Rotary Club ರೋಟರಿ ಕ್ಲಬ್ ಮಣಿಪಾಲ ಟೌನ್ ನೇತೃತ್ವದಲ್ಲಿ ಐಎಫ್‌ಎಂಆರ್ ಉಡುಪಿ ಚಾಪ್ಟರ್ ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಜಂಟಿ ಆಯೋಜನೆಯೊಂದಿಗೆ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಹಭಾಗಿತ್ವದೊಂದಿಗೆ ಆಯೋಜಿಸಿದ್ದ ಅಂಗಾಂಗ ದಾನ ಮತ್ತು ಅದರ ಮಹತ್ವ ಕುರಿತ ಸಮಾಜಮುಖಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.
ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಪ್ರಾಚಾರ್ಯ ಡಾ. ಸುದರ್ಶನ್ ಮಾತನಾಡಿ, ಅಂಗಾಂಗ ದಾನದ ಮಹತ್ವವನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಅಂಗಾಂಗ ದಾನದ ಜ್ಞಾನವು ಪ್ರತಿಯೊಬ್ಬರ ಪ್ರಸ್ತುತ ಜೀವನದಲ್ಲಿ ಅನಿವಾರ್ಯ ಎಂದು ಹೇಳಿದರು.
ಕಾಲೇಜಿನ ಪ್ರಾಧ್ಯಾಪಕಿ ಡಾ. ಅನಿತಾ ಸಿ.ಬಿ. ಮಾತನಾಡಿ, ದಾನ ನೀಡುವವರು ನಿಜವಾದ ದೇವರು. ಅಂಗಾಂಗ ದಾನವು ಇನ್ನೊಬ್ಬರ ಜೀವಕ್ಕೆ ಹೊಸ ಶಕ್ತಿ ನೀಡುವ ಅತ್ಯಂತ ಮಾನವೀಯ ಕಾರ್ಯ ಎಂದು ತಿಳಿಸಿದರು.
ಮಣಿಪಾಲ ಕೆಎಂಸಿಯ ಪ್ರೋಫೆಸರ್ ಆಫ್ ಅನಾಟಮಿ ಡಾ. ಕುಮಾರ್ ಎಂ.ಆರ್.ಭಟ್ ಮಾತನಾಡಿ, ಅಂಗಾಂಗ ದಾನದ ವಿವಿಧ ಆಯಾಮಗಳನ್ನು ವಿವರಿಸಿ, ಬ್ರೈನ್ ಡೆಡ್ ವ್ಯಕ್ತಿಯ ಅಂಗಾಂಗ ದಾನ ಪ್ರಕ್ರಿಯೆಗಳು, ಕಾನೂನುಬದ್ಧ ಕ್ರಮಗಳು ಹಾಗೂ ಸರ್ಕಾರದಿಂದ ದೊರೆಯುವ ಮಾನ್ಯತೆಗಳ ಬಗ್ಗೆ ಮಾಹಿತಿ ನೀಡಿದರು. ಇಂದಿನ ಕಾಲದಲ್ಲಿ ಆನ್‌ಲೈನ್ ಮುಖಾಂತರ ದೇಹದ ದಾನವನ್ನು ನೋಂದಣಿ ಮಾಡಬಹುದು ಮತ್ತು ಪ್ರಮಾಣಪತ್ರವನ್ನು ಪಡೆಯಬಹುದು ಎಂದರು.
Rotary Club ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಮಾತನಾಡಿ, ಸಮಾಜಮುಖಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಇದ್ದು, ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.
ರೋಟರಿ ಇಂಟರ್ ಜೋನ್ ಫ್ರೆಂಡ್‌ಶಿಪ್ ಎಕ್ಸಚೇಂಜ್ ಧ್ವಜ ಹಸ್ತಾಂತರ ನಡೆಯಿತು. ರಿವರ್ ಸೈಡ್ ಸದಸ್ಯರಾದ ವಲಯ ಸೇನಾನಿ ಎಸ್.ಪಿ.ಶಂಕರ್, ಎಂ.ಪಿ.ಆನಂದ್ ಮೂರ್ತಿ, ಬಿ.ಜಿ.ಧನರಾಜ್, ಆರ್.ದೇವೇಂದ್ರಪ್ಪ, ಎಂ.ಆರ್.ಬಸವರಾಜ್, ಜೈಪ್ರಕಾಶ್, ಎಸ್.ಆರ್.ನಾಗರಾಜ್ ನಿತಿನ್ ಯಾದವ್, ರಾಕೇಶ್, ಕಾಲೇಜಿನ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.
