Shimoga Housing Co-operative Society ಪ್ರತಿಷ್ಠಿತ ಶಿವಮೊಗ್ಗ ಹೌಸಿಂಗ್ ಕೋ – ಆಪರೇಟಿವ್ ಸೊಸೈಟಿ ವತಿಯಿಂದ ರವೀಂದ್ರ ನಗರದ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ನಿರ್ಮಿತ ಬಲಮುರಿ ಶ್ರೀ ಗಣಪತಿ ದೇವಾಲಯದ ಸಭಾಂಗಣದಲ್ಲಿ ಸೊಸೈಟಿಯ ಗೌರವಾನ್ವಿತ ಸದಸ್ಯರುಗಳ ಪ್ರತಿಭಾವಂತ ಮಕ್ಕಳಿಗೆ “ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷರು , ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪನವರು ವಹಿಸಿದ್ದರು.
Shimoga Housing Co-operative Society ಕಾರ್ಯಕ್ರಮದಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ಸಿ ಹೊನ್ನಪ್ಪ, ಖಜಾಂಚಿ ಕೆ ರಂಗನಾಥ್, ಹಿರಿಯ ನಿರ್ದೇಶಕರಾದ ಉಮಾಶಂಕರ್ ಉಪಾಧ್ಯ, ಎಸ್ ಪಿ ಶೇಷಾದ್ರಿ, ಎಂ ಪ್ರವೀಣ್ ಕುಮಾರ್, ಕೆ ಜಿ ರಾಘವೇಂದ್ರ, ಎಸ್ ಎಂ ಕುಮಾರ್ ,ನಟರಾಜ್ ಶಾಸ್ತ್ರಿ, ಶ್ರೀನಿವಾಸ್ ಕರಿಯಣ್ಣ, ನಿರ್ಮಲ ಕಾಶಿ, ವೇದಾವತಿ ಕೆ ಎಸ್, ಸೊಸೈಟಿ ಸಿಬ್ಬಂದಿಗಳು ಹಾಗೂ ಸೊಸೈಟಿಯ ಸದಸ್ಯರ ಪ್ರತಿಭಾವಂತ ಮಕ್ಕಳು ಉಪಸ್ಥಿತರಿದ್ದರು.
