Rotary Club Shimoga ಸಾರ್ವಜನಿಕರು ರಸ್ತೆ ಸಂಚಾರ ಸುರಕ್ಷತೆ ನಿಯಮಗಳನ್ನು ಪಾಲಿಸಬೇಕು ಎಂದು ರೋಟರಿ
ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ರೋಟರಿ ಕ್ಲಬ್ ತರೀಕೆರೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದರಿಂದ ಅನೇಕ ಕಡೆಗಳಲ್ಲಿ ಅಪಘಾತ ಸಂಭವಿಸಿರುವುದನ್ನು ನೋಡಬಹುದಾಗಿದೆ. ರಸ್ತೆ ಸುರಕ್ಷತಾ ಅಭಿಯಾನ ಹಮ್ಮಿಕೊಂಡಿರುವುದು ತುಂಬಾ ಒಳ್ಳೆಯ ಕೆಲಸ. ಈ ರೀತಿ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಬಿ ಮಾತನಾಡಿ, ಜಂಟಿ ಸಭೆಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಸ್ಪರ ಹಂಚಿಕೊಂಡು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಸೇವಾ ಕಾರ್ಯ ಹಮ್ಮಿಕೊಳ್ಳೋಣ, ಜಂಟಿ ಸಭೆಯಿಂದ ಸದಸ್ಯರಲ್ಲಿ ಪರಸ್ಪರ ಸ್ನೇಹ ಸಂಬಂಧಗಳು ಬೆಳೆಯುತ್ತವೆ. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು. ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಅನ್ನು ಧರಿಸಬೇಕು ಎಂದರು.
ವಲಯ ಸೇನಾನಿ ಕಿರಣ್ ಕುಮಾರ್ ಜಿ ಮಾತನಾಡಿ, ಎರಡು ಕ್ಲಬ್‌ನ ನಡುವೆ ಉತ್ತಮ ಬಾಂಧವ್ಯ ಇದ್ದು, ಇದು ಎರಡನೇ ಜಂಟಿ ಸಭೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜಂಟಿ ಸಭೆಗಳನ್ನು ಮಾಡೋಣ ಎಂದರು. ಮಾಜಿ ಸಹಾಯಕ ಗವರ್ನರ್ ಡಾ. ಶರತ್ ಮಾತನಾಡಿ, ಸಂಚಾರ ನಿಯಮವನ್ನು ಪಾಲಿಸಿ, ಜೀವವನ್ನು ಉಳಿಸಿ ಎಂದರು.
Rotary Club Shimoga ತರೀಕೆರೆ ರೋಟರಿ ಕ್ಲಬ್ ಸದಸ್ಯರು ಹಮ್ಮಿಕೊಂಡಿದ್ದ ತರೀಕೆರೆಯಿಂದ ಕೊಡಚಾದ್ರಿ ತನಕ ಬೈಕ್ ರಸ್ತೆ ಸುರಕ್ಷತಾ ಅಭಿಯಾನದಲ್ಲಿ 25 ಸದಸ್ಯರು ಭಾಗವಹಿಸಿದ್ದರು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ಗೆ ಭೇಟಿ ನೀಡಿ ಪರಸ್ಪರ ಧ್ವಜವನ್ನು ವಿನಿಮಯ ಮಾಡಿಕೊಂಡರು.
ರೋಟರಿ ಕ್ಲಬ್ ತರೀಕೆರೆ ಅಧ್ಯಕ್ಷ ರವಿಕುಮಾರ್ ಮತ್ತು ಕಾರ್ಯದರ್ಶಿ ಪ್ರವೀಣ್ ತಂಬಿ, ವಲಯ ಸೇನಾನಿ ಕಿರಣ್ ಕುಮಾರ್ ಜಿ, ಸಹ ಕಾರ್ಯದರ್ಶಿ ಮೋಹನ್ ಕುಮಾರ್, ಮಾಜಿ ಸಹಾಯಕ ಗವರ್ನರ್ ಗೋವರ್ಧನ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸದಸ್ಯರಾದ ಜಗದೀಶ್, ಬಲರಾಮ್, ಈಶ್ವರ ಬಿವಿ ಹಾಗೂ ಎರಡು ರೋಟರಿ ಕ್ಲಬ್ ಸದಸ್ಯರು ಭಾಗವಹಿಸಿದ್ದರು.
