Chirantana Yoga and Music Trust ಶಿವಮೊಗ್ಗ ನಗರದ ಶುಭಂ ಹೋಟೇಲ್ ಸಭಾಂಗಣದಲ್ಲಿ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಕಲಾವಿದ ತಬಲಾ ನಾಣಿ ಅವರಿಗೆ ಸನ್ಮಾನಿಸಲಾಯಿತು.
ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಶಾಂತಾ ಶೆಟ್ಟಿ ಮಾತನಾಡಿ, ತಬಲಾ ನಾಣಿ ಅವರು ಕನ್ನಡ ಚಿತ್ರರಂಗದಲ್ಲಿ ಅಪರೂಪದ ಹಾಸ್ಯ ನಟನಾಗಿ ಯುವ ಕಲಾವಿದರಿಗೆ ಪ್ರೇರಣೆಯಾಗಿದ್ದಾರೆ. ಸಾಕಷ್ಟು ವಿಶೇಷ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಚಿತ್ರೀಕರಣಕ್ಕೆ ಶಿವಮೊಗ್ಗ ಜಿಲ್ಲೆಗೆ ಆಗಮಿಸಿ ನಮ್ಮ ಕಲಾವಿದರೊಂದಿಗೆ ಸ್ವಲ್ಪ ಹೊತ್ತು ಸಮಯ ವಿನಿಯೋಗಿಸಿ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರ ಮುಂದಿನ ಚಿತ್ರರಂಗದ ಬದುಕು ಇನ್ನು ಹಸನಾಗಲಿದೆ ಎಂದು ಶುಭಹಾರೈಸಿದರು.
ತಬಲಾ ನಾಣಿ ಮಾತನಾಡಿ, ಶಿವಮೊಗ್ಗ ಜಿಲ್ಲೆಗೂ ನನಗೂ ಸಾಕಷ್ಟು ನಂಟು ಇದ್ದು, ಆಗಾಗ್ಗೆ ಚಿತ್ರೀಕರಣಕ್ಕೆ ಶಿವಮೊಗ್ಗ ಬರುತ್ತಿರುತ್ತೇನೆ ಎಂದು ತಿಳಿಸಿದರು.
Chirantana Yoga and Music Trust ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಮತ್ತು ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಖಜಾಂಚಿ ಜಿ.ವಿಜಯಕುಮಾರ್ ತಬಲ ನಾಣಿ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ತಬಲಾ ನಾಣಿ ಹಾಗೂ ಶಾಂತಾ ಶೆಟ್ಟಿ ಅವರು ಜಿ.ವಿ.ಅತ್ರಿ ಅವರ ನೇತೃತ್ವದ ಸಂಗೀತ ಗಂಗಾ ವಾದ್ಯ ವೃಂದದಲ್ಲಿ ಸಹ ಕಲಾವಿದರಾಗಿ 30 ವರ್ಷಗಳ ಕಾಲ ಅನೇಕ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಶುಭಂ ಹೋಟೆಲ್ ಮಾಲೀಕರಾದ ಚಂದ್ರಹಾಸ ಅವರ ಪತ್ನಿ ಶ್ಯಾಮಲಾ, ಇನ್ನರ್‌ವ್ಹೀಲ್ ಸಂಸ್ಥೆಯ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್ ಉಪಸ್ಥಿತರಿದ್ದರು.
Chirantana Yoga and Music Trust ಕಲಾವಿದ ತಬಲಾ ನಾಣಿಗೆ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಸನ್ಮಾನ
Date:
