Goddess Chowdeshwari ಶಿವಮೊಗ್ಗ ನಗರದ ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ದೇವಿಗೆ
ಸೆ. 29 ರಂದು ಶ್ರೀಮತಿ ಮಂಜುಳ ಶ್ರೀ ತುಕಾರಾಮ್ ಕುಟುಂಬದವರಿಂದ ಕನಕ ದುರ್ಗಾಹೋಮ, ಸರಸ್ವತಿ ಶ್ರೀ ವಿನಾಯಕ ಕುಟುಂಬದವರಿಂದ ಸರಸ್ವತಿ ಅಲಂಕಾರ ನೆರವೇರಿಸಲಾಯಿತು.
ನೂರಾರು ವಿದ್ಯಾರ್ಥಿಗಳಿಂದ ಸರಸ್ವತಿ ಪೂಜೆ ನೆರವೇರಿಸಲಾಯಿತು.
ಸೆ. ೩೦ರಂದು ಶ್ರೀಮತಿ ಸಂಧ್ಯಾ ಶ್ರೀ ಸುರೇಶ್ ಬಾಬು ಕುಟುಂಬದಿಂದ ಮಹಿಷಾಸುರ ಮರ್ಧಿನಿ ಅಲಂಕಾರ, ಶ್ರೀಮತಿ ಸುಕನ್ಯಾ ಮತ್ತು ಶ್ರೀ ನಾಗಭೂಷಣ ಕುಟುಂಬದಿಂದ ಮತ್ತು ಸಮಸ್ತ ಭಕ್ತಾದಿಗಳಿಂದ ಸಾಮೂಹಿಕ ಶ್ರೀ ಚಂಡಿಕಾ ಹೋಮ ಏರ್ಪಡಿಸಲಾಗಿದೆ.
12:30ಕ್ಕೆ ಮಹಾಮಂಗಳಾರತಿ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಅದೇ ದಿನ ಸಂಜೆ 6.30 ರಿಂದ ಶ್ರೀ ಜಿ ಎಸ್ ನಟೇಶ್ ಇವರಿಂದ ಮಂಕು ತಿಮ್ಮನ ಕಗ್ಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾತ್ರಿ 8:00 ರಿಂದ ಶ್ರೀ ಜಯರಾಮ್ ಕುಟುಂಬದವರಿಂದ ಉಯ್ಯಾಲೇ ಸೇವೆ ಹಮ್ಮಿಕೊಳ್ಳಲಾಗಿದೆ. 8:30ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ವಿರುತ್ತದೆ
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಕೋರಿದ್ದಾರೆ.
Goddess Chowdeshwari ಹೆಚ್ಚಿನ ಮಾಹಿತಿಗಾಗಿ : ಚೇತನಭಟ್ 9980247081,ಕೆ. ಶೇಖರ 9448888129 ಸಂಪರ್ಕಿಸಬಹುದು.
