ವಿಜಯದಶಮೀ…
ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ
Klive Special Article “ಶಮೀ ಶಮಯತೇ ಪಾಪಂ,ಶಮೀ ಶತ್ರು ವಿನಾಶಿನಿ” ವಿಜಯದಶಮಿ ನವರಾತ್ರಿಯ ಉತ್ಸವದ ಕಡೆಯ ದಿನ.ಈ ದಿನದಂದು ಪಾಂಡವರು ಶತೃಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ.ಹೆಸರೇ ಹೇಳುವಂತೆ ವಿಜಯ ದಶಮಿ.ಪಾಂಡವರು ತಮ್ಮ ವನವಾಸದ ಅವಧಿಯನ್ನು ಮುಗಿಸಿ ತಮ್ಮ ಶಸ್ತ್ರಾಸ್ತ್ರ
ಗಳನ್ನು ಇಟ್ಟಿದ್ದ ಶಮೀವೃಕ್ಷದಿಂದ ಶಸ್ತ್ರಾಸ್ತ್ರಗಳನ್ನು
ಮರಳಿಹಿಂಪಡೆದದಿವಸವಿಜಯದಶಮಿಯ
ದಿನವಾಗಿದೆ.
ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ.ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿ ಪೂಜೆಯ ಶರನ್ನವರಾತ್ರಿಗಳನಂತರದವಿಜಯೋತ್ಸವದದಿನ.ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸದ ಹತ್ತನೆಯದಿನ.”ದಶಹರ”ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂಪ್ರತೀತಿಯಿದೆ.ಈ ದಿನ ಶಮೀ ವೃಕ್ಷವು ಬಹಳ ಮಹತ್ವ ಪಡೆದಿದೆ.ನವರಾತ್ರಿಯ ಹತ್ತನೇ ದಿನ ಅಂದರೆ ವಿಜಯದಶಮಿಯಂದು ಬನ್ನಿವೃಕ್ಷಕ್ಕೆ (ಶಮೀವೃಕ್ಷ)ಪೂಜೆಸಲ್ಲಿಸುವ ಸಂಪ್ರದಾಯ ನಡೆದು
ಬಂದಿದೆ.ವಿಜಯದಶಮಿಯಂದು ಕೆಲವೊಂದು ಕಡೆ ದೇವರಿಗರ್ಪಿಸಿದ ಶಮೀ ಸೊಪ್ಪನ್ನು ಒಬ್ಬರಿಗೊಬ್ಬರು ಕೊಟ್ಟು ಶುಭಾಶಯ ವಿನಿಮಯ ಮಾಡಿಕೊಳ್ಳುವುದು ರೂಢಿಯಲ್ಲಿದೆ.
ಅಂತೂ ಒಂಭತ್ತು ದಿನಗಳ ನವರಾತ್ರಿಯ ಹಬ್ಬ ಹತ್ತನೇ ದಿನದ ವಿಜಯದಶಮಿಯಆಚರಣೆಯಿಂದಮುಕ್ತಾಯ
ಗೊಳ್ಳುತ್ತದೆ.
Klive Special Article “ಶಮೀ ಶಮಯತೇ ಪಾಪಂ,ಶಮೀ ಶತ್ರು ವಿನಾಶಿನಿ” ಸಾಮಾನ್ಯವಾಗಿ ಹಬ್ಬಗಳು ಒಂದು ದಿನ ಅಥವಾ ಎರಡು ದಿನ ಆಚರಣೆ ಮಾಡುವುದು ಇದೆ.ಆದರೆ ನವರಾತ್ರಿ ಹಬ್ಬ ಒಂಭತ್ತು ದಿನಗಳ ಕಾಲ ನಡೆಯುವ ಹಬ್ಬವಾಗಿದೆ.ಹತ್ತನೇದಿವಸ ವಿಜಯದಶಮಿಯ ಆಚರಣೆಯಿಂದ ಮುಕ್ತಾಯಗೊಳ್ಳುತ್ತದೆ.
ದುಷ್ಟರ ನಾಶ ಶಿಷ್ಟರ ವಿಜಯವೆಂದೇ ವಿಜಯದಶಮಿ ಪ್ರಾಮುಖ್ಯತೆ ಹೊಂದಿದೆ.
ವಿಜಯದಶಮಿ ಎಲ್ಲರ ಬಾಳಿನಲ್ಲಿ ಸುಖ,ಸಂತೋಷ,ನೆಮ್ಮದಿ ಸಕಲ ಸನ್ಮಂಗಳವನ್ನೂ
ತರಲಿ ಎಂದು ಪ್ರಾರ್ಥಿಸೋಣ.
