Friday, December 5, 2025
Friday, December 5, 2025

Shivamogga Municipal Corporation ಜಿಲ್ಲೆಯ ಜನತೆಯ ಸಡಗರದ ದಸರಾ ಉತ್ಸವಕ್ಕೆ ಎಲ್ಲರೂ ಆಗಮಿಸಿ,ಪಾಲ್ಗೊಳ್ಳಿ- ಎಸ್.ಎನ್.ಚನ್ನಬಸಪ್ಪ

Date:

Shivamogga Municipal Corporation ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 02ರವರೆಗೆ ಅದ್ದೂರಿಯಾಗಿ ನಡೆಯಲಿರುವ ನಮ್ಮೂರ ನಾಡಹಬ್ಬ ”ಶಿವಮೊಗ್ಗ ದಸರಾ – 2025”ಕ್ಕೆ ಸಂಬಂಧಿಸಿದಂತೆ ಇಂದು ಮಹಾನಗರ ಪಾಲಿಕೆಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಾಯಿತು.

ಈ ಬಾರಿ ಒಟ್ಟು 11 ದಿನಗಳ ಕಾಲ ನಡೆಯಲಿರುವ ಈ ದಸರಾ ಮಹೋತ್ಸವವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಂಶಗಳನ್ನು ಒಳಗೊಂಡ ಹಬ್ಬವಾಗಿದ್ದು, ನಾಗರೀಕರ ಉತ್ಸಾಹಪೂರ್ಣ ಭಾಗವಹಿಸುವಿಕೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಮಹಾನಗರ ಪಾಲಿಕೆಯು ಉತ್ಸವದ ಯಶಸ್ಸಿಗಾಗಿ ಅಗತ್ಯ ಕ್ರಮಗಳನ್ನೂ ಕೈಗೆತ್ತಿಕೊಂಡಿದೆ.

ವಿಶೇಷತೆಗಳು:

  • ಸೆಪ್ಟೆಂಬರ್ 22, 2025: ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯ ಪ್ರತಿಷ್ಠಾಪನೆಯ ಮೂಲಕ ದಸರಾ ಮಹೋತ್ಸವಕ್ಕೆ ವೈಭವಯುತವಾಗಿ ಚಾಲನೆ ನೀಡಲಾಗುವುದು.
  • ⁠ಈ ವರ್ಷದ ಶಿವಮೊಗ್ಗ ದಸರಾ ಕಾರ್ಯಕ್ರಮಗಳಿಗೆ ಪ್ರಸಿದ್ಧ ಚಲನಚಿತ್ರ ನಟ-ನಟಿಯರು ಹಾಗೂ ಧಾರ್ಮಿಕ,ಸಾಮಾಜಿಕ,ರಾಜಕೀಯ ಮತ್ತು ವಿವಿಧಕ್ಷೇತ್ರಗಳಲ್ಲಿನ ಸಾಧಕರು ಹಾಗೂ ಗಣ್ಯರು ಭಾಗವಹಿಸುವರು.
  • ಪ್ರತಿದಿನ ನಗರದ ವಿವಿಧ ವೇದಿಕೆಗಳಲ್ಲಿ ನಗರ, ಜಿಲ್ಲೆಯ ಹಾಗೂ ರಾಜ್ಯದ ಖ್ಯಾತ ಕಲಾವಿದರಿಂದ ಕಲೆ,ಸಾಹಿತ್ಯ,ಸಂಗೀತ, ನೃತ್ಯ, ನಾಟಕ ಮತ್ತು ಜನಪದ ಕಲೆಗಳ ಮನಮೋಹಕ ಪ್ರದರ್ಶನ.
  • ಅಕ್ಟೋಬರ್ 2, 2025: ಬೆಳ್ಳಿ ಮಂಟಪದಲ್ಲಿ “ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿಯ ವಿಗ್ರಹದ ಅಂಬಾರಿ ಮೆರವಣಿಗೆಯೊಂದಿಗೆ” ಅಲ್ಲಮ ಪ್ರಭು ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಲಿದೆ.

Shivamogga Municipal Corporation ಈ ಬಾರಿಯ “ಶಿವಮೊಗ್ಗ ದಸರಾ-2025” ರಲ್ಲಿ 15 ವಿವಿಧ ರೀತಿಯ ದಸರಾಗಳನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ! •ಕಲಾ ದಸರಾ •ಚಲನಚಿತ್ರ ದಸರಾ
•ಪರಿಸರ ದಸರಾ •ಜ್ಞಾನ ದಸರಾ •ಪೌರಕಾರ್ಮಿಕರ ದಸರಾ •ಪತ್ರಿಕಾ ದಸರಾ •ಮಹಿಳಾ ದಸರಾ •ಆಹಾರ ದಸರಾ •ರೈತ ದಸರಾ •ಮಕ್ಕಳ ದಸರಾ •ಗಮಕ ದಸರಾ •ರಂಗ ದಸರಾ •ಯೋಗ ದಸರಾ •ಯುವ ದಸರಾ •ಸಾಂಸ್ಕೃತಿಕ ದಸರಾ, ಹೀಗೆ ವಿಜೃಂಭಣೆಯಾಗಿ ನಗರದ ವಿವಿಧ ಭಾಗಗಳಲ್ಲಿ ದಸರಾ ಕಾರ್ಯಕ್ರಮಗಳನ್ನು ನಡೆಸಲುದ್ದೇಶಿಸಿದ್ದು, ಇದು ಕೇವಲ ನಗರದ ನಾಗರೀಕರಿಗೆ ಮಾತ್ರವಲ್ಲದೆ, ಸಂಪೂರ್ಣ ಜಿಲ್ಲೆಯ ಜನತೆಗೆ ಸಡಗರದ ಸಂಭ್ರಮವನ್ನು ನೀಡುವಂತಹ ನಾಡಹಬ್ಬವಾಗಲಿದೆ. ಎಲ್ಲರೂ ಆಗಮಿಸಿ ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳಬೇಕೆಂದು ಪತ್ರಿಕಾಗೋಷ್ಠಿಯ ಮೂಲಕ ತಿಳಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...