Medical Oncologist ಮೆಡಿಕಲ್ ಆಂಕೊಲಾಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ ಅವರ ನೇತೃತ್ವದಲ್ಲಿ ಮಾಸಿಕ ಕ್ಯಾನ್ಸರ್ ಸರ್ವೈವರ್ಸ್ ಕ್ಲಿನಿಕ್ ಆಯೋಜಿಸುತ್ತಿರುವ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು, ಸ್ತನ ಕ್ಯಾನ್ಸರ್ ಜಾಗೃತಿ ದಿನದ ಭಾಗವಾಗಿ, ಅಕ್ಟೋಬರ್ 16 ರಂದು ಬೆಳಿಗ್ಗೆ 11 ಗಂಟೆಗೆ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ವಿರುದ್ಧ ಯಶಸ್ವಿಯಾಗಿ ಹೊರಾಟ ನಡೆಸಿದವರ ವಿಶೇಷ ಸಮಾವೇಶವನ್ನು ನಡೆಸಲಿದೆ.
ಡಾ. ಅಪರ್ಣಾ ಅವರು ಈ ಉಪಕ್ರಮವನ್ನು ಸತತ ಏಳನೇ ತಿಂಗಳಿನಿಂದ ಮುನ್ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದ ಗೌರವ ಅತಿಥಿಯಾಗಿ ಶಿವಮೊಗ್ಗದ ಜೆಎನ್‌ಎನ್‌ಸಿಇ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಶೈಲಶ್ರೀ ಕೆ. ಅವರು “ಭರವಸೆಯನ್ನು ಹಂಚಿಕೊಳ್ಳುವುದು – ಬದುಕುಳಿದವರ ಧ್ವನಿ” (“Sharing Hope – The Survivor’s Voice”) ಎಂಬ ವಿಷಯದ ಮೇಲೆ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮದ ಬಗ್ಗೆ ವಿವರಿಸಿದ ಡಾ. ಅಪರ್ಣಾ, ಸ್ತನ ಕ್ಯಾನ್ಸರ್ ಆರೈಕೆ ಮತ್ತು ಚೇತರಿಕೆಯಲ್ಲಿ ದೃಢತೆ, ಹೊಸ ಆವಿಷ್ಕಾರ ಮತ್ತು ಬದುಕುಳಿದವರ ಧ್ವನಿಗೆ ಪ್ರೋತ್ಸಾಹ ನೀಡುವ ಸಂವಾದಾತ್ಮಕ ವೇದಿಕೆಯಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಪ್ರಮುಖಾಂಶಗಳು:
Medical Oncologist ಸ್ತನದ ಪ್ರಾಸ್ಥೆಸಿಸ್ (ಕೃತಕ ಅಂಗ) ಮತ್ತು ಕೂದಲಿನ ಜೋಡಣೆಗಳನ್ನು (hair attachments) ಬಳಸುವ ಬಗ್ಗೆ ಮಾರ್ಗದರ್ಶನ
ಕ್ಯಾನ್ಸರ್‌ನಿಂದ ಬದುಕುಳಿದವರಿಗೆ ಅವರ ಬೆಂಬಲದ ಉಪಕ್ರಮಗಳ ಕುರಿತು ಆರ್ಯ ಫೌಂಡೇಶನ್ ಫಾರ್ ಕ್ಯಾನ್ಸರ್ ರೆಸಿಲಿಯನ್ಸ್‌ನಿಂದ ಪ್ರಸ್ತುತಿ
ಸ್ತನ ಕ್ಯಾನ್ಸರ್ ಕುರಿತು ತಮ್ಮ ಮುಂಬರುವ ಪುಸ್ತಕದ ಬಗ್ಗೆ ಲೇಖಕರಾದ ಶ್ರೀಮತಿ ಗಾಯತ್ರಿ ಶೇಷಗಿರಿ ಮತ್ತು ಡಾ. ಸ್ವಾತಿ ಸಚಿನ್ ಅವರಿಂದ ಮಾತುಕತೆ
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಿವಮೊಗ್ಗದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಭಾರತಿ ಆರ್. ಬಣಕಾರ್ ಅವರು ಭಾಗವಹಿಸಲಿದ್ದಾರೆ, ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ವರ್ಗಿಸ್ ಪಿ ಜಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 9986759661
