ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ
“ಸಿದ್ಧಗಂಧರ್ವ ಯಕ್ಷಾದ್ಯೈಃ ಅಸುರೈರಮರೈರಪಿ/
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿ
ದಾಯಿನೀ”//
Navaratri Day 9 ಇಂದು ಶರನ್ನವರಾತ್ರಿಯ ಒಂಭತ್ತನೆಯ ದಿನ.ಇಂದು
ನವಮಿ ತಿಥಿ,ಮಹಾನವಮಿ ಎಂದು ಕರೆಯುತ್ತಾರೆ.
ದುರ್ಗಾಮಾತೆಯನ್ನು ಇಂದು ತನ್ನ ಒಂಭತ್ತನೇ ರೂಪವಾದ ಸಿದ್ಧಿಧಾತ್ರಿಯ ರೂಪದಲ್ಲಿ ಆರಾಧಿಸುತ್ತಾರೆ.ಇದು ಆದಿಶಕ್ತಿಯ ವಿಶಿಷ್ಟ ರೂಪ.
ನವ ದುರ್ಗೆಯರಲ್ಲಿ ಕೊನೆಯರೂಪವಾಗಿರುವುದು
ಸಿದ್ಧಿಧಾತ್ರಿ ದೇವಿಯ ರೂಪ.ಸಿದ್ಧಿಧಾತ್ರಿ ಮಾರ್ಕಂಡೇಯ ಪುರಾಣಗಳ ಪ್ರಕಾರ ಈ ದೇವಿಯು ಎಲ್ಲಾರೀತಿಯಸಿದ್ಧಿಯನ್ನುಕರುಣಿಸುವಳು.ಆದ್ದರಿಂದಲೇ ಈ ದೇವಿಯನ್ನು ಸಿದ್ಧಿಧಾತ್ರಿ ಎಂದು ಕರೆಯಲಾಗುವುದು.ಈ ದೇವಿಯು
ಕಮಲದಮೇಲೆಕುಳಿತಿದ್ದಾಳೆ,ದೇವಿಗೆಚತುರ್ಭುಜ
ಗಳಿವೆ.ಶಂಖ,ಚಕ್ರ ಮತ್ತು ಕಮಲ ಪುಷ್ಪವನ್ನು ಕೈಗಳಲ್ಲಿ ಹಿಡಿದುಕೊಂಡಿದ್ದಾಳೆ.ಈ ದೇವಿಯು ಮಹಾಲಕ್ಷ್ಮಿಯ ಸ್ವರೂಪವನ್ನು ಹೊಂದಿರುತ್ತಾಳೆ.ನವರಾತ್ರಿಯ ಒಂಭತ್ತನೇ ದಿನ ಭಕ್ತಿಯಿಂದ ಆರಾಧಿಸಿ ಪೂಜಿಸುವುದರಿಂದ ಮಾತೆಯು ಭಕ್ತರ ಅಭೀಷ್ಟಗಳನ್ನು ಈಡೇರಿಸುವಳು ಎಂಬನಂಬಿಕೆಯಿದೆ.
ಈ ಮಹಾತಾಯಿ ಭಕ್ತರಿಗೆ ಇಷ್ಟಾರ್ಥ ಸಿದ್ಧಿಗಳನ್ನು
Navaratri Day 9 ನೀಡಿ,ಮೋಕ್ಷವನ್ನು ದಯಪಾಲಿಸುವ ಶಕ್ತಿಮಾತೆ ಈ ದೇವಿ.ನವರಾತ್ರಿಯಲ್ಲಿ ನವದುರ್ಗೆಯರನ್ನು
ಪೂಜಿಸುವ ಪದ್ಧತಿ ಅತ್ಯಂತ ಮಹತ್ವದ್ದು ಮತ್ತು
ವಿಶೇಷವಾಗಿದೆ.ಒಂಭತ್ತು ದಿನಗಳ ಕಾಲ ಒಂಭತ್ತು ದೇವಿಯರ ಆರಾಧನೆಯನ್ನು ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಮಾಡಿದರೆ ಯಶಸ್ಸು ಸಿಗುವುದು
ಖಚಿತ.ಮಹಾ ಶಕ್ತಿ ಸ್ವರೂಪಿಣಿ ದೇವಿಯರ ಆಶೀರ್ವಾದ ನಮ್ಮ ಮೇಲೆ ಇದ್ದರೆ ಜೀವನದಲ್ಲಿ
ಬರುವ ಕಷ್ಟಗಳು ಪರಿಹಾರವಾಗುತ್ತವೆ.ಶತೃಗಳ ಭಯವಿರುವುದಿಲ್ಲ.ಆತ್ಮವಿಶ್ವಾಸವನ್ನು ದೇವಿಯು ಕರುಣಿಸಿ ಕಾಪಾಡುತ್ತಾಳೆ.
ನವರಾತ್ರಿಯ ಒಂಭತ್ತುದಿವಸಗಳ ಕಾಲ ದೇವಿಯ ಪೂಜೆಯನ್ನು ಭಕ್ತಿಯಿಂದ ಮಾಡಿರುವ ನಾವು
ದೇವಿಯನ್ನು ಎಲ್ಲರಿಗೂ ಆಯುರಾರೋಗ್ಯ,ಸುಖ ಶಾಂತಿ ನೆಮ್ಮದಿಯನ್ನು ದಯಪಾಲಿಸಿ ಅನುಗ್ರಹಿಸುವಂತೆ ಪ್ರಾರ್ಥಿಸೋಣ.
