Rotary Club Shimoga ದಿನಾಂಕ 09.09.2025, ಬೆಳಿಗ್ಗೆ 9:09 ನಿಮಿಷಕ್ಕೆ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ವಿನೋಬನಗರ ಪೊಲೀಸ್ ಚೌಕಿ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಯಿತು. ರೋಟರಿ ಡಿಸ್ಟ್ರಿಕ್ಟ್ ಪಬ್ಲಿಕ್ ಇಮೇಜ್ ಚೇರ್‍ಮನ್ ಡಾ. ಸೌಮ್ಯ ಮಣಿ ರವರ ಆಶಯದಂತೆ ನಗರದಲ್ಲಿನ ಪ್ರಮುಖ ವಾಹನ ದಟ್ಟಣೆ ಇರುವ ಪೋಲಿಸ್ ಚೌಕಿ ಸರ್ಕಲ್‌ನಲ್ಲಿ ರಸ್ತೆ ಸುರಕ್ಷತಾ ಸ್ಟಿಕ್ಕರ್ ಬಿಡುಗಡೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಆಟೋ ಹಾಗೂ ಬಸ್ ಚಾಲಕರಿಗೆ ಟ್ರಾಫಿಕ್ ನಿಯಮ ಪಾಲನೆಯ ಅವಶ್ಯಕತೆ, ಜವಾಬ್ದಾರಿಯುತ ಚಾಲನೆ ಹಾಗೂ ರಸ್ತೆ ಸುರಕ್ಷತೆಯ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷರಾದ ಕೆ.ಎಸ್.ವಿಶ್ವನಾಥ ನಾಯಕ ಅವರು,
“ಚಾಲಕನು ಕೇವಲ ವಾಹನವನ್ನು ಮಾತ್ರ ನಡೆಸುವುದಿಲ್ಲ, ಅವರು ಅನೇಕ ಕುಟುಂಬಗಳ ಜೀವವನ್ನು ಸುರಕ್ಷಿತವಾಗಿ ಸಾಗಿಸುತ್ತಾರೆ. ರಸ್ತೆ ನಿಯಮ ಪಾಲನೆ ಮಾಡುವ ಪ್ರತಿಯೊಬ್ಬ ಚಾಲಕ ಸಮಾಜದ ಜೀವ ರಕ್ಷಕ. ಇಂತಹ ಚಾಲಕರಿಗೆ ಸಮಾಜದಿಂದ ಗೌರವ ದೊರೆಯುವುದು ಅವರ ಹಕ್ಕು” ಎಂದು ಅಭಿಪ್ರಾಯಪಟ್ಟರು.
ಸಹಾಯಕ ಗವರ್ನರ್ ಕೆ.ಪಿ. ಶೆಟ್ಟಿ ಅವರು,
“ಚಾಲಕನು ಸಮಾಜದ ನಾಡಿಯಂತೆ. ಅವರ ನಿಷ್ಠಾವಂತ ಸೇವೆಯಿಂದಲೇ ಸಾಮಾನ್ಯ ಜನರ ಬದುಕು ಚಲಿಸುತ್ತದೆ. ಪ್ರತಿಯೊಬ್ಬ ಚಾಲಕ ತನ್ನ ಕೆಲಸವನ್ನು ಸೇವೆ ಎಂದು ಕಂಡುಕೊಂಡಾಗ ಅವರು ಸಮಾಜದ ಶ್ರೇಷ್ಠ ದೀಪಸ್ತಂಭರಾಗುತ್ತಾರೆ” ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.
ವಿನೋಬನಗರ ಆಟೋ ಚಾಲಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಹ ಹಾಜರಿದ್ದು, “ನಮ್ಮ ಸೇವೆಯನ್ನು ಗುರುತಿಸಿ ಗೌರವಿಸಿರುವ ರೋಟರಿ ರಿವರ್‌ಸೈಡ್ ಕ್ಲಬ್‌ಗೆ ನಾವು ಚಿರಕೃತಜ್ಞರಾಗಿದ್ದೇವೆ” ಎಂದು ಹೇಳಿದರು.
Rotary Club Shimoga ಅನೇಕ ಆಟೋ ಚಾಲಕರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, “ಚಾಲಕನು ಸಮಾಜದ ಜೀವನಾಡಿ” ಎಂಬ ಸಂದೇಶ ಎಲ್ಲರ ಮನದಲ್ಲಿ ನಾಟುವಂತಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ನ ಅಧ್ಯಕ್ಷರು ಮತ್ತು ಕಾರ್ಯದರ್ಶಿ, ಸದಸ್ಯರುಗಳಾದ ಎಂ.ಪಿ. ಆನಂದ್ ಮೂರ್ತಿ, ಸಿ.ಎನ್ .ಮಲ್ಲೇಶ್ , ದೇವೇಂದ್ರಪ್ಪ, ಎಸ್. ಪಿ. ಶಂಕರ್, ಮರಿಸ್ವಾಮಿ, ಸುಂದರ್, ಎಂ. ಆರ್. ಬಸವರಾಜ್, ರವಿ ಎಂ.ಎಂ. , ಸೋಲಾರ್ ಮಂಜುನಾಥ್, ರಾಕೇಶ್, ಜೈಪ್ರಕಾಶ್, ಶಾಮ್ ಹಾಗೂ ಇತರ ಸದಸ್ಯರುಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟಿರುತ್ತಾರೆ.
