DC Shivamogga ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸಿ ರಕ್ಷಿಸುವ ಉದ್ದೇಶದಿಂದ, ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಸಭೆ ನಡೆಸಿದರು. ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ಜಿಲ್ಲೆಯಾದ್ಯಂತ ಉತ್ಖನನ (excavation) ಕಾರ್ಯಗಳನ್ನು ವೈಜ್ಞಾನಿಕವಾಗಿ ನಡೆಸುವ ಬಗ್ಗೆ ಚರ್ಚಿಸಿ. ಉತ್ಖನನದಿಂದ ದೊರೆಯುವ ಐತಿಹಾಸಿಕ ಕಲಾಕೃತಿಗಳನ್ನು ಮತ್ತು ಪುರಾತನ ಅವಶೇಷಗಳನ್ನು ವಿಶ್ಲೇಷಿಸುವ ಮತ್ತು ಅವುಗಳ ಮಹತ್ವವನ್ನು ದಾಖಲಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು ನಿರ್ಧಾರ ಮಾಡಲಾಯಿತು. DC Shivamogga ಗುರುತಿಸಲಾದ ಎಲ್ಲಾ ಪುರಾತತ್ವ ತಾಣಗಳನ್ನು ಶಾಶ್ವತವಾಗಿ ಸಂರಕ್ಷಿಸುವ ಮೂಲಕ ಶಿವಮೊಗ್ಗದ ಶ್ರೀಮಂತ ಇತಿಹಾಸವನ್ನು ಭವಿಷ್ಯದ ಪೀಳಿಗೆಗೆ ಉಳಿಸಲು ಅಧಿಕಾರಿಗಳಿಗೆ ಬಿ.ವೈರಾಘವೇಂದ್ರ ಸೂಚನೆ ನೀಡಿದರು.
DC Shivamogga ಶಿವಮೊಗ್ಗದ ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸಿ ರಕ್ಷಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳೊಂದಿಗೆ ಸಂಸದರ ಸಭೆ
Date:
