Lions Club Shivamogga Sahyadri ಸಮಾಜ ಸೇವೆ ಯಲ್ಲಿ ಸದಾ ಮುಂಚೂಣಿಯ ಲ್ಲಿರುವ ಲಯನ್ಸ್ ಕ್ಲಬ್‌ನಿಂದ ಜಿಲ್ಲೆಯ ನವಲೆ ಗ್ರಾಮದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬಡ ಮತ್ತು ಫಲಾನುಭವಿಗಳಿಗೆ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಹಿರಿಯ ಸದಸ್ಯ ಡಾ. ಬಿರಾದಾರ್ ಅವರು ಮಾತನಾಡಿ, ಸಮಾಜದಿಂದ ನಾವು ಪಡೆದಿರುವುದನ್ನು ಸಮಾಜಕ್ಕೆ ಹಿಂದಿರುಗಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ನಮ್ಮ ಉದ್ದೇಶವಾ ಗಿದೆ. ಬಡವರ ಕಣ್ಣುಗಳಿಗೆ ಬೆಳಕು ನೀಡುವುದು ನಮ್ಮ ಕರ್ತವ್ಯ. ಇಂತಹ ಸೇವಾ ಕಾರ್ಯ ಕ್ರಮಗಳು ಮುಂದು ವರಿಯಲಿವೆ ಎಂದರು.
ನುರಿತ ವೈದ್ಯಕೀಯ ತಂಡವು ಪ್ರತಿಯೊಬ್ಬರಿಗೂ ನೇತ್ರ ತಪಾಸಣೆ ನಡೆಸಿ, ಅಗತ್ಯ ಸಲಹೆ ಹಾಗೂ ಚಿಕಿತ್ಸಾ ಮಾರ್ಗದರ್ಶನ ನೀಡಿತು. ದೃಷ್ಟಿ ದೋಷದಿಂದ ಬಳಲುತ್ತಿದ್ದವರನ್ನು ಗುರುತಿಸಿ, ಅವರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಶಸ್ತçಚಿಕಿತ್ಸೆಗೆ ಆಯ್ಕೆಯಾದ ಫಲಾನುಭ ವಿಗಳಿಗೆ ಶಂಕರ ಕಣ್ಣಿನ ಆಸ್ಪತ್ರೆಗೆ ಹಾಜರಾಗಲು ಸೂಚಿಸಲಾಯಿತು.
Lions Club Shivamogga Sahyadri ಹಿರಿಯ ಅಧಿಕಾರಿಗಳಾದ ಡಾ. ಕಿರಣ್ ಡಿ.ಬಿ.ಸಿ.ಎಸ್., ಕ್ಲಬ್‌ನ ಡಿಸ್ಟಿçಕ್ಟ್ ಕೋ ಆರ್ಡಿನೇಟರ್ ವಿ.ಟಿ. ರತ್ನಾಕರ್, ರೀಜನ್ ಚೇರ್‌ಮನ್ ಗಿರೀಶ್ ನಾಯಕ್, ಡಿಸ್ಟಿçಕ್ಟ್ ಕೋಆರ್ಡಿನೇಟರ್ ನಂದೀಶ ಎನ್.ಟಿ, ಕಾರ್ಯದರ್ಶಿ ಕುಮಾರ್, ಡಾ. ಪರಮೇಶ್ವರಪ್ಪ, ಅಪ್ಪು÷ಕುಟ್ಟಿ, ತಜಮ್ಮುಲ್ ಹುಸೇನ್, ರಾಜಮೋಹನ್ ಹೆಗ್ಡೆ, ಪೌಲ್ ಗೋವ್ಸ್, ಸುಖಿಲ್ ಎನ್ ಸೇರಿದಂತೆ ಹಲವಾರು ಸದಸ್ಯರು ಉಪಸ್ಥಿತ ರಿದ್ದರು. ಶಿಬಿರ ಮತ್ತು ಕನ್ನಡಕ ವಿತರಣೆಯ ಜಿಲ್ಲಾ ಸಂಯೋಜಕ ಶಿವಮೊಗ್ಗ ಆಪ್ಟಿಕಲ್‌ನ ನಂದೀಶ್ ಎನ್.ಟಿ. ಕನ್ನಡಕ ವಿತರಿಸಿದರು. ನೂರಾರು ಜನರು ಇದರ ಸದುಪಯೋಗ ಪಡೆದರು.
Lions Club Shivamogga Sahyadri ಬಡವರ ಕಣ್ಣುಗಳಿಗೆ ಬೆಳಕು ನೀಡುವುದು ನಮ್ಮ ಕರ್ತವ್ಯ- ಡಾ.ಬಿರಾದಾರ್.
Date:
