Chamber Of Commerce Shivamogga ಶಿವಮೊಗ್ಗ ನಗರದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಸೆಪ್ಟೆಂಬರ್ 16 ರಂದು ಬೆಳಗ್ಗೆ 10.00 ಕ್ಕೆ “ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 56 ನೇ ಸಭೆಯಿಂದ ಅನುಮೋದನೆ
ಗೊಂಡ ಜಿಎಸ್ ಟಿ 2.00 – ಎರಡನೇ ಹಂತದ ಸರಕು ಮತ್ತು ಸೇವಾ ತೆರಿಗೆ ಸುಧಾರಣೆಗಳಿಂದ ವಾಣಿಜ್ಯ ಮತ್ತು ಕೈಗಾರಿಕ. ವ್ಯಾಪಾರ, ಸಣ್ಣ ಕೈಗಾರಿಕೆ, ಚಿಲ್ಲರೆ ಮಾರುಕಟ್ಟೆ ಕ್ಷೇತ್ರಗಳ ಮೇಲೆ ಉಂಟಾದ ಪರಿಣಾಮಗಳ ಬಗ್ಗೆ ವಿಶ್ಲೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸರಕು ಮತ್ತು ಸೇವಾ ತೆರಿಗೆಯ ಎರಡು ಹಂತದ ತೆರಿಗೆ ರಚನೆಯ ಮರು ವರ್ಗಿಕರಣದ ಪ್ರಯೋಗಾತ್ಮಕ ವಿಶ್ಲೇಷಣೆ ಎರಡನೇ ಹಂತದ ತೆರಿಗೆ ಸುಧಾರಣೆಯ ಅನುಸರಣೆ ಪ್ರಕ್ರಿಯೆಗಳ ಕಾರ್ಯವಿಧಾನ, ಜಿ ಎಸ್ ಟಿ ಕಾಯ್ದೆಯಲ್ಲಿ ಇತ್ತೀಚಿನ ತಿದ್ದುಪಡಿಗಳ ಅಳವಡಿಕೆಯಿಂದ ಬಗ್ಗೆ ವಿಶ್ಲೇಷಣೆ, ಉಂಟಾಗುವ ಸಂಭಾವ್ಯ ಪರಿಣಾಮಗಳು ಬಗ್ಗೆ ಚರ್ಚಿಸಲಾಗುವುದು. ಭೋಜನ : ಮಧ್ಯಾಹ್ನ 1.30 ರಿಂದ 2.00 , ನಿಮ್ಮ ಎಲ್ಲಾ ಪ್ರಶ್ನೆ ಗಳಿಗೆ ಸೆಮಿನಾರ್ ನ ಕೊನೆಗೆ ಮಧ್ಯಾಹ್ನದ ಅವಧಿಯಲ್ಲಿ ಪರಿಹಾರಕ್ಕೆ ಪ್ರಯತ್ನ ಖ್ಯಾತ CA ಜತಿನ್ ಕ್ರಿಸ್ಟೋಪರ್ ಸೆಮಿನಾರ್ ನಡೆಸಿ ಕೊಡಲಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ಹಿರಿಯ ಅಧಿಕಾರಿಗಳು ಉಪಸ್ಥಿತರಿರುವರು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಅಧ್ಯಕ್ಷತೆ ವಹಿಸುವರು. Chamber Of Commerce Shivamogga ಸೆಮಿನಾರ್ ನ ಈ ಉಪಯುಕ್ತ ಕಾರ್ಯಕ್ರಮಕ್ಕೆ ತಪ್ಪದೆ ಆದಷ್ಟು ಬೇಗ ತಮ್ಮ ಹೆಸರನ್ನು 7019663300 ಸಂಖ್ಯೆಯ ಮೊಬೈಲ್ ಗೆ ಕರೆ ಮಾಡುವುದರ ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಂಡು ಸಕ್ರಿಯವಾಗಿ ಭಾಗವಹಿಸಲು ಈ ಮೂಲಕ ತಮ್ಮಲ್ಲಿ ಕೋರಲಾಗಿದೆ
Chamber Of Commerce Shivamogga ಸೆಪ್ಟೆಂಬರ್ 16 ಕ್ಕೆ ಜಿಎಸ್ ಟಿ 2.00 -ಎರಡನೇ ಹಂತದ ಸರಕು ಮತ್ತು ಸೇವಾ ತೆರಿಗೆ ಸುಧಾರಣೆಗಳ ಕುರಿತು ಉಪನ್ಯಾಸ
Date:
