CM Siddharamaiah ಶಸ್ತ್ರವಿಲ್ಲದೆ ಯುದ್ಧ ಗೆಲ್ಲಲು ಸಾಧ್ಯವೆಂಬುದನ್ನು ಸಾಧಿಸಿ ತೋರಿಸಿದ ಮಹಾತ್ಮ ಗಾಂಧಿ, ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಗಾಂಧಿ ಜಯಂತಿ ಸಂದೇಶದಲ್ಲಿ ತಿಳಿಸಿದ್ದಾರೆ.
ತನ್ನ ವೈರಿಗಳಿಗೂ ಮಾನವೀಯತೆಯ ಕಣ್ಣುತೆರೆಸಿದ ಮಹಾನ್ ಸಂತ, ಧರ್ಮದ ಹಾದಿಯಲ್ಲಿ ನಡೆಸಿದ ದಾರ್ಶನಿಕ.
ಜಗದ ಕಷ್ಟಗಳಿಗೆಲ್ಲ ಮರುಗುತ್ತಿದ್ದ ಬಾಪುವಿನ ಹೃದಯದೊಳಗೆ ಅದೆಷ್ಟು ಕರುಣೆ, ಪ್ರೀತಿ ತುಂಬಿತ್ತೆಂದು ಊಹಿಸುವುದು ಅಸಾಧ್ಯ.
ಸತ್ಯ, ಶಾಂತಿ, ಸಹನೆ, ಸರ್ವಧರ್ಮ ಸಮಭಾವ ಗಾಂಧೀಜಿಯವರ ಚಿಂತನೆಗಳಾಗಿರಲಿಲ್ಲ, ಅದು ಜೀವನ ಮಾರ್ಗವಾಗಿತ್ತು. ಜಗತ್ತು ಹಿಂಸೆ, ಅಶಾಂತಿಗಳ ದಾಳಿಗೆ ಒಳಗಾದಾಗಲೆಲ್ಲ ಮತ್ತೆ ಮತ್ತೆ ನೆನಪಾಗುವವರು ಗಾಂಧಿ.
CM Siddharamaiah ಇಂದು ಮಹಾತ್ಮ ಗಾಂಧಿಯವರ ಜನ್ಮದಿನ. ಅವರ ಸೇವೆ, ಸಮರ್ಪಣಾಭಾವ, ತ್ಯಾಗ, ಬಲಿದಾನವನ್ನು ಅತ್ಯಂತ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ ಎಂದು ಸಿದ್ಧರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ
ಸಂದೇಶ ಹಂಚಿಕೊಂಡಿದ್ದಾರೆ.
