Sri Ramakrishna Vidyaniketana ಶಿವಮೊಗ್ಗ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶ್ರೀ ರಾಮಕೃಷ್ಣ ವಿದ್ಯಾನಿಕೇತನ, ಗೋಪಾಳ ಇದರ ಸಂಯುಕ್ತಾಶ್ರಯದಲ್ಲಿ 2025 – 26ರ ಸಾಲಿನ 14 ರಿಂದ 17 ವಯೋಮಿತಿಯ ಬಾಲಕ, ಬಾಲಕಿಯರ ಈಜು ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ಗೋಪಾಳದ ರಾಮಕೃಷ್ಣ ವಿದ್ಯಾ ನಿಕೇತನದ ಪಕ್ಕದಲ್ಲಿರುವ ಕ್ರೀಡಾ ಸಂಕೀರ್ಣದ ಈಜು ಕೊಳದಲ್ಲಿ ಈ ಸ್ಪರ್ಧೆ ನಡೆಯುತ್ತಿದ್ದು, ಭಾಗವಹಿಸುವ ಮಕ್ಕಳು ಹಾಜರಾಗುವಂತೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪ್ರಕಾಶ್ ಕೋರಿದ್ದಾರೆ.
ಅಂದು ಬೆಳಗ್ಗೆ 10 ಗಂಟೆಗೆ ಈ ಕಾರ್ಯಕ್ರಮವನ್ನು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಂಜುನಾಥ ಅವರು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕೃಷ್ಣ ವಿದ್ಯಾನಿಕೇತನದ ಅಧ್ಯಕ್ಷ ಡಾ. ಡಿ.ಆರ್. ನಾಗೇಶ್ ವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪ್ರಕಾಶ್, ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾ ವೆಂಕಟರಮಣ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.
ನಿಯಮಗಳು:
Sri Ramakrishna Vidyaniketana ಸೆಪ್ಟೆಂಬರ್ 18ರ ಬೆಳಿಗ್ಗೆ 9ಗಂಟೆಯೊಳಗೆ ಈಜುಕೊಳದ ಬಳಿ ಸ್ಪರ್ಧಾಳುಗಳು ಆಗಮಿಸಿ ವರದಿ ಮಾಡಿಕೊಳ್ಳಬೇಕು.
ಬೇರೆ ತಾಲೂಕಿನ ಸ್ಪರ್ದಾಳುಗಳು ತಮ್ಮ ತಾಲೂಕಿನ ಟಿ ಓ ಪಿ ಲಾಗಿನ್ ನಲ್ಲಿ ಅಪ್ಲೋಡ್ ಮಾಡಿದ ಎಲಿಜಬಿಲಿಟಿ ಸರ್ಟಿಫಿಕೇಟ್ ಅನ್ನು ಕಡ್ಡಾಯವಾಗಿ ತರತಕ್ಕದ್ದು.
ಎಲ್ಲಾ ಸ್ಪರ್ದಾಳು ಸ್ಪರ್ದಾಳುಗಳು ಕಡ್ಡಾಯವಾಗಿ ಈಜು ಸಮವಸ್ತ್ರವನ್ನು ಧರಿಸಬೇಕು.
Sri Ramakrishna Vidyaniketana ಸೆ.18 ರಂದು ಜಿಲ್ಲಾ ಮಟ್ಟದ ಈಜು ಸ್ಪರ್ಧೆ
Date:
