Sri Ramakrishna Vidyaniketan ಶಿವಮೊಗ್ಗ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶ್ರೀ ರಾಮಕೃಷ್ಣ ವಿದ್ಯಾನಿಕೇತನ, ಗೋಪಾಳ ಇದರ ಸಂಯುಕ್ತಾಶ್ರಯದಲ್ಲಿ ಇಂದು ಆರಂಭಗೊಂಡ 2025 – 26ರ ಸಾಲಿನ 14 ರಿಂದ 17 ವಯೋಮಿತಿಯ ಬಾಲಕ, ಬಾಲಕಿಯರ ಈಜು ಕ್ರೀಡಾಕೂಟವನ್ನು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಅವರು ಉದ್ಘಾಟಿಸಿದರು.
ಅವರು ಮಾತನಾಡುತ್ತಾ ಪ್ರತಿ ಮಗುವಿನ ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಬೆಳೆಯಲು ಕ್ರೀಡೆ ಸಹಕಾರಿ ಈಜು ಸೇರಿದಂತೆ ಇತರ ಕ್ರೀಡೆಗಳು ಹಾಗೂ ವ್ಯಾಯಾಮ ಮಕ್ಕಳಲ್ಲಿ ಮಾನಸಿಕ ಪ್ರೌಢತೆಯನ್ನು ಬೆಳೆಸುತ್ತದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪ್ರಕಾಶ್, ಗಿಡ ಮತ್ತು ಯುವಜನ ಸಬಲೀಕರಣ ಇಲಾಖೆಯ ಉಪನಿಷಕ ರೇಖ್ಯಾನಾಯ್ಕ್ ಅವರು ಉಪಸ್ಥಿತರಿದ್ದರು.
Sri Ramakrishna Vidyaniketan ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕೃಷ್ಣ ವಿದ್ಯಾನಿಕೇತನದ ಅಧ್ಯಕ್ಷ ಡಾ. ಡಿ. ಆರ್. ನಾಗೇಶ್ ವಹಿಸಿದ್ದು, ಕಾರ್ಯದರ್ಶಿ ಶೋಭಾ ವೆಂಕಟರಮಣ, ಟಿ.ಪಿ. ಚಂದ್ರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.
ಕುಮಾರಿ ಕವನ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ತೀರ್ಥೇಶ್ ಸ್ವಾಗತಿಸಿದರು. ಹಿರಿಯ ಶಿಕ್ಷಕ ಟಿ.ವಿ. ಗಜೇಂದ್ರನಾಥ್ ವಂದಿಸಿದರು.
ಗೋಪಾಳದ ರಾಮಕೃಷ್ಣ ವಿದ್ಯಾ ನಿಕೇತನದ ಪಕ್ಕದಲ್ಲಿರುವ ಕ್ರೀಡಾ ಸಂಕೀರ್ಣದ ಈಜು ಕೊಳದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ.
Sri Ramakrishna Vidyaniketan ಈಜು ಸೇರಿದಂತೆ ಇತರ ಕ್ರೀಡೆಗಳು ಮಕ್ಕಳಲ್ಲಿ ಮಾನಸಿಕ ಪ್ರೌಢತೆ ಬೆಳೆಸುತ್ತವೆ- ಮಂಜುನಾಥ್
Date:
