Rotary Club Shimoga ಒತ್ತಡದ ಜೀವನ ಶೈಲಿ, ಕೌಟುಂಬಿಕ ಸಮಸ್ಯೆ, ನಿರಾಸೆ ಸೇರಿದಂತೆ ಅನೇಕ ಕಾರಣಗಳು ಆತ್ಮಹತ್ಯೆಗೆ ದಾರಿಯಾಗುತ್ತಿವೆ ಎಂದು ಕವಿ, ಶಿಕ್ಷಕ ಹಸನ್ ಬೆಳ್ಳಿಗನೂಡು ಹೇಳಿದರು.
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಪ್ರಯುಕ್ತ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಅತಿಯಾದ ಮೊಬೈಲ್ ವೀಕ್ಷಣೆ ಮಾಡಬಾರದು. ಒಂಟಿತನ ಮನೋಭಾವದಲ್ಲಿ ಇರಬಾರದು. ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಸಮಸ್ಯೆಗಳಿದ್ದಲ್ಲಿ ಆಪ್ತರ ಬಳಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷ ಪ್ರಕಾಶ್ ಮೂರ್ತಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಸಂಬಂಧಗಳ ಬೆಲೆ ತಿಳಿಯದಿರುವುದು, ಒತ್ತಡ, ಮಾನಸಿಕ ಖಿನ್ನತೆ, ಇತರ ಮಕ್ಕಳೊಂದಿಗೆ ಹೋಲಿಕೆ ಮಾಡುವುದರಿಂದ ಆತ್ಮಹತ್ಯೆಗೆ ಪ್ರಚೋದನೆಯಾಗುತ್ತಿದೆ. ಪ್ರಸ್ತುತ ಅವಿಭಕ್ತ ಕುಟುಂಬಗಳ ಪ್ರೀತಿ, ಸಂಬಂಧ, ಸಹಾಯ, ಮಾನವೀಯ ಮೌಲ್ಯಗಳು ಇಂದಿಗೆ ಅವಶ್ಯಕವೆನಿಸಿದೆ ಎಂದು ತಿಳಿಸಿದರು.
Rotary Club Shimoga ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಜತೆಯಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವಿವಿಧ ವಿಷಯಗಳ ಬಗ್ಗೆ ಜನರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರೋಟರಿ ಜಿಲ್ಲಾ ಮಾಜಿ ಗವರ್ನರ್ ರವಿ ಮಾತಾನಾಡಿ, 26-27ನೇ ಸಾಲಿನ ಅಂತರಾಷ್ಟ್ರೀಯ ಅಧ್ಯಕ್ಷರ ಬಗ್ಗೆ ವಿವರಿಸಿದರು. ವಲಯ ಸಂಯೋಜಕಿ ಮಂಜುಳಾ ರಾಜು ಪ್ರಾರ್ಥನೆ ಮಾಡಿದರು. ಚನ್ನಯ್ಯ ನಿರೂಪಣೆ ಮಾಡಿದರು. ಗೀತ ಗಾಯನದ ಮೂಲಕ ರಂಜಿಸಿದರು. ರಶ್ಮಿ ವಂದನಾರ್ಪಣೆ ಮಾಡಿದರು. ಎಲ್ಲ ರೋಟರಿ ಸದಸ್ಯರು ಉಪಸ್ಥಿತರಿದ್ದರು.
Rotary Club Shimoga ಅತಿಯಾದ ಮೊಬೈಲ್ ವೀಕ್ಷಣೆ ಒಳ್ಳೆಯದಲ್ಲ.-ಹಸನ್ ಬೆಳ್ಳಿಗನೂಡು
Date:
