Shivamogga City Corporation ಶಿವಮೊಗ್ಗ ಮಹಾನಗರ ಪಾಲಿಕೆಯು ರಂಗದಸರಾ -2025 ರಡಿಯಲ್ಲಿ ಕುಟುಂಬ ರಂಗ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ.
ಪಾಲಿಕೆ ವ್ಯಾಪ್ತಿಯ ಕುಟುಂಬದ ಸದಸ್ಯರು ಅಥವಾ ಅಕ್ಕಪಕ್ಕದ ಮನೆಯವರು ಕನಿಷ್ಠ 5 ರಿಂದ 12 ಜನ ಸೇರಿ ಅರ್ಧ ಗಂಟೆಯ ಕಿರು ನಾಟಕವನ್ನು ತಮ್ಮ ಮನೆಯಲ್ಲೇ ಅಥವಾ ಹತ್ತಿರದ ಅನುಕೂಲಕರ ಸ್ಥಳದಲ್ಲಿ ಅಭಿನಯಿಸಬೇಕು. ಇದರಲ್ಲಿ ಮೆಚ್ಚುಗೆ ಪಡೆದ ನಾಲ್ಕು ತಂಡಗಳನ್ನು ಆಯ್ಕೆ ಮಾಡಿ ನಗರದ ಕುವೆಂಪು ರಂಗಮಂದಿರದಲ್ಲಿ ಸೆ. 30 ರಂದು ಪ್ರದರ್ಶಿಸಲಾಗುವುದು. ನಾಟಕದ ವಿಷಯ ವಿವಾದಾತ್ಮಕ ಹಾಗೂ ಸಮಾಜದ ಶಾಂತಿಗೆ ಭಂಗ ತರುವ ವಿಚಾರವಾಗಿರಬಾರದು.
Shivamogga City Corporation ಆಸಕ್ತರು ಸೆ. 22 ರೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ರಂಗ ದಸರಾ ಸಮಿತಿ, ಮಹಾನಗರಪಾಲಿಕೆ, ಶಿವಮೊಗ್ಗ ಇವರ ಕಚೇರಿಯಲ್ಲಿ ಹೆಸರು ಅಥವಾ ತಂಡದ ಹೆಸರನ್ನು ನೋಂದಾಯಿಸಿಕೊಳ್ಳುವುದು. ನೊಂದಣಿ ಮಾಡಿದ ಮೊದಲ 15 ಸಾರ್ವಜನಿಕ ಕುಟುಂಬಗಳಿಗೆ ಪ್ರೋತ್ಸಾಹಧನವಾಗಿ ರೂ. 1000/-ಗಳಂತೆ ರಂಗ ದಸರಾ ಸಮಿತಿಯಿಂದ ಕಾರ್ಯಕ್ರಮ ಮುಗಿದ ನಂತರ ನೀಡಲಾಗುವುದು ಎಂದು ರಂಗ ದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಾಯಿಸಲು ಸಮಿತಿ ಅಧಿಕಾರಿ ಸದಸ್ಯೆ ಮಂಜುಶ್ರೀ-6364083666, ಸಂಚಾಲಕರು ಶ್ರೀಕಂಠ-8660756404, ಸುರೇಶ್ ಎಸ್.ಹೆಚ್.-9449925746 ಇವರುಗಳನ್ನು ಸಂಪರ್ಕಿಸುವುದು
Shivamogga City Corporation ಶಿವಮೊಗ್ಗ ದಸರಾ- 2025.ಕುಟುಂಬ ರಂಗ ಸ್ಪರ್ಧೆ ಗೆ ಸೆ.22 ರೊಳಗೆ ಪ್ರವೇಶ ಸಲ್ಲಿಕೆ ಗಡುವು
Date:
