ಹೊಸಮನೆ ಹಾಗೂ ಶರಾವತಿನಗರ ಬಡಾವಣೆಯ ರಸ್ತೆಗಳಿಗೆ ಹಂಪ್ಸ್ ಗಳನ್ನು ನಿರ್ಮಿಸುವುದು ಅತ್ಯವಶ್ಯಕವಾಗಿದ್ದು, ಸುಮಾರು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಈಗಾಗಲೇ ಕಳೆದ ಕೆಲವು ತಿಂಗಳ ಹಿಂದೆ ಹೊಸಮನೆ ಮತ್ತು ಶರಾವತಿ ನಗರಕ್ಕೆ ಹಾದು ಹೋಗುವ ಚಾನೆಲ್ ಪಕ್ಕದ ರಸ್ತೆ ನಾಗಪ್ಪ ದೇವಸ್ಥಾನದ ಹತ್ತಿರ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿ ಓರ್ವ ವಿದ್ಯಾರ್ಥಿಯು ಮರಣ ಹೊಂದಿದ್ದು, ಮತ್ತೊಬ್ಬ ಯುವಕನು ಚಿಂತಾಜನಕ ಸ್ಥಿತಿಯಲ್ಲಿ ಇಂದಿಗೂ ಇದ್ದು ಹೊಸಮನೆ ಹಾಗೂ ಶರಾವತಿ ನಗರ ಬಡಾವಣೆಯ ರಸ್ತೆಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು. ಈ ರಸ್ತೆಗಳಲ್ಲಿ ಕೆಲ ವಾಹನ ಸವಾರರು ರಭಸವಾಗಿ ವಾಹನಗಳನ್ನು ಚಲಿಸುತ್ತಿದ್ದು, ಅಪಘಾತಗಳು ಸಂಭವಿಸಿ, ಶಾಲಾ ಮಕ್ಕಳು ಹಿರಿಯ ನಾಗರಿಕರು ರಸ್ತೆಯಲ್ಲಿ ಓಡಾಡುವುದಕ್ಕೆ ಭಯಪಡುತ್ತಿದ್ದು, ಇದರಿಂದ ಈ ಭಾಗದ ನಾಗರಿಕರು ದಿನನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದುಹಲವು ಬಾರಿ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದು ಮನವಿ ಮಾಡಿದರು.
ಸ್ಮಾರ್ಟ್ ಸಿಟಿ ಅಧಿಕಾರಿಗಳು ನಮ್ಮ ಯೋಜನೆಯಲ್ಲಿ ರಸ್ತೆಗಳಿಗೆ ಹಂಪ್ಸ್ ಗಳನ್ನು ಹಾಕಿಸಲು ನಿರ್ದೇಶನ ಇರುವುದಿಲ್ಲ ಎಂದು ಸಬೂಬು ಹೇಳಿದ್ದು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣವಾದ ಈ ರಸ್ತೆಗಳು ಮಹಾನಗರ ಪಾಲಿಕೆಯ ಸರ್ಪದಿಗೆ ಒಳಪಟ್ಟಿದ್ದು. ಈಗಾಗಲೇ ಮಹಾನಗರ ಪಾಲಿಕೆಯಿಂದ ನಗರದ ಕೆಲವು ಮುಖ್ಯ ರಸ್ತೆಗಳಲ್ಲಿ ವೈಜ್ಞಾನಿಕವಾಗಿ ಹಂಪ್ಸ್ ಗಳನ್ನು ನಿರ್ಮಿಸಿದ್ದು. ಅದರಂತೆ ಹೊಸಮನೆ ಮತ್ತು ಶರಾವತಿ ನಗರ ಬಡಾವಣೆಯಲ್ಲಿ ಹಾದು ಹೋಗುವ ಮುಖ್ಯರಸ್ತೆಗಳಿಗೆ ಅಂದರೆ ಹೊಸಮನೆ ಬಡಾವಣೆಯ ಮೊದಲನೇ ಮುಖ್ಯ ರಸ್ತೆಯಿಂದ – ಆರನೇ ಮುಖ್ಯರಸ್ತೆವರೆಗೆ , ಪ್ರಮುಖವಾಗಿ ಲಕ್ಷ್ಮಿ ಟಾಕೀಸ್ ಚಿತ್ರಮಂದಿರದ ಹತ್ತಿರ ಚಾನೆಲ್ ಬಲಭಾಗದಿಂದ ಶರಾವತಿ ನಗರ ಚಾನಲ್ ಬ್ರಿಡ್ಜ್ ವರೆಗೆ ಇರುವ ರಸ್ತೆಗೆ ಹಾಗೂ ಶರಾವತಿ ನಗರ ಆದಿಚುಂಚನಗಿರಿ ಶಾಲೆ ಹತ್ತಿರ , ಎ ಮತ್ತು ಬಿ ಬ್ಲಾಕ್ ನಲ್ಲಿ ಹಾದು ಹೋಗುವ ಮುಖ್ಯ ರಸ್ತೆಗಳಿಗೆ ಕೂಡಲೇ ಮಹಾನಗರ ಪಾಲಿಕೆಯಿಂದ ವೈಜ್ಞಾನಿಕವಾಗಿ ಹಂಪ್ಸ್ ಗಳನ್ನು ನಿರ್ಮಿಸಿ ಅಪಘಾತಗಳನ್ನು ತಡೆಗಟ್ಟಬೇಕೆಂದು ಪಾಲಿಕೆಯ ಆಯುಕ್ತರಿಗೆ ಮಾಜಿ ವಿರೋಧ ಪಕ್ಷದ ನಾಯಕರಾದ ರೇಖಾ ರಂಗನಾಥ್ ಅವರ ನೇತೃತ್ವದಲ್ಲಿ ಸ್ಥಳೀಯರು ಮನವಿ ಮಾಡಿದರು.
ಮನವಿ ಸಂದರ್ಭದಲ್ಲಿ ಹೊಸಮನೆ ವಾರ್ಡಿನ ಅಧ್ಯಕ್ಷ ರಾಜೇಶ್ ಮಂದಾರ, ಪಂಚ ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಬಸವರಾಜ್, ಸ್ಥಳೀಯರಾದ ಕೆ ಎಲ್ ಪವನ್, ರಾಘವೇಂದ್ರ ರಾವ್, ಶ್ರೀಕಾಂತ್, ಹರೀಶ್ ಹಾಗೂ ಇತರರು ಇದ್ದರು
