಯಾಂಕಿನ ಎಲ್ಲಾ ಸಹೋದ್ಯೋಗಿಗಳು ಹಾಗೂ ಗ್ರಾಹಕರು ಮತ್ತು ಕಾಂಪ್ಲೆಕ್ಸ್ ನ ಉದ್ಯಮಿಗಳು ರಕ್ತದಾನ ಮಾಡಿದರು
Blood Donation Camp ವೃತ್ತಿಯ ಜೊತೆ ಸಮಾಜ ಸೇವೆ ಅತಿಮುಖ್ಯ-ಫಾದರ್ ಜೈಸನ್
Date:
