Honda Showroom ಶಿವಮೊಗ್ಗ ನಗರದ ಎನ್‌ಟಿ ರಸ್ತೆಯಲ್ಲಿರುವ ನಾಗರಹಳ್ಳಿ ಹೋಂಡಾ ಶೋರೂಂನಲ್ಲಿ ಹೋಂಡಾ ಶೈನ್ 100 ಡಿಎಕ್ಸ್ – ಹಾರ್‌ನೆಟ್ 125 ಸಿಸಿ ಬೈಕ್‌ಗಳು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಹಳ್ಳಿ ಹೋಂಡಾ ಶೋರೂಂನ ವ್ಯವಸ್ಥಾಪಕ ನಿರ್ದೇಶಕ ನಟರಾಜ್ ಹೆಚ್ ನಾಗರಹಳ್ಳಿ, ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಶಿವಮೊಗ್ಗ ನಗರದಲ್ಲಿ ನಾವುಗಳು ಗ್ರಾಹಕರಿಗಾಗಿ ಸೇವೆ ಸಲ್ಲಿಸುತ್ತಾ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
Honda Showroom ಈ ಭಾಗದ ಜನತೆಗೆ ಉತ್ತಮ ಸೇವೆ ಕೊಡುವ ನಿಟ್ಟಿನಲ್ಲಿ ನಮ್ಮ ಶೋರೂಂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಗ್ರಾಹಕರ ತೃಪ್ತಿಯೇ ನಮ್ಮ ತೃಪ್ತಿಯಾಗಿದೆ. ನಮ್ಮ ಶೋರೂಂ ವತಿಯಿಂದ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಝೋನಲ್ ಮ್ಯಾನೇಜರ್ ಶೇಷಾದ್ರಿ ನಾರಾಯಣನ್, ರಾಹುಲ್, ಶಿವಕುಮಾರ್ ಶೇಟಕರ್, ಸಂಚಾರಿ ಠಾಣೆಯ ಬಿ.ಹೆಚ್. ಭಾರತಿ, ಸೇಲ್ಸ್ ಏರಿಯಾ ಇನ್‌ಚಾರ್ಜ್ ವೀರೇಂದ್ರ ಪಾಟೀಲ್, ಶೋರೂಮ್‌ನ ಜನರಲ್ ಮ್ಯಾನೇಜರ್ ಪ್ರೀತಿ ಭಟ್ಟಾಚಾರ್ಯ, ಸರ್ವಿಸ್ ಏರಿಯಾ ಇನ್‌ಚಾರ್ಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Honda Showroom ಕಳೆದ ಹತ್ತು ವರ್ಷಗಳಿಂದ ಹೋಂಡಾ ಶೋ ರೂಂಗ್ರಾಹಕರಿಗೆ ನಿರಂತರ ಸೇವೆಸಲ್ಲಿಸುತ್ತಿದೆ – ನಟರಾಜ್ ಹೆಚ್ .ನಾಗರಹಳ್ಳಿ
Date:
