Jagajyoti Basaveshwara Trust ಶ್ರೀ ಜಗಜ್ಯೋತಿ ಬಸವೇಶ್ವರ ಮಹಿಳಾ ಸೇವಾ ಟ್ರಸ್ಟ್ ನಿಂದ ಮಹಿಳೆಯರ ಏಳಿಗೆಯೇ ನಮ್ಮ ಗುರಿ ಎಂಬ ದೇಯದೊಂದಿಗೆ ಅಭಿನವ ಭಾರ್ಗವ ಕಲಾರತ್ನ ಡಾ. ವಿಷ್ಠುವರ್ಧನ್ ಅವರ ಮರೆಯದ ಮಾಣಿಕ್ಯ ಪ್ರಶಸ್ತಿ ಪುರಸ್ಕಾರ ಸಮಾ ರಂಭವು ಬೆಂಗಳೂರಿನ ಮಲ್ಲತ್ತಹಳ್ಳಿ ನಾಗರಭಾವಿ ಕಲಾಗ್ರಾಮದಲ್ಲಿ ಟ್ರಸ್ಟ್ ರಾಜ್ಯಾಧ್ಯಕ್ಷೆ ಡಾ. ನಾಗರತ್ನ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
ಶಿವಮೊಗ್ಗದ ನಿಸರ್ಗ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಜೂನಿಯರ್ ವಿಷ್ಣು ವರ್ಧನ್ ಅವರಿಂದ ನೃತ್ಯ ಪ್ರದರ್ಶನ ಹಾಗೂ ಮಿಮಿಕ್ರಿ ಕಾರ್ಯಕ್ರಮ ನೋಡುಗರ ಮನ ಸೆಳೆಯಿತು.
Jagajyoti Basaveshwara Trust ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಗೆ ಸನ್ಮಾನ, ಚಲನಚಿತ್ರ ನಟ ನಟಿಯರಿಗೆ ಮರೆಯದ ಮಾಣಿಕ್ಯ ಪ್ರಶಸ್ತಿ ಪುರಸ್ಕಾರ ಮತ್ತು ಸಮಾಜ ಸೇವಕರಿಗೆ ಡಾ. ವಿಷ್ಣುವರ್ಧನ್ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತಿಥಿಗಳಾಗಿ ಡಾ. ಅಂಜನಪ್ಪö, ಡಾ. ಲೀಲಾ ಮೋಹನ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Jagajyoti Basaveshwara Trust ವಿಜೃಂಭಣೆಯಿಂದ ನಡೆದ ಮರೆಯದ ಮಾಣಿಕ್ಯ-ಸದ್ಭಾವನಾ ಕಾರ್ಯಕ್ರಮ
Date:
