Department of Kannada and Culture ವಿಶ್ವಕರ್ಮವು ಪುರಾತನ ಕಾಲದಿಂದ ನಡೆದು ಬಂದ ಸಮಾಜವಾಗಿದ್ದು, ಈ ಸಮಾಜದ ಗುರುಗಳು ಎಲ್ಲಾ ದೇವರಿಗೂ ಗುರುಗಳಾಗಿದ್ದರೆಂದು ಹೇಳಲಾಗುತ್ತದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಕುವೆಂಪು ರಂಗಮAದಿರಲ್ಲಿ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Department of Kannada and Culture ಭರತಖಂಡವು ಧಾರ್ಮಿಕ ಹಾಗೂ ಜನ ಜೀವನ ಸಂಸ್ಕೃತಿಯಿAದ ನಡೆದು ಬಂದಿದೆ. ಇಲ್ಲಿ ಉತ್ತಮ ಗುರು ಪಡೆದರೆ ಮಾತ್ರ ಉತ್ತಮ ಸಂಸ್ಕೃತಿಯನ್ನು ಪಡೆಯಲು ಸಾಧ್ಯ. ಇಂತಹ ಗುರುವಿನ ಸಂಸ್ಕೃತಿಯನ್ನು ವಿಶ್ವಕರ್ಮ ಸಮಾಜ ಒಳಗೊಂಡಿದ್ದು, ಈ ಸಮಾಜದಲ್ಲಿ ಹುಟ್ಟಿದ ನೀವೆಲ್ಲಾ ಭಾಗ್ಯವಂತರು ಎಂದರು.
Department of Kannada and Culture ವಿಶ್ವಕರ್ಮರು ಪುರಾತನವಾಗಿ ಎಲ್ಲ ಸಮಾಜದ ಗುರು ಮತ್ತು ದೇವರಾಗಿದ್ದರೆಂದು ಹೇಳಲಾಗುತ್ತದೆ- ಸಿ.ಎಸ್.ಚಂದ್ರಭೂಪಾಲ್
Date:
