Bharat Scouts and Guides Shimoga ಸೃಜನಾತ್ಮಕ ಭಾವನೆಯನ್ನು ವ್ಯಕ್ತಪಡಿಸುವ ವಿಧಾನವೇ ಚಿತ್ರಕಲೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಸ್ಕೌಟರ‍್ಸ್ ಮತ್ತು ಗೈಡರ‍್ಸ್ ಸಮಾವೇಶದಲ್ಲಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರ ಮಾರ್ಗದರ್ಶನ ಅತ್ಯಂತ ಅವಶ್ಯಕ ಎಂದು ತಿಳಿಸಿದರು.
ವಿನೋಬನಗರ ಬಡಾವಣೆಯಲ್ಲಿ ಮಕ್ಕಳಿಗೆ ಚಿತ್ರಕಲಾ ಶಿಕ್ಷಣ ನೀಡುತ್ತಿರುವ ನಿವೃತ್ತ ಶಿಕ್ಷಕಿ ಮತ್ತು ಸ್ಕೌಟ್ ಶಿಕ್ಷಕಿಯಾಗಿ 25 ವರ್ಷಗಳಿಂದ ಸ್ಕೌಟ್ ಮತ್ತು ಗೈಡ್ ಚಳುವಳಿಯಲ್ಲಿ ತೊಡಗಿಸಿಕೊಂಡು ಮಕ್ಕಳಿಗೆ ಸ್ಥಳೀಯ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆಯಲು ಮಾರ್ಗದರ್ಶನ ನೀಡುತ್ತಿರುವ ಕಾತ್ಯಾಯಿನಿ ಸಿ. ಎಸ್. ಅವರನ್ನು ಸನ್ಮಾನಿಸಲಾಯಿತು.
ಕಾತ್ಯಾಯಿನಿ ಅವರು 33 ವರ್ಷಗಳಿಗೂ ಹೆಚ್ಚು ವರ್ಷ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಚಿತ್ರಕಲಾ ಮತ್ತು ಕೌಶಲ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರವೂ ಸ್ಕೌಟ್ ಗೈಡ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗೆ ಶಿವಮೊಗ್ಗ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ತಂದೆಯವರ ಮಾರ್ಗದರ್ಶನದಲ್ಲಿ, ಅವರ ಪ್ರೋತ್ಸಾಹದಿಂದ ಸಾಂಪ್ರದಾಯಿಕ ಚಿತ್ರ ಮತ್ತು ಹಸೆ ಚಿತ್ರಗಳಲ್ಲಿ ಬಾಲ್ಯದಿಂದಲೇ ತೊಡಗಿಸಿಕೊಂಡಿದ್ದಾರೆ.
Bharat Scouts and Guides Shimoga ಕಾತ್ಯಾಯಿನಿಯವರು ಶಿಕ್ಷಕಿಯಾಗಿ ರಾಜ್ಯ, ರಾಷ್ಟ್ರ ಮಟ್ಟದ ಜಂಬೂರೀ, ಜಂಬೂರೆಟ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಗೈಡ್ ವಿಭಾಗದ ತರಬೇತಿ ನಾಯಕಿ ಆಗಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವಾರು ತರಬೇತಿ ಶಿಬಿರಗಳಲ್ಲಿ ನಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಹಿರಿಯ ಸ್ಕೌಟರ್ ವೈ.ಆರ್.ವೀರೇಶಪ್ಪ, ಜಿಲ್ಲಾ ರೋವರ್ ಆಯುಕ್ತ ಕೆ.ರವಿ, ಜಿಲ್ಲಾ ಸ್ಕೌಟ್ ಆಯುಕ್ತ ಎಸ್.ಜಿ.ಆನಂದ್, ನೂತನ ಜಿಲ್ಲಾ ಆಯುಕ್ತೆ ಲಕ್ಷ್ಮೀ ಕೆ. ರವಿ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ, ಸಹಾಯಕ ಜಿಲ್ಲಾ ಆಯುಕ್ತ ಹೆಚ್.ಪರಮೇಶ್ವರ, ಶ್ರೀನಿವಾಸ್ ವರ್ಮಾ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಘನಶ್ಯಾಮ್ ಗಿರಿಮಾಜಿ, ಅಶ್ವಿನಿ ದೊರೈ, ದೊರೈ, ನಗರದ ವಿವಿಧ ಶಾಲಾ ಕಾಲೇಜಿನ ಶಿಕ್ಷಕ, ಶಿಕ್ಷಕಿಯರು, ಉಪನ್ಯಾಸಕರು, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಜೇಶ್ ಅವಲಕ್ಕಿ, ಯುವ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
Bharat Scouts and Guides Shimoga ಸೃಜನಾತ್ಮಕ ಭಾವನೆಯನ್ನು ವ್ಯಕ್ತಪಡಿಸುವ ವಿಧಾನವೇ ಚಿತ್ರಕಲೆ :ಶಕುಂತಲಾ ಚಂದ್ರಶೇಖರ್
Date:
