Teacher’s Day ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದು ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಕೃಷಿ ನಗರದಲ್ಲಿರುವ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ವತಿಯಿಂದ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ವಸತಿ ಶಾಲೆಯ ನಾಲ್ವರು ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಮಾತನಾಡಿದರು. ಮಕ್ಕಳ ಭವಿಷ್ಯ ರೂಪಿಸಿ ಉನ್ನತ ಸಾಧನೆ ಮಾಡುವಂತೆ ಪ್ರೋತ್ಸಾಹಿಸುವವರು ಶಿಕ್ಷಕರು ಎಂದು ತಿಳಿಸಿದರು.
ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜತೆಯಲ್ಲಿ ವಿವಿಧ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಜೋನಲ್ ಲೆಫ್ಟಿನೆಂಟ್ ಶಂಕರ್ ಎಸ್.ಪಿ. ಮಾತನಾಡಿ, ಗುರು ದೇವರ ಸಮಾನ. ಮೌನದಲ್ಲೂ ಬೆಳಕು ಹಚ್ಚುವ ಗುರುಗಳು ನಿಜವಾದ ದೈವಸಮಾನರು ಎಂದು ಶ್ಲಾಘಿಸಿದರು. ರೋಟರಿ ಸಂಸ್ಥೆಯ ಜಯಪ್ರಕಾಶ್ ಮಾತನಾಡಿ, ಸೇವಾಭಾವದಿಂದ ತುಂಬಿದ ಕಾರ್ಯದಿಂದ ನಾವು ಪ್ರೇರಣೆಯನ್ನು ಪಡೆಯಬೇಕು. ಶಿಕ್ಷಕರ ಸೇವೆ ಶಾಶ್ವತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರಿಗೆ ಕಿರು ಕಾಣಿಕೆ ನೀಡಿದರು.
ಶಾಲೆಯ ರಾಘವೇಂದ್ರ ವಿ. ಪಾಟೀಲ್, ಮಾಧವಮೂರ್ತಿ, ಟಿ.ಜಯರಾಮ ಭೋವಿ ಹಾಗೂ ಪ್ರಭಾವತಿ ಎಸ್. ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರ ಪರಿಶ್ರಮವನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸ ತಂದಿದೆ ಎಂದು ಸನ್ಮಾನಿತರು ಅನಿಸಿಕೆ ವ್ಯಕ್ತಪಡಿಸಿದರು.
Teacher’s Day ಎಂ ಆರ್ ಬಸರಾಜ್, ರಾಜೇಶ್, ಧನರಾಜ್, ಶಂಕರ್, ನಿತಿನ್, ಮಲ್ಲೇಶ್, ರೋಟರಿ ಕ್ಲಬ್ ಸದಸ್ಯರು ಭಾಗವಹಿಸಿದ್ದರು.
Teacher’s Day ಮಕ್ಕಳ ಭವಿಷ್ಯ ರೂಪಿಸಿ ಉನ್ನತ ಸಾಧನೆಗೆ ಪ್ರೇರಣೆ ನೀಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ.- ಕೆ.ಎಸ್.ವಿಶ್ವನಾಥ ನಾಯಕ್
Date:
