Kote Sri Marikamba Temple ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಸಭಾಭವನದಲ್ಲಿ ಶ್ರೀ ವಿದ್ಯಾಗಣಪತಿ ಸೇವಾ ಸಂಘದಿಂದ ಆಯೋಜಿಸಿದ್ದ 78ನೇ ವಾರ್ಷಿಕ ಮಹೋತ್ಸವ ಕಾರ್ಯಕ್ರಮದಲ್ಲಿ ಉಸ್ತಾದ್ ಹುಮಾಯೂನ್ ಹರ್ಲಾಪುರ್ ಅವರ ಶಿಷ್ಯರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
78ನೇ ವಾರ್ಷಿಕ ಮಹೋತ್ಸವ ಪ್ರಯುಕ್ತ ವಿದ್ಯಾ ಗಣಪತಿ ವೇದಿಕೆಯಲ್ಲಿ ಪಂಡಿತ್ ಕುಮಾರ್ ಅವರ ಶಿಷ್ಯೆ ನಿವೇದಿತಾ ವಿಕಾಸ್ ಅವರಿಂದ ಒಂದೂವರೆ ಗಂಟೆಗೂ ಹೆಚ್ಚು ಸಮಯ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆದು ಅಪಾರ ಜನ ಮೆಚ್ಚುಗೆಗೆ ಪಾತ್ರವಾಯಿತು.
Kote Sri Marikamba Temple ಕಾರ್ಯಕ್ರಮದಲ್ಲಿ ತಬಲವಾದಕರಾಗಿ ವಿನಾಯಕ್ ಸಾಗರ್, ತಂಬೂರಿನಲ್ಲಿ ದಿಲ್ ಶಾದ್ ಹರ್ಲಾಪುರ್ ಸಾಥ್ ನೀಡಿದರು. ತುಂಬಾ ವಿಶೇಷವಾದ ಕಾರ್ಯಕ್ರಮದಲ್ಲಿ ಸಮಿತಿ ಉಪಾಧ್ಯಕ್ಷ ಶಂಕರ್ ನಾರಾಯಣ ಶಾಸ್ತ್ರಿ ಎಚ್.ಆರ್. ಕಲಾವಿದರಿಗೆ ಸನ್ಮಾನ ಮಾಡಿ ಗೌರವ ಸಮರ್ಪಣೆ ಮಾಡಿದರು.
