Saturday, May 23, 2026
Saturday, May 23, 2026

Rabindra Kalakshetra ಬೆಂಗಳೂರಿನ ಯಕ್ಷಗಾನ ರಸಿಕರಿಗೆ “ಯಕ್ಷಗಾನ ಸಂಭ್ರಮ”

Date:

Rabindra Kalakshetra ಬೆಂಗಳೂರಿನ ಯಕ್ಷ ರಸಿಕರಿಗಾಗಿ ಯಕ್ಷಗಾನದ ಮೇರು ಕಲಾವಿದರನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವಾಗಿ, ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಶನಿವಾರ ರಾತ್ರಿ 9:10ರಿಂದ ಆರಂಭಗೊಳ್ಳುವ “ತಿತ್ತಿತೈ–ಯಕ್ಷ ಪರ್ವ 2025” ಪ್ರೇಕ್ಷಕರಿಗೆ ಅಪರೂಪದ ಯಕ್ಷಗಾನ ಸಂಭ್ರಮವನ್ನು ನೀಡಲು ಸಜ್ಜಾಗಿದೆ.

ಈ ವಿಶೇಷ ಯಕ್ಷಪರ್ವದಲ್ಲಿ ಮೂರು ಪ್ರಸಂಗಗಳನ್ನು ಭಿನ್ನತೆಯೊಂದಿಗೆ ಆಯೋಜಿಸಲಾಗಿದೆ.

ಮೊದಲ ಪ್ರಸಂಗ “ದಮಯಂತಿ ಪುನಃ ಸ್ವಯಂವರ”. ಕೆರೆಮನೆ ಪರಂಪರೆಯ ಋತುಪರ್ಣ–ಬಾಹುಕ ಜೋಡಿ ಪ್ರಸಿದ್ಧವಾಗಿದ್ದ ಈ ಪ್ರಸಂಗದಲ್ಲಿ, ವರ್ತಮಾನದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ (ಬಾಹುಕ) ಮತ್ತು ಬಳ್ಕೂರು ಕೃಷ್ಣ ಯಾಜಿ (ಋತುಪರ್ಣ) ಪ್ರಮುಖ ಪಾತ್ರಗಳಲ್ಲಿ ರಂಗವೇರುತ್ತಾರೆ.

ದಮಯಂತಿಯಾಗಿ ನೀಲ್ಕೋಡ್ ಶಂಕರ ಹೆಗಡೆ, ಸುದೇವ ಬ್ರಾಹ್ಮಣನಾಗಿ ಸಿದ್ಧಾಪುರ ಅಶೋಕ್ ಭಟ್, ಚೇದಿರಾಣಿಯಾಗಿ ಪಂಜು ಬಗ್ವಾಡಿ ಕಾಣಿಸಿಕೊಳ್ಳಲಿದ್ದಾರೆ. ಭಾಗವತಿಗಳಾಗಿ ಕೊಳಗಿ ಕೇಶವ ಹೆಗಡೆ ಮತ್ತು ಮೂಡುಬೆಳ್ಳೆ, ವಾದ್ಯದಲ್ಲಿ ಫಾಟಕ್–ಕುಂಜತ್ತಾಯರು ಜೋಡಿಯಾಗಲಿದ್ದಾರೆ.

ಎರಡನೇ ಪ್ರಸಂಗ “ಭೃಗು ಶಾಪ”. ಶ್ರೀಧರ್ ಡಿ.ಎಸ್. ರಚನೆಯ ಈ ಬಿರುಸಿನ ಪ್ರಸಂಗದಲ್ಲಿ ಪೆರ್ಮುದೆ, ಜಲವಳ್ಳಿ, ಸೀತಾರಾಮ ಕುಮಾರ್ ಮುಂತಾದವರು ಪಾತ್ರವಹಿಸಿದ್ದಾರೆ.

ಹಾಸ್ಯ, ವೀರ ರಸ ಹಾಗೂ ವಾಗ್ವಾದಗಳನ್ನು ಒಟ್ಟುಗೂಡಿಸಿರುವ ಈ ಆಖ್ಯಾನ ಪ್ರೇಕ್ಷಕರಿಗೆ ರಂಗಸ್ಥಳದ ಬಿಸಿತನವನ್ನು ನೀಡಲಿದೆ.

Rabindra Kalakshetra ಕೊನೆಯ ಪ್ರಸಂಗ “ಕೃಷ್ಣ ಸಂಕಲ್ಪ”. ತೀರ್ಥಹಳ್ಳಿ ಗೋಪಾಲ್ ಆಚಾರ್ ಮತ್ತು ಕೊಳಲಿ ಕೃಷ್ಣ ಶೆಟ್ಟಿ ಅವರ ಹಿರಿಯ ಜೋಡಿ ರಂಗೇರಲಿದ್ದು, ಭಾಮಿನಿ ವೇಷ, ಪದ್ಯ–ಚಂಡೆಯ ಜುಗಲ್ಬಂದಿ ವಿಶೇಷ ಆಕರ್ಷಣೆಯಾಗಲಿದೆ.

ಯಕ್ಷರಸಿಕರಿಗೆ ಇದು ನೈಜ ಯಕ್ಷಗಾನ ಸವಿನೆನಪನ್ನು ನೀಡುವ ಪರ್ವವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಂಪರ್ಕ: 6362673283

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga jyanendra ಉಪಲೋಕಾಯುಕ್ತರ ಅನಿಸಿಕೆ ಸರಿ. ರಾಜ್ಯದಲ್ಲಿ ಭ್ರಷ್ಠಾಚಾರದ ತಾಂಡವ- ಆರಗ ಜ್ಞಾನೇಂದ್ರ

Araga jyanendra ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂಬ ಉಪ ಲೋಕಾಯುಕ್ತ ಬಿ...

Backward Classes Welfare Department ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಆನ್ ಲೈನ್ ಅರ್ಜಿ ಆಹ್ವಾನ

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2026-27...

Nidhi Apke Nikat ಮೇ 27 .ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ನಿಧಿ ಆಪ್ ಕೆ ನಿಕಟ್ 2.0 ಕಾರ್ಯಕ್ರಮ

Nidhi Apke Nikat ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ ನಿಧಿ...

Shivamogga Police ಅನಾಮಧೇಯ ಶವದ ವಾರಸುದಾರರ ಪತ್ತೆಗೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ

Shivamogga Police ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಬಸ್...