S.N. Channabasappa ವಕ್ಫ್ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ.. ಸಂಪೂರ್ಣ ಕಾಯ್ದೆಗೆ ತಡೆ ನೀಡುವುದನ್ನು ನಿರಾಕರಿಸಿ, ಕೆಲ ನಿಬಂಧನೆಗಳಿಗೆ ಮಾತ್ರ ತಾತ್ಕಾಲಿಕ ತಡೆ ನೀಡಿರುವುದು ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಶಾಸಕರಾದ ಎಸ್.ಎನ್. ಚೆನ್ನಬಸಪ್ಪ
ಹಿಂದೂಗಳ ದೇವಾಲಯಗಳು, ಧಾರ್ಮಿಕ ಆಸ್ತಿಗಳು ಮತ್ತು ಸಾಂಸ್ಕೃತಿಕ ಪರಂಪರೆಗಳ ಮೇಲೆ ಅತಿಕ್ರಮಣವಾಗದಂತೆ ಕಾಯುವ ಹಕ್ಕು ನಮ್ಮ ಪ್ರತಿಯೊಬ್ಬರಿಗೂ ಇದೆ. ಈ ತೀರ್ಪು ಆ ಹಕ್ಕನ್ನು ಗೌರವಿಸುವ ಮಹತ್ವದ ಹೆಜ್ಜೆಯಾಗಿದೆ. ಶತಮಾನಗಳಿಂದ ಹಿಂದೂಗಳು ಕಟ್ಟಿಕೊಂಡು ಬಂದ ಪವಿತ್ರ ತಾಣಗಳು, ಧಾರ್ಮಿಕ ಆಸ್ತಿಗಳು ಮತ್ತು ಸಂಸ್ಕೃತಿಯ ಸಂರಕ್ಷಣೆಯ ಜೊತೆಗೆ ರೈತರ ಜಮೀನುಗಳ ಹಿತದೃಷ್ಟಿಯಲ್ಲಿಯೂ ನ್ಯಾಯಾಂಗ ನೀಡಿದ ಭರವಸೆ ಇದಾಗಿದೆ ಎಂದು ಹೇಳಿದ್ದಾರೆ.
ಈ ತೀರ್ಪು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ನಿಲುವಿಗೆ ಬೆಂಬಲ ನೀಡಿದಂತೆಯೇ, ಹಿಂದು ಸಮಾಜದ ಆತಂಕ ಮತ್ತು ಹಕ್ಕುಗಳಿಗೆ ತೃಪ್ತಿ ನೀಡಿದೆ. ಇದರಿಂದ ಜನರ ಧ್ವನಿಗೆ ಗೌರವ ಸಿಕ್ಕಿದೆ, ನ್ಯಾಯಾಂಗದ ಮೇಲೆ ವಿಶ್ವಾಸ ಇನ್ನಷ್ಟು ಬಲವಂತವಾಗಿದೆ. ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಗೌರವಾನ್ವಿತ ನ್ಯಾಯಮೂರ್ತಿ ಎ.ಜಿ. ಮಸೀಹ್ ಅವರ ಪೀಠ ನೀಡಿದ ಈ ತೀರ್ಪು ನ್ಯಾಯಾಂಗದ ತಟಸ್ಥತೆ, ಸಮತೋಲನ ಮತ್ತು ದೂರದೃಷ್ಟಿಯ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.
S.N. Channabasappa ನ್ಯಾಯಾಂಗದ ಈ ತೀರ್ಪು, ಕಾನೂನು ಪ್ರಕ್ರಿಯೆಯ ಮೇಲೆ ನಾಗರಿಕರ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ. ಮುಂದಿನ ದಿನಗಳಲ್ಲಿ ಈ ಕಾಯ್ದೆಗೆ ಸಂಬಂಧಿಸಿದಂತೆ ನಡೆಯಲಿರುವ ವಿಚಾರಣೆಯಲ್ಲಿ, ನ್ಯಾಯಾಂಗವು ದೇಶದ ಸಂವಿಧಾನಬದ್ಧ ಮೌಲ್ಯಗಳಿಗೆ ಅನುಗುಣವಾಗಿ ತೀರ್ಪು ನೀಡಲಿದೆ ಎಂಬ ವಿಶ್ವಾಸ ನಮ್ಮದಲ್ಲಿದೆ ಎಂದು ಹೇಳಿದ್ದಾರೆ..
