Bharat Scouts and Guides Shivamogga ಶಿವಮೊಗ್ಗ ದ ಸಿಹಿಮೊಗ್ಗೆ ಓಪನ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ,ಗೌರವ ಸನ್ಮಾನ್ಯ ರಾಜ್ಯಪಾಲರಿಂದ ಪಡೆದ ರಾಜ್ಯ ಪುರಸ್ಕಾರ ಪ್ರಶಸ್ತಿ ಪತ್ರಗಳನ್ನು ನೀಡುವ ಕಾರ್ಯಕ್ರಮವನ್ನು ಲೀಡರ್ ಟ್ರೈನರ್ ಶ್ರೀಮತಿ ಕಾತ್ಯಾಯಿನಿ ಸಿ.ಎಸ್.
ಆಯೋಜಿಸಿದ್ದರು.
ಮುಖ್ಯ ಅತಿಥಿ ಗಳಾಗಿ
ಶ್ರೀ ವೀರೇಶಪ್ಪ ಜಿಲ್ಲಾ
ಸಹ ಕಾರ್ಯದರ್ಶಿ ಮತ್ತು
ಶ್ರೀಮತಿ ಮೀನಾಕ್ಷಿಮ್ಮ ಫ್ಲಾಕ್ ಲೀಡರ್ ಟ್ರೈನರ್ ಆಗಮಿಸಿದ್ದರು.ಶ್ರೀ ವೀರೇಶಪ್ಪ ನವರು ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಮಕ್ಕಳನ್ನು ಅಭಿನಂದಿಸಿ ಮಾತನಾಡುತ್ತಾ, ಮುಂದಿನ ಹಂತವಾದ ರಾಷ್ಟ್ರಪತಿ ಪುರಸ್ಕಾರ ಪ್ರಶಸ್ತಿ ಪತ್ರ ಪಡೆಯಲು ಅಗತ್ಯ ಮಾರ್ಗದರ್ಶನ ಮತ್ತು ತರಬೇತಿ ಪಡೆಯಬೇಕು.
ಸ್ಕೌಟಿಂಗ್ ಮಕ್ಕಳಿಗೆ ಸ್ವಯಂಶಿಸ್ತು, ಸಂಯಮ,ಸೇವಾ ಮನೋಭಾವನೆ ,ಜೀವನದ ಮೌಲ್ಯಗಳನ್ನು ಕಲಿಸುತ್ತದೆ ಎಂದು, ತಮ್ಮ ಸ್ಕೌಟಿಂಗ್ ಜೀವನದ ಅನುಭವಗಳನ್ನು ಹಂಚಿಕೊಂಡರು.
ಶ್ರೀಮತಿ ಮೀನಾಕ್ಷಿಮ್ಮ ನವರು ಕಬ್ಸ್ ಮತ್ತು
Bharat Scouts and Guides Shivamogga ಬುಲ್ ಬುಲ್ಸ್ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಶುಭಕೋರಿ ಮಾತನಾಡಿ, ಸಿಹಿಮೊಗ್ಗೆ ಓಪನ್ ಗ್ರೂಪ್ ಕಳೆದ 25 ವರ್ಷಗಳಿಂದ ಮಕ್ಕಳಿಗೆ ಸ್ಕೌಟಿಂಗ್ ತರಬೇತಿ ನೀಡುತ್ತಾ ಬಂದಿದೆ.ಓಪನ್ ಗ್ರೂಪ್ ಹುಟ್ಟುಹಾಕಿ ಬೆಳೆಸುವುದು ಸುಲಭದ ಕೆಲಸವಲ್ಲ. ತರಬೇತುದಾರರು ಇಲ್ಲದ ಶಾಲೆಯ ಸ್ಕೌಟಿಂಗ್ ನಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಇಲ್ಲಿ ತರಬೇತಿ ನೀಡುತ್ತಾರೆ .
ಒಂದೊಂದು ಮಗುವೂ ಒಬ್ಬೊಬ್ಬರನ್ನು ಸ್ಕೌಟಿಂಗ್ ನಲ್ಲಿ ಸೇರಿಸುವುದರ ಮೂಲಕ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.ಸಮಾಜಮುಖಿಯಾಗಿ ಸ್ಕೌಟಿಂಗ್ ಸೇವೆ ಮಾಡುತ್ತಿರುವ ಕಾತ್ಯಾಯಿನಿ ಯವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಅತಿಥಿಗಳಿಗೆ ಗೌರವಿಸಿ ಸನ್ಮಾನನಿಸಲಾಯಿತು.ಈ ಕಾರ್ಯಕ್ರಮ ದಲ್ಲಿ ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.
Bharat Scouts and Guides Shivamogga ರಾಜ್ಯ ಪುರಸ್ಕಾರ ಪಡೆದ ಮಕ್ಕಳು ರಾಷ್ಡ್ರಪತಿ ಪುರಸ್ಕಾರ ಪಡೆಯುವಂತೆ ಪ್ರೋತ್ಸಾಹಿಸಬೇಕು- ವೀರೇಶಪ್ಪ
Date:
