Narendra Modi ಶಿವಮೊಗ್ಗ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ 75 ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿತವಾಗಿದ್ದ ‘ನಮೋ ಯುವ ಓಟ’ ದ ಕಾರ್ಯಕ್ರಮಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು.
Narendra Modi ಯುವಕರಿಗೆ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವಂತೆ ಮತ್ತು ಮಾದಕ ವಸ್ತುಗಳಿಂದ ದೂರವಿರುವಂತೆ ಯುವಕರನ್ನು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ‘ನಶೆಮುಕ್ತ ಭಾರತ’ ಧೈಯದೊಂದಿಗೆ ದೇಶದ 75 ನಗರಗಳಲ್ಲಿ ಇಂದು ‘ನಮೋ ಯುವ ರನ್” ಮ್ಯಾರಾಥನ್ ನಡೆಯುತ್ತಿದ್ದು ಇದೊಂದು ದಾಖಲೆಯ ಅಭಿಯಾನವಾಗಿದೆ ಎಂದು ರಾಘವೇಂದ್ರ ಯುವಜನರನ್ನದ್ದೇಶಿಸಿ ಮಾತನಾಡಿದರು
