Rotary Club Shimoga ಮಕ್ಕಳಲ್ಲಿ ನಾಯಕತ್ವ ಗುಣ ಹಾಗೂ ಸಂವಹನ ಕೌಶಲ್ಯ ವೃದ್ಧಿಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ವೈಸ್ ಚೇರ್ಮನ್ ಮುಸ್ತಾಕ್ ಅಲಿ ಷಾ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸಂಸ್ಥೆ ವತಿಯಿಂದ ವಿನೋಬನಗರದ ಡಿವಿಎಸ್ ಪ್ರೌಢಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಉದ್ಘಾಟಿಸಿ ಮಾತನಾಡಿ, ಮಕ್ಕಳು ನಾಯಕರಾಗಿ ರೂಪುಗೊಳ್ಳುವಲ್ಲಿ ಅಗತ್ಯ ಮಾರ್ಗದರ್ಶನ ಇಂಟರಾಕ್ಟ್ ಕ್ಲಬ್‌ನಲ್ಲಿ ದೊರೆಯುತ್ತದೆ ಎಂದು ತಿಳಿಸಿದರು.
ವಲಯ ಸೇನಾನಿ ಕಿರಣ್ ಕುಮಾರ್ ಜಿ ಮಾತನಾಡಿ, ಸಕರಾತ್ಮಕ ವ್ಯಕ್ತಿತ್ವವು ಜೀವನದಲ್ಲಿ ಯಶಸ್ವಿಯಾಗಲು ನೆರವಾಗುತ್ತದೆ. ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಬಿ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ರೋಟರಿ ಪಾತ್ರ ಮಹತ್ತರವಾದದ್ದು. ರೋಟರಿ ಸಂಸ್ಥೆಯ ಮೂಲ ಉದ್ದೇಶವೇ ಸೇವೆ. ನಾವು ಶಿಕ್ಷಣದ ಅಡಿಯಲ್ಲಿ ಅಪಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು ಮತ್ತು ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪರೀಕ್ಷೇ ಎದುರಿಸುವುದು ಹೇಗೆ, ರಸಪ್ರಶ್ನೆ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಪ್ರವಾಸ, ಪ್ರೌಢಾವಸ್ಥೆಯಲ್ಲಿ ಆಗುವ ದೈಹಿಕ ಬದಲಾವಣೆ, ಗುಡ್ ಟಚ್ ಬ್ಯಾಡ್ ಟಚ್, ಪರಿಸರ ಕಾಳಜಿ ಹಾಗೂ ರಸ್ತೆ ಸುರಕ್ಷಾ ನಿಯಮಗಳ ಬಗ್ಗೆ ಶಾಲೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
Rotary Club Shimoga ನೂತನ ಇಂಟರಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಸಂಜನಾ ಮತ್ತು ಕಾರ್ಯದರ್ಶಿಯಾಗಿ ಭಾರ್ಗವ ಅವರ ತಂಡಕ್ಕೆ ಮುಸ್ತಾಕ್ ಅಲಿ ಷಾ ಪ್ರಮಾಣವಚನ ಬೋಧಿಸಿದರು. ಇಂಟರಾಕ್ಟ್ ಕ್ಲಬ್ ಚೇರ್ಮನ್ ಗೀತಾ ಜಗದೀಶ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಜಯಶೀಲ್ ಶೆಟ್ಟಿ, ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಧರ್ಮೇಂದ್ರ ಸಿಂಗ್, ಸಂತೋಷ್, ನಟರಾಜ್, ಚಂದ್ರು ಜೆಪಿ, ಬಲರಾಮ್, ಜಗದೀಶ್, ಜ್ಯೋತಿ ಶ್ರೀ ರಾಮ್, ಆನ್ಸ್ ಕ್ಲಬ್ ಅಧ್ಯಕ್ಷೆ ರಾಜಶ್ರೀ ಬಸವರಾಜ್, ಮಧುರಾ ಧನಂಜಯ್, ರಾಜೇಶ್ವರಿ ಸಿಂಗ್, ಶಾಲೆ ಮುಖ್ಯೋಪಾಧ್ಯಾಯ ಲಕ್ಷ್ಮಣ್, ಶಿಕ್ಷಕಿ ಶ್ವೇತಾ ಉಪಸ್ಥಿತರಿದ್ದರು.
