JCI Sahyadri Unit ವಿದ್ಯಾಭ್ಯಾಸದಲ್ಲಿ ಎಷ್ಟೇ ಸಾಧನೆ ಮಾಡಿದರು ಪರಿಪೂರ್ಣತೆ ಸಾಧಿಸಲು ವ್ಯಕ್ತಿತ್ವ ವಿಕಸನಗೊಳ್ಳಲು ಹಾಗೂ ಮನೋವಿಕಾಸ ಹೊಂದಲು ಜಿ ಸಿ ಐ ಸಂಸ್ಥೆಗಳ ತರಬೇತಿ. ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕು ಚೆಲ್ಲುತ್ತದೆ ಎಂದು ಜೆಸಿಐ ಸಹ್ಯಾದ್ರಿ ಘಟಕದ ಅಧ್ಯಕ್ಷರಾದ ಜಿ ವಿ ಗಣೇಶ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ನಗರದ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ವ್ಯಕ್ತಿತ್ವ ವಿಕಸನ. ದೊಡ್ಡ ದೊಡ್ಡ ಹುದ್ದೆಗಳಿಗೆ ಸಂದರ್ಶನದ ಪೂರ್ವಭಾವಿಸಿದ್ದತೆ ಹಾಗೂ ಜೀವನ ಕೌಶಲ್ಯಗಳ ತರಬೇತಿ ಕಾರ್ಯಕ್ರಮನ ಉದ್ಘಾಟಿಸಿ ಮಾತನಾಡಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಷ್ಟು ವಿಷಯಗಳನ್ನು ತಿಳಿದುಕೊಂಡರುವ ಸಾಲದು ಪ್ರತಿದಿನ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ ಹಾಗೆ ತಂತ್ರಜ್ಞಾನವು ಸಾಕಷ್ಟ ಮುಂದುವರೆದಿದೆ. ಅದಕ್ಕೆ ತಕ್ಕಂತೆ ನಾವು ಹೊಂದಿಕೊಳ್ಳಲೇ ಬೇಕು ಎಂದು ನುಡಿದರು. ಇದೇ ಸಂದರ್ಭದಲ್ಲಿ ಜೆಸಿಐ ಸಂಸ್ಥೆಯ ವಲಯ ತರ್ಬೇತುದಾರರಾದ ಜೆಸಿ ನಿವೇದಿತಾ ವಿಕಾಸ ಅವರು ವಿದ್ಯಾರ್ಥಿಗಳಿಗೆ ಇಂಟರ್ವ್ಯೂ ಸ್ಕೀಲ್ಸ್. ಹಾಗೂ ಜೀವನ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. JCI Sahyadri Unit ಕಾರ್ಯಕ್ರಮದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷರಾದ ನೆಫ್ಚುನ್ ಕಿಶೋರ್ ರವರು ಸಂದರ್ಶನಗಳನ್ನು ಹೇಗೆ ಎದುರಿಸಬೇಕು ಹಾಗೂ ಅದರ ಬಗ್ಗೆ ಪೂರ್ವಭಾವಿ ಸಿದ್ಧತೆಗಳು ಮತ್ತು ಅಭ್ಯಾಸಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಡಾಕ್ಟರ್ ಧನಂಜಯ.ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಮಮತಾ ಪಿ ರಾವ್.. ಸ್ಮಿತಾ… ಗಂಗಪ್ಪ. ಸುನಿಲ್ ನಲ್ಲೂರು ಹಾಗೂ ಜೆಸಿಐ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು
JCI Sahyadri Unit ವ್ಯಕ್ತಿತ್ವ & ಮನೋವಿಕಸನಕ್ಕೆ ಜೆಸಿಐ ಸಂಸ್ಥೆ ತರಬೇತಿ-ಜಿ.ವಿ.ಗಣೇಶ್
Date:
