Shrimad Jagadguru Shankaracharya ಪ್ರತಿ ಬಾರಿಯಂತೆ ಈ ಬಾರಿಯೂ ಕೂಡಲಿಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾಸಂಸ್ಥಾನಮ್ ದಕ್ಷಿಣಾಮ್ನಾಯ ಮೂಲ ಶ್ರೀ ಶಾರದಾ ಪೀಠಮ್‍ನಲ್ಲಿ ವೈಭವದ ಶ್ರೀ ಶರನ್ನವರಾತ್ರಿ ಮಹೋತ್ಸವವು ಸೆಪ್ಟಂಬರ್ 22ರಿಂದ ಅಕ್ಟೋಬರ್ 1ರ ವರೆಗೆ ನಡೆಯಲಿದೆ.
ಶ್ರೀ ಶರನ್ನವರಾತ್ರಿ ಮಹೋತ್ಸವದ ನಿಮಿತ್ತ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀ ಶಾರದಾ ಪರಮೇಶ್ವರಿ, ಶ್ರೀ ಚಂದ್ರಮೌಳೇಶ್ವರ ದೇವರ ಸಮ್ಮುಖದಲ್ಲಿ ಪ್ರತಿದಿನ ವಿವಿಧ ಹೋಮ-ಹವನಗಳು ನಡೆಯಲಿವೆ.
ಸೆಪ್ಟಂಬರ್ 22ರಂದು ನವಗ್ರಹ ಹೋಮ, 23ರಂದು ಶ್ರೀ ದುರ್ಗಾ ಸೂಕ್ತ ಹೋಮ, 24ರಂದು ಶ್ರೀ ಲಕ್ಷ್ಮೀನಾರಾಯಣ ಹೃದಯ, 25ರಂದು ಶ್ರೀ ದಕ್ಷಿಣಾಮೂರ್ತಿ ಹೋಮ, 26ರಂದು ಶ್ರೀ ಲಲಿತಾ ಸಹಸ್ರನಾಮ ಹೋಮ, 27ರಂದು ಶ್ರೀ ಆವಹಂತೀ ಹೋಮ, 28ರಂದು ಶ್ರೀ ಸುಬ್ರಹ್ಮಣ್ಯ ಹೋಮ, 29ರಂದು ಶ್ರೀ ಸರಸ್ವತೀ ಹೋಮ, 30ರಂದು ಶ್ರೀ ಮಹಾಲಕ್ಷ್ಮೀ ಹೋಮ ಹಾಗೂ ಅಕ್ಟೋಬರ್ 1ರಂದು ಶ್ರೀ ಶತಚಂಡಿ ಹೋಮ ನಡೆಯಲಿದೆ.
Shrimad Jagadguru Shankaracharya ಈ ಎಲ್ಲಾ ಧಾರ್ಮಿಕ ಕಾರ್ಯಗಳೂ ಮತ್ತೂರಿನ ವಿದ್ವಾನ್ ಶ್ರೀ ಪ್ರದೀಪ್ (ಅಗ್ನಿಹೋತ್ರಿ)ಯವರ ನೇತೃತ್ವದಲ್ಲಿ ನಡೆಯಲಿದ್ದು, ಶ್ರೀ ಶಾರದೆಯ ಆರಾಧನೆಗೆ ಶರನ್ನವರಾತ್ರಿ ಸಂದರ್ಭ ಅತ್ಯಂತ ಸೂಕ್ತ ಸಮಯವಾಗಿದ್ದು, ಭಕ್ತಾದಿಗಳು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜಗದ್ಗುರುಗಳ ಹಾಗೂ ಶ್ರೀ ಶಾರದಾಂಬೆಯ ಕೃಪಗೆ ಪಾತ್ರರಾಗಬೇಕು ಎಂದು ಶ್ರೀಮಠ ತಿಳಿಸಿದೆ.
ಸೇವಾಕರ್ತರು ಮೊ: 9164185225, 9480544225 ಹಾಗೂ 9844570404 ಸಂಪರ್ಕಿಸುವಂತೆ ಕೋರಲಾಗಿದೆ.
