JCI Shimoga ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಆರಾಧನಾ ಆರ್ಥೋಪೆಡಿಕ್ ಸೆಂಟರ್‌ನ ಕನ್ಸಲ್ಟೆಂಟ್ ಆರ್ಥೋಪೇಡಿಕ್ ಮತ್ತು ರೋಬೋಟಿಕ್ ನೀ ರಿಪ್ಲೇಸ್‌ಮೆಂಟ್ ಸರ್ಜನ್ ಡಾ. ಕೆ.ಗಿರೀಶ್‌ಕುಮಾರ್ ಅವರು ಸಿಗ್ನೇಚರ್ ಮೀಡಿಯಾ ಸಂಸ್ಥೆಯಿಂದ “ ಟ್ರಸ್ಟೆಡ್ ಜಾಯಿಂಟ್ ರಿಪ್ಲೇಸ್‌ಮೆಂಟ್ ಸರ್ಜನ್, ಕರ್ನಾಟಕ ಹೆಲ್ತ್ ಕೇರ್ ವೈದ್ಯ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದು, ಜೆಸಿಐ ಶಿವಮೊಗ್ಗ ಸ್ಟಾರ್ಸ್ ಮತ್ತು ಪರಿಪೂರ್ಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
JCI Shimoga ಡಾ. ಗಿರೀಶ್‌ಕುಮಾರ್ ಅವರು 500ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿದ್ದು, ಇವರ ಆರಾಧನಾ ಆರ್ಥೋಪೆಡಿಕ್ ಸೆಂಟರ್‌ನಲ್ಲಿ ರೋಬೋಟಿಕ್ ನೀ ಸರ್ಜರಿ ಸೌಲಭ್ಯ ಲಭ್ಯವಿದೆ. ಆರೋಗ್ಯ ಕ್ಷೇತ್ರದಲ್ಲಿ ಇವರ ಸೇವೆ ಗುರುತಿಸಿ ಪ್ರಶಸ್ತಿ ಲಭಿಸಿದೆ.
ಜೆಸಿಐ ಶಿವಮೊಗ್ಗ ಸ್ಟಾರ್ಸ್ ಸಂಸ್ಥಾಪಕ ಅಧ್ಯಕ್ಷೆ ಅಶ್ಚಿನಿ ಚಂದ್ರಶೇಖರ್, ಎಲ್ಲ ಪದಾಧಿಕಾರಿಗಳು ಹಾಗೂ ಪರಿಪೂರ್ಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಸತೀಶ್‌ಚಂದ್ರ, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು.
JCI Shimoga ವೈದ್ಯ ವಿಭೂಷಣ ಡಾ.ಗಿರೀಶ್ ಕುಮಾರ್ ಗೆ ಆತ್ಮೀಯ ಸನ್ಮಾನ
Date:
