Saturday, December 6, 2025
Saturday, December 6, 2025

Stanford University ಶಿವಮೊಗ್ಗದ ಡಾ.ವರುಣ್ ಕುಮಾರ್ ಗೆ ವಿಶ್ವದ ಶೇ, 2 ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಸತತ ಮೂರನೇ ಸ್ಥಾನ

Date:

Stanford University ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯ ಪ್ರಕಟಿಸಿದ 2025ನೇ ಸಾಲಿನ ವಿಶ್ವದ ಶೇ.2 ರಷ್ಟು ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಶಿವಮೊಗ್ಗ ನಗರದ ಡಾ.ವರುಣ್ ಕುಮಾರ್ ಆರ್ ಎಸ್ ಸತತ ಮೂರನೇ (2023, 2024, 2025) ಬಾರಿಗೆ ಸ್ಥಾನ ಪಡೆದಿದ್ದಾರೆ.

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ವರದಿ, ಉಲ್ಲೇಖಗಳು ಹಾಗೂ ಲೇಖನಗಳನ್ನೊಳಗೊಂಡ ಎಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ನಾನಾ ಮಾನದಂಡಗಳನ್ನು ಪರಿಗಣಿಸಿ ಜಾಗತಿಕವಾಗಿ ಸಿದ್ದಪಡಿಸಿರುವ ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಈ ವರ್ಷವೂ ಡಾ. ವರುಣ್ ಕುಮಾರ್ ಆರ್ ಎಸ್ ಅವರು ಸ್ಥಾನ ಪಡೆದಿದ್ದು, ಪ್ರಸ್ತುತ 2025 ನೇ ಸಾಲಿನ ಪಟ್ಟಿಯಲ್ಲಿ ಇವರುಗಳು ಕ್ರಮವಾಗಿ 11379, 44028, 545118, 121882, 12467 ಶ್ರೇಯಾಂಕಗಳನ್ನು ಪಡೆದಿದ್ದಾರೆ.

ಮಲೇಶಿಯಾದ ಸನ್-ವೇ ವಿಶ್ವವಿದ್ಯಾಲಯದ ಗಣಿತ ಶಾಸ್ತ್ರದ ಪ್ರಾಧ್ಯಾಪಕರಾಗಿರುವ ಡಾ. ವರುಣ್ ಕುಮಾರ್. ಆರ್. ಎಸ್. ಅವರು ಪತ್ರಕರ್ತ ಎನ್.ರವಿಕುಮಾರ್ ( ಟೆಲೆಕ್ಸ್) ಶ್ರೀಮತಿ ಶಶಿಕಲಾ ಅವರ ಪುತ್ರರಾಗಿದ್ದಾರೆ.

Stanford University ಡಾ. ಆರ್ ಎಸ್ ವರುಣ್ ಕುಮಾರ್ ಅವರೊಂದಿಗೆ ಗಣಿತ ಶಾಸ್ತçದ ಸಂಶೋಧಕ ಮಾರ್ಗದರ್ಶಕರಾದ ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ ಸಿ ಪ್ರಸನ್ನಕುಮಾರ ಅವರೂ ಕೂಡ ಐದನೆ ಬಾರಿಗೆ ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನಪಡೆದಿದ್ದು ಪ್ರೊ. ಬಿ. ಸಿ. ಪ್ರಸನ್ನಕುಮಾರ್ ಅವರ ಮಾರ್ಗದರ್ಶನದಲ್ಲಿ ಗಣಿತ ಶಾಸ್ತ್ರದಲ್ಲಿ ಸಂಶೋಧನೆಯನ್ನು ಮಗಿಸಿರುವ ಡಾ. ಪುನೀತ್ ಗೌಡ (೨೦೨೨-೨೫) ಡಾ. ನವೀನ್ ಕುಮಾರ್ ಆರ್ (೨೦೨೨-೨೫) ಇವರುಗಳು ಸತತವಾಗಿ ಹಾಗೂ ಡಾ. ಮಧುಕೇಶ್ ಜೆ. ಕೆ (೨೦೨೩-೨೫) ಅವರುಗಳೂ ಕೂಡ ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ನಾಲ್ಕೂ ಸಹಾಯಕ ಪ್ರಾಧ್ಯಾಪಕರೂ ಸಹ ತಮ್ಮ ಮಾರ್ಗದರ್ಶಕರೊಡನೆಯೇ ವಿಜ್ಞಾನಿಗಳ ಪಟ್ಟಿಗೆ ಸೇರಿರುವುದು ಸ್ಪೂರ್ತಿದಾಯಕವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...